13 ಗಂಟೆಯಲ್ಲಿ ಶ್ರೀಲಂಕಾದಿಂದ ತಮಿಳುನಾಡಿಗೆ ಸ್ವಿಮ್ಮಿಂಗ್ ಮಾಡಿದ 13ರ ಬಾಲಕಿ

Public TV
1 Min Read
Jiya Rai

ಚೆನ್ನೈ: ಕೇವಲ 13 ಗಂಟೆಗಳಲ್ಲಿ ಶ್ರೀಲಂಕಾದ ತಲೈಮನ್ನಾರ್‍ನಿಂದ ತಮಿಳುನಾಡಿನ ಧನುಷ್ಕೋಡಿಯ ಅರಿಚಲ್ಮುನೈವರೆಗೆ 28.5 ಕಿ.ಮೀ ಸ್ವಿಮ್ಮಿಂಗ್ ಮಾಡಿದ ಮುಂಬೈ ಮೂಲದ 13 ವರ್ಷದ ಬಾಲಕಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಜಿಯಾ ರೈ ನೌಕಾಪಡೆಯ ಅಧಿಕಾರಿಯೊಬ್ಬರ ಮಗಳಾಗಿದ್ದು, ಶ್ರೀಲಂಕಾ ಮತ್ತು ಭಾರತೀಯ ಅಧಿಕಾರಿಗಳಿಂದ ಅನುಮತಿಯನ್ನು ಪಡೆದು ಮಾರ್ಚ್ 20ರ ಭಾನುವಾರ ಬೆಳಗ್ಗೆ 4.22ಕ್ಕೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿ ನಂತರ ಸಂಜೆ 5.32ರ ಹೊತ್ತಿಗೆ ಅರಿಚಲ್ಮುನೈ ತಲುಪಿದ್ದಾರೆ. ಇದನ್ನೂ ಓದಿ: ‘ಶಾಸಕನ ಮೊಮ್ಮಗ’ ಎನ್ನುವುದೇ ಬೈಕ್ ನಂಬರ್ ಪ್ಲೇಟ್!

ಈ ವೇಳೆ ಹಾಜರಿದ್ದ ತಮಿಳುನಾಡು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸೈಲೇಂದ್ರ ಬಾಬು ಅವರು, ಈ ಸಮುದ್ರದಲ್ಲಿ ಹಾವುಗಳು, ಶಾರ್ಕ್‍ಗಳು ಮತ್ತು ಜೆಲ್ಲಿ ಮೀನುಗಳು ಹೆಚ್ಚಾಗಿದೆ. ಅಲ್ಲದೆ ಈ ನೀರಿನ ಪ್ರವಾಹವನ್ನು ನೀವು ಊಹಿಸಲು ಸಾಧ್ಯವಿಲ್ಲ. ಆದರೆ ಜಿಯಾ ರೈ ಈ ನೀರಿನಲ್ಲಿ ಸ್ವಿಮ್ಮಿಂಗ್ ಮಾಡಿದ್ದಾಳೆ ಎಂದರೆ ಖಂಡಿತವಾಗಿಯೂ ಪ್ರಶಂಶಿಸಬೇಕು ಎಂದು ಅವರ ತಂದೆ, ತಾಯಿಯ ಬಳಿ ಶ್ಲಾಘಿಸಿದ್ದಾರೆ.

ಜಿಯಾ ರೈ ಸ್ವಿಮ್ಮಿಂಗ್ ಮಾಡುವ ವೇಳೆ ಶ್ರೀಲಂಕಾದ ನೌಕಾಪಡೆಯು ಭಾರತೀಯ ಕರಾವಳಿ ಭದ್ರತಾಪಡೆಯು ಸ್ವಾಧೀನಪಡಿಸಿಕೊಳ್ಳುವ ಅಂತರಾಷ್ಟ್ರೀಯ ಕಡಲ ಗಡಿಯವರೆಗೆ ರಕ್ಷಣೆ ನೀಡಿದೆ. ಇದನ್ನೂ ಓದಿ: 2.8 ಕೋಟಿ ಸಾಗಾಟ -ಸಿಕ್ಕಿ ಬಿದ್ದ ಮಾಜಿ ಸಂಸದನ ಪತ್ನಿ

Share This Article