ಬೀದರ್ : ಉಕ್ರೇನ್‍ನಲ್ಲಿ ಕರ್ನಾಟಕ ಮೂಲದ ನವೀನ್ ಸಾವಿನ ಬೆನ್ನಲ್ಲೇ ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದ್ದು ಬೀದರ್ ಮೂಲದ ಶಶಾಂಕ್ ಹಾಗೂ ವಿವೇಕ್ ಇನ್ನೂ ಖಾರ್ಕಿವ್‍ನಲ್ಲೇ ಸಿಲುಕಿರುವುದು ಆತಂಕಕ್ಕೆ ಕಾರಣವಾಗಿದೆ.
ಆತಂಕದಲ್ಲಿ ನಿನ್ನೆ ಖಾರ್ಕಿವ್‍ನಿಂದ ರೈಲ್ವೆ ಸ್ಟೇಷನ್‍ಗೆ ಹೋಗಿ ರೈಲು ಸಿಗದ ಕಾರಣ ಅಲ್ಲಿಂದ ಖಾರ್ಕಿವ್‍ನ ಪಿಶೋಚಿನ್‍ಗೆ ನಡೆದುಕೊಂಡು ಹೋಗಿ ತಂಗಿದ್ದಾರೆ. ಕ್ಷಿಪಣಿ, ಮಿಸೈಲ್ ಗಳ ಸ್ಫೋಟ, ಟ್ಯಾಂಕರ್ ಸದ್ದಿನ ನಡುವೆ ಜೀವ ಭಯದಲ್ಲಿಯೇ 40 ಕಿಲೋ ಮೀಟರ್ ನಡೆದುಕೊಂಡು ಹೋಗುತ್ತಾ ವಿದ್ಯಾರ್ಥಿಗಳು ಪಿಶೋಚಿನ್ ನಗರ ತಲುಪಿದ್ದಾರೆ. ಇದನ್ನೂ ಓದಿ: ನಮಗೆ ಇನ್ನೂ ಐದು ವರ್ಷ ಕೊಡಿ : ಅಮಿತ್ ಶಾ
ಯುದ್ಧದ ನಡುವೆ ನಡೆಯುತ್ತಾ ಸಾಗಿದ ರೋಚಕದ ಬಗ್ಗೆ ವೀಡಿಯೋ ಕಾಲ್‍ನಲ್ಲಿ ತಾಯಿ ಜೊತೆ ಶಶಾಂಕ್ ಹಂಚಿಕೊಂಡಿದ್ದಾರೆ. ಇನ್ನೂ ಉಳಿದ ಅಮಿತ್ ಬಹುತೇಕ ಸೇಫಾಗಿದ್ದು ಖಾರ್ಕಿವ್‍ನಿಂದ ರೈಲು ಮೂಲಕ ಲ್ವಿವ್, ಲ್ವಿವ್ ಟೂ ಪೋಲ್ಯಾಂಡ್ ಕಡೆಯಿಂದ ಬರುತ್ತಿದ್ದಾರೆ. ಇದನ್ನೂ ಓದಿ: ವೆಲ್ ಕಮ್ ಬ್ಯಾಕ್! ನಿಮ್ಮ ಕುಟುಂಬಗಳು ನಿಮಗಾಗಿ ಉಸಿರು ಬಿಗಿಹಿಡಿದು ಕಾಯುತ್ತಿವೆ: ಸ್ಮೃತಿ ಇರಾನಿ
ಬಸವಕಲ್ಯಾಣದ ವೈಷ್ಣವಿ ಕೂಡಾ ಖಾರ್ಕಿವ್ ನಿಂದ ರೈಲು ಮೂಲಕ ಹಂಗೇರಿಗೆ ಬಂದು ಸೇಫಾಗಿದ್ದು ಖಾರ್ಕಿವ್‍ನಲ್ಲಿಯೇ ಉಳಿದಿದ್ದಾರೆ. ಇದರಿಂದ ಇಬ್ಬರು ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ರಷ್ಯಾದ ಯುದ್ಧನೌಕೆಗಳು ಕ್ರೈಮಿಯಾವನ್ನು ಬಿಟ್ಟು ಒಡೆಸ್ಸಾದತ್ತ ಹೋಗುತ್ತಿವೆ: ಅಮೇರಿಕ