ಹೈದರಾಬಾದ್: ಕುಡಿದು ಕಾರು ಓಡಿಸುತ್ತಿದ್ದ ಚಾಲಕನೊಬ್ಬ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಭಾರತೀಯ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ನ್ಯೂಜಿಲ್ಯಾಂಡ್ ನಲ್ಲಿ ನಡೆದಿದೆ.
29 ವರ್ಷದ ಸೈಯ್ಯದ್ ಅಬ್ದುಲ್ ರಹೀಮ್ ಫಹದ್ ಅಪಘಾತದಲ್ಲಿ ಮೃತಪಟ್ಟ ಭಾರತೀಯ ವಿದ್ಯಾರ್ಥಿ. ಮೂಲತಃ ಹೈದರಾಬಾದ್‍ನವರಾದ ಫಹದ್ ನ್ಯೂಜಿಲ್ಯಾಂಡ್‍ನ ಆಕ್‍ಲ್ಯಾಂಡ್ ನಲ್ಲಿ ಓದುತ್ತಿದ್ದು, ವಿದ್ಯಾಭ್ಯಾಸದ ಜೊತೆ ಟ್ಯಾಕ್ಸಿ ಚಾಲಕನಾಗಿ ಪಾರ್ಟ್ ಟೈಮ್ ಕೆಲಸವನ್ನು ಮಾಡುತ್ತಿದ್ದರು ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.
Advertisement
Advertisement
ಚಾಲಕನೊಬ್ಬ ಕುಡಿದು ಕಾರು ಚಾಲಯಿಸುತ್ತಿದ್ದು, ಅತೀ ವೇಗವಾಗಿ ಟ್ರಾಫಿಕ್ ಸಿಗ್ನಲ್ ದಾಟಿ ಸೈಯ್ಯದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ಸೈಯ್ಯದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ವಿಷಯವನ್ನ ಭಾನುವಾರ ಬೆಳಗ್ಗೆ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರೋ ಸಂಬಂಧಿಯೊಬ್ಬರು ತಿಳಿಸಿದ್ದಾಗಿ ಸೈಯ್ಯದ್ ಸಹೋದರ ಸಂಬಂಧಿ ಫೈಜಲ್ ತಿಳಿಸಿದ್ದಾರೆ.
Advertisement
ಸೈಯ್ಯದ್ ಕುಟುಂಬ ಹೈದರಾಬಾದ್‍ನ ಚಂಚಲಗೂಡ ನಗರದಲ್ಲಿ ವಾಸಿಸುತ್ತಿದ್ದು, ಸೈಯ್ಯದ ದೇಹವನ್ನು ಹೈದರಾಬಾದ್‍ಗೆ ತರಲು ಮತ್ತು ಹಣಕಾಸಿನ ಸಹಾಯ ಕೋರಿ ಕುಟುಂಬದವರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
Advertisement
ನಾವು ನ್ಯೂಜಿಲ್ಯಾಂಡಿನ ಭಾರತೀಯ ರಾಯಭೇರಿ ಅಧಿಕಾರಿಯನ್ನು ಭೇಟಿ ಮಾಡಿದ್ದೇವೆ ಎಂದು ಫೈಝಾಲ್ ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತೆಲಂಗಾಣ ಬಿಕೆಪಿ ಅಧ್ಯಕ್ಷ ಕೆ. ಲಕ್ಷ್ಮಣ್ ಕೂಡ ಸ್ವರಾಜ್ ಅವರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.