ಬೆಳಗಾವಿ: ನಗರದ ಬಾಪಟ್ ಗಲ್ಲಿಯಲ್ಲಿರುವ ಶಾಹಿ ಮಸೀದಿಯನ್ನು ಬ್ರಾಹ್ಮಣರು, ಮುಸ್ಲಿಮರು ಸೇರಿಯೇ ಕಟ್ಟಿದ್ದಾರೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ದಸ್ತಗೀರ್ ಅಗಾ ಹೇಳಿದರು.
Advertisement
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಪಟ್ ಅನ್ನುವುದು ಬ್ರಾಹ್ಮಣ ಮನೆತನದ ಹೆಸರು. ಬಾಪಟ್ ಗಲ್ಲಿಯಲ್ಲಿ ಈ ಮೊದಲು ವಾತಾವರಣ ಬಹಳ ಕೆಟ್ಟಿತ್ತು. ಇಂತಹ ಕೆಟ್ಟ ವಾತಾವರಣ ಅಳಿಸಿ ಹಾಕಲು ಎಲ್ಲರೂ ಪ್ರಯತ್ನಿಸಿದ್ದರು. ಬ್ರಾಹ್ಮಣರು-ಮುಸ್ಲಿಮರು ಸೇರಿ ಶಾಹಿ ಮಸೀದಿ ಕಟ್ಟಿದ್ದಾರೆ ಎಂದು ಮಾಹಿತಿ ನೀಡಿದರು. ಭಾರತೀಯ ಶಿಲ್ಪಿಗಳು ಮಸೀದಿ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಧರ್ಮಗಳ ಮಧ್ಯೆ ಸಂಘರ್ಷ ತರುವುದು ಒಳ್ಳೆಯದಲ್ಲ. ನಾವು ಸಹ ಇಂದು ಅಥವಾ ನಾಳೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗುತ್ತೇವೆ. ಮಸೀದಿ ಕುರಿತಂತೆ ಶಾಸಕ ಅಭಯ್ ಪಾಟೀಲ್ ಮನವಿ ತಿರಸ್ಕರಿಸುವಂತೆ ಕೋರುತ್ತೇವೆ ಎಂದರು. ಇದನ್ನೂ ಓದಿ: ಕಣ್ಣು ಮಂಕಾಗ್ತಿದೆ, ಬೆರಳು ಅಲುಗಾಡ್ತಿದೆ – ಪುಟಿನ್ ಬದುಕಿರೋದು ಇನ್ನೂ ಮೂರೇ ವರ್ಷ!
Advertisement
Advertisement
ಬಿಜೆಪಿ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸಲು ವಿಫಲವಾಗಿದೆ. ತೈಲ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ನಿವಾರಿಸಲು ವಿಫಲವಾಗಿದೆ. ಇಂತಹ ವಿಷಯಗಳನ್ನು ಮುಚ್ಚಿಡಲು ಮಂದಿರ, ಮಸೀದಿ ವಿವಾದಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ. ಅಭಯ್ ಪಾಟೀಲ್ ರಾಜಕೀಯ ಲಾಭಕ್ಕಾಗಿ ಆರೋಪ ಮಾಡುತ್ತಿದ್ದಾರೆ. 10 ತಿಂಗಳಲ್ಲಿ ಚುನಾವಣೆ ಬರುವುದಿದೆ. ಹೀಗಾಗಿ ಇಂತಹ ವಿಚಾರ ಮುಂದೆ ತರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಜೆಡಿಎಸ್‍ಗೆ ಸಿದ್ದರಾಮಯ್ಯ ಚೆಕ್ – ಬಿಜೆಪಿಗೆ ಕುದುರುತ್ತಾ ಲಕ್?