ಇಸ್ಲಾಮಾಬಾದ್: 74 ವರ್ಷಗಳ ನಂತರ ಕರ್ತಾರ್‌ಪುರದಲ್ಲಿ ಪಾಕಿಸ್ತಾನಿ ಸಹೋದರನನ್ನು ಭೇಟಿಯಾದ ಭಾರತೀಯನಿಗೆ ಪಾಕಿಸ್ತಾನ ವೀಸಾ ಸಿಕ್ಕಿದೆ.
Advertisement
1947ರಲ್ಲಿ ಭಾರತ ಹಾಗೂ ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಮೊಹಮ್ಮದ್ ಸಿದ್ದಿಕ್ ಮತ್ತು ಅವರ ಹಿರಿಯ ಸಹೋದರ ಹಬೀಬ್ ಬೇರೆ ಆಗಿದ್ದರು. ಈ ವೇಳೆ ಇನ್ನೂ ಮಗುವಾಗಿದ್ದ ಮೊಹಮ್ಮದ್ ಸಿದ್ದಿಕ್ ಪಾಕಿಸ್ತಾನದಲ್ಲಿಯೇ ಉಳಿದುಕೊಂಡರು. ಆದರೆ ಹಬೀಬ್ ಅವರು ಭಾರತದಲ್ಲಿಯೇ ವಾಸಿಸುತ್ತಾ ಬೆಳೆದಿದ್ದರು. ಎರಡು ದೇಶಗಳ ಮಧ್ಯೆ ಹಂಚಿ ಹೋಗಿದ್ದ ಈ ಇಬ್ಬರು ಸಹೋದರರು ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್‍ನಿಂದ ಭಾರತಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರ್‌ಪುರ ಕಾರಿಡಾರ್ ನಲ್ಲಿ ಮತ್ತೆ ಒಂದಾಗಿದ್ದರು. ಇದನ್ನೂ ಓದಿ: 74 ವರ್ಷಗಳ ಬಳಿಕ ಮತ್ತೆ ಒಂದಾದ ಸಹೋದರರು – ಭಾವನಾತ್ಮಕ ವೀಡಿಯೋ ವೈರಲ್
Advertisement
Advertisement
74 ವರ್ಷಗಳ ಬಳಿ ಒಬ್ಬರನ್ನೊಬ್ಬರು ನೋಡಿದ ಸಹೋದರರು ಬಿಗಿದಪ್ಪಿಕೊಂಡು ಆನಂದದಿಂದ ಕಣ್ಣೀರು ಸುರಿಸಿರುವುದನ್ನು ವೀಡಿಯೋ ಈ ಹಿಂದೆ ವೈರಲ್ ಆಗಿತ್ತು. ಇದೀಗ ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಖಾನ್‍ಗೆ ಗಡಿಯಾಚೆಗಿನ ಅವರ ಸಹೋದರ ಮತ್ತು ಇತರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ವೀಸಾವನ್ನು ನೀಡಿದೆ. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಸೌಂದರ್ಯ – ಬಿಎಸ್‌ವೈ ಸೇರಿ ಕುಟುಂಬಸ್ಥರಿಂದ ಅಂತ್ಯಕ್ರಿಯೆ
Advertisement
Sika Khan also met with CDA Aftab Hasan Khan and interacted with Mission’s officers. He appreciated his interaction and thanked the CDA for the cooperation extended to him. pic.twitter.com/ZS4zSpia9j
— Pakistan High Commission India (@PakinIndia) January 28, 2022
ಟ್ವೀಟ್‍ನಲ್ಲಿ ಏನಿದೆ?: ಪಾಕಿಸ್ತಾನದ ಹೈಕಮಿಷನ್ ಸಿಕಾ ಖಾನ್‍ಗೆ ಪಾಕಿಸ್ತಾನದಲ್ಲಿರುವ ತನ್ನ ಸಹೋದರ, ಮುಹಮ್ಮದ್ ಸಿದ್ದಿಕ್ ಮತ್ತು ಇತರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ವೀಸಾವನ್ನು ನೀಡುತ್ತದೆ. 1947ರಲ್ಲಿ ಬೇರ್ಪಟ್ಟ ಇಬ್ಬರು ಸಹೋದರರು 74 ವರ್ಷಗಳ ನಂತರ ಕರ್ತಾರ್‌ಪುರ ಸಾಹಿಬ್ ಕಾರಿಡಾರ್‌ನಲ್ಲಿ ಇತ್ತೀಚೆಗೆ ಮತ್ತೆ ಒಂದಾದರು ಎಂದಿ ಟ್ವೀಟ್ ಮಾಡಿ ತಿಳಿಸಿದೆ.
The story of the two brothers is a powerful illustration of how the historic opening of the visa-free Kartarpur Sahib Corridor in November 2019 by Pakistan is bringing people closer to each other. pic.twitter.com/pqdMJsDIgC
— Pakistan High Commission India (@PakinIndia) January 28, 2022
2019ರ ನವೆಂಬರ್ನಲ್ಲಿ ಪಾಕಿಸ್ತಾನವು ವೀಸಾ ಮುಕ್ತ ಕರ್ತಾರ್‌ಪುರ ಸಾಹಿಬ್ ಕಾರಿಡಾರ್‌ನ ಐತಿಹಾಸಿಕ ಉದ್ಘಾಟನೆಯು, ಜನರನ್ನು ಪರಸ್ಪರ ಹೇಗೆ ಹತ್ತಿರ ತರುತ್ತಿದೆ ಎಂಬುದಕ್ಕೆ ಇಬ್ಬರು ಸಹೋದರರ ಕಥೆಯು ಪ್ರಬಲ ನಿದರ್ಶನವಾಗಿದೆ ಎಂದು ಹೈಕಮಿಷನ್ ಟ್ವೀಟ್‍ನಲ್ಲಿ ತಿಳಿಸಿದೆ.