– ಭಾರತಕ್ಕೆ ವಾಪಸ್ ಆಗುತ್ತಾಳಾ ಅಂಜು..?
ಇಸ್ಲಾಮಾಬಾದ್: ತನ್ನ ಫೇಸ್ಬುಕ್ (Facebook) ಗೆಳೆಯನನ್ನು ಮದುವೆ ಮಾಡಿಕೊಳ್ಳಲೆಂದು ಪತಿ ಹಾಗೂ ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ (Pakistan) ತೆರಳಿದ್ದಾಕೆಗೆ ಇದೀಗ ತನ್ನ ಮಕ್ಕಳನ್ನು ನೋಡುವ ಬಯಕೆಯಾಗಿದೆ.
ಈ ಸಂಬಂಧ ಅಂಜು ಪಾಕಿಸ್ತಾನದ ಪತಿ ನುಸ್ರುಲ್ಲಾ ಮಾತನಾಡಿದ್ದಾನೆ. ಅಂಜು ತಮ್ಮ ಮಕ್ಕಳನ್ನು ಭೇಟಿ ಮಾಡಲು ಭಾರತಕ್ಕೆ (India) ತೆರಳಲು ಕಾಯುತ್ತಿದ್ದಾಳೆ ಎಂದು ತಿಳಿಸಿದ್ದಾನೆ.
Advertisement
Advertisement
ತನ್ನ ಇಬ್ಬರು ಮಕ್ಕಳನ್ನು ಪ್ರತಿದಿನ ನೆನಪು ಮಾಡಿಕೊಂಡು ಅಂಜು ಮಾನಸಿಕವಾಗಿ ಕುಗ್ಗುತ್ತಿದ್ದಾಳೆ. ಹೀಗಾಗಿ ಭಾರತಕ್ಕೆ ಹೋಗಿ ಮಕ್ಕಳನ್ನು ಭೇಟಿ ಮಾಡಬೇಕು ಎಂದು ಪಟ್ಟುಹಿಡಿದಿದ್ದಾಳೆ. ಅಂತೆಯೇ ಎನ್ಒಸಿಇಗಾಗಿ (ನಿರಾಕ್ಷೇಪಣಾ ಪ್ರಮಾಣಪತ್ರ) ಅರ್ಜಿ ಸಲ್ಲಿಸಿದ್ದಾಳೆ. ಪಾಕಿಸ್ತಾನದ ಆಂತರಿಕ ಸಚಿವಾಲಯಾದಿಂದ ಇದಕ್ಕೆ ಅನುಮತಿ ಸಿಕ್ಕ ಕೂಡಲೇ ವಾಘಾ ಗಡಿ ಮೂಲಕ ಭಾರತಕ್ಕೆ ತೆರಳಿ ಮಕ್ಕಳನ್ನು ಭೇಟಿ ಮಾಡಿ ಮತ್ತೆ ಪಾಕಿಸ್ತಾನಕ್ಕೆ ಮರಳುತ್ತಾಳೆ ಎಂದು ಆತ ತಿಳಿಸಿದ್ದಾನೆ. ಇದನ್ನೂ ಓದಿ: ನಾಗರ ಹಾವು ಓಡಿಸಲು ಹೊಗೆ ಹಾಕಿದ ಕುಟುಂಬ- ಇಡೀ ಮನೆ ಭಸ್ಮ
Advertisement
Advertisement
ಸಾಮಾಜಿಕ ಜಾಲತಾಣ ಫೇಸ್ಬುಕ್ ಮೂಲಕ ಅಂಜುಗೆ ಪಾಕಿಸ್ತಾನದ ನುಸ್ರುಲ್ಲಾ ಪರಿಚಯವಾಗಿದೆ. ಈ ಪರಿಚಯವು ಪ್ರೇಮಕ್ಕೆ ತಿರುಗಿ ಆತನನ್ನು ಭೇಟಿ ಮಾಡಲು ಬಯಸುತ್ತಾಳೆ. ಅಂತೆಯೇ ತನ್ನಿಬ್ಬರು ಮಕ್ಕಳು ಹಾಗೂ ಪತಿಯನ್ನು ಬಿಟ್ಟು ಪಾಕ್ಗೆ ತೆರಳಿದ್ದಾಳೆ. ಇದೀಗ ಆಕೆ ತನ್ನ ಮಕ್ಕಳನ್ನು ನೋಡುವ ಹಂಬಲ ವ್ಯಕ್ತಪಡಿಸಿದ್ದಾಳೆ.
Web Stories