ಹ್ಯಾಮಿಲ್ಟನ್: ಕೆನಡಾದ (Canada) ಒಂಟಾರಿಯೊ ಪ್ರಾಂತ್ಯದ ಹ್ಯಾಮಿಲ್ಟನ್ನಲ್ಲಿ (Hamilton) ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿನಿ (Indian Student) ದಾರುಣವಾಗಿ ಸಾವನ್ನಪ್ಪಿದ್ದಾಳೆ. ಈ ಘಟನೆಯಲ್ಲಿ ವಿದ್ಯಾರ್ಥಿನಿ ಆಕಸ್ಮಿಕವಾಗಿ ಗುಂಡಿಗೆ ಗುರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಹ್ಯಾಮಿಲ್ಟನ್ನ ಕಿಂಗ್ ಸ್ಟ್ರೀಟ್ನಲ್ಲಿ ಗುರುವಾರ ರಾತ್ರಿ ಸಂಭವಿಸಿದ ಈ ಗುಂಡಿನ ದಾಳಿಯಲ್ಲಿ ಮೊಹಾಕ್ ಕಾಲೇಜಿನಲ್ಲಿ ಓದಿತ್ತಿದ್ದ 22 ವರ್ಷದ ಭಾರತೀಯ ವಿದ್ಯಾರ್ಥಿನಿ ಹರ್ಸಿಮ್ರತ್ ರಾಂಧವಾಗೆ (Harsimrat Randhawa) ಗುಂಡು ತಗುಲಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಜನಿವಾರ ಕತ್ತರಿಸಿದ್ದು ಬಹಳ ದೊಡ್ಡ ತಪ್ಪು: ಪರಮೇಶ್ವರ್
ಪ್ರಾಥಮಿಕ ತನಿಖೆಯಲ್ಲಿ ಕಪ್ಪು ಬಣ್ಣದ ಕಾರಿನ ಪ್ರಯಾಣಿಕನೊಬ್ಬ ಬಿಳಿ ಸೆಡಾನ್ ಕಾರಿನಲ್ಲಿದ್ದವರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ತಿಳಿದುಬಂದಿದೆ. ಬಳಿಕ ಎರಡೂ ವಾಹನಗಳು ಸ್ಥಳದಿಂದ ಹೊರಟುಹೋಯಿತು ಎಂದು ತಿಳಿದು ಬಂದಿದೆ. ಪೊಲೀಸರ ಪ್ರಕಾರ, ಈ ಗುಂಡಿನ ದಾಳಿಯು ಉದ್ದೇಶಿತ ಗುರಿಯಾಗಿರಲಿಲ್ಲ. ಘಟನೆಯ ಬಗ್ಗೆ ತನಿಖೆ ಆರಂಭವಾಗಿದ್ದು, ಶಂಕಿತರನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ತಂಡವೊಂದು ಕಾರ್ಯನಿರ್ವಹಿಸುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ಟೆಂಟ್ ಸಾಮಗ್ರಿ ಪೂರೈಸುತ್ತಿದ್ದ ಕಂಪನಿಯ ಗೊಡೋನ್ನಲ್ಲಿ ಅಗ್ನಿ ದುರಂತ
ಕೆನಡಾದ ಭಾರತೀಯ ದೂತಾವಾಸವು ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಸಂಪರ್ಕ ಸಾಧಿಸಿ ಸೂಕ್ತ ಸಹಾಯವನ್ನು ಒದಗಿಸುವುದಾಗಿ ತಿಳಿಸಿದೆ. ಈ ಘಟನೆಯಿಂದಾಗಿ ಕೆನಡಾದ ಭಾರತೀಯ ವಿದ್ಯಾರ್ಥಿ ಸಮುದಾಯದಲ್ಲಿ ಆತಂಕ ಮೂಡಿದ್ದು, ಸ್ಥಳೀಯ ಆಡಳಿತ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸುವ ಭರವಸೆ ನೀಡಿದೆ. ಇದನ್ನೂ ಓದಿ: ಬಿರುಗಾಳಿ ಸಹಿತ ಮಳೆ – ರೇಷ್ಮೆ ಗೂಡಿಗೆ ಸಿಡಿಲು ಬಡಿದು ರೈತ ಸಾವು