ಚೆನ್ನೈ: ಚೀನಾದಲ್ಲಿ (China) ಅನಾರೋಗ್ಯದಿಂದ ಭಾರತದ ವಿದ್ಯಾರ್ಥಿ (Indian Student) ಸಾವನ್ನಪ್ಪಿರುವ ಘಟನೆ ನಡೆದಿದ್ದು, ಯುವಕನ ಮೃತದೇಹ (Dead Body) ತರಿಸಿಕೊಳ್ಳಲು ಆತನ ಕುಟುಂಬಸ್ಥರು ವಿದೇಶಾಂಗ ಸಚಿವಾಲಯದ (Foreign Ministry) ಮೊರೆ ಹೋಗಿದ್ದಾರೆ.
ತಮಿಳುನಾಡು (Tamil Nadu) ಮೂಲದ ವಿದ್ಯಾರ್ಥಿ ಅಬ್ದುಲ್ ಶೇಖ್ (22) ಕಳೆದ 5 ವರ್ಷಗಳಿಂದ ಚೀನಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದರು. ಇತ್ತೀಚೆಗೆ ಅವರು ಭಾರತಕ್ಕೆ ಮರಳಿದ್ದರು. ಆದರೆ ಡಿಸೆಂಬರ್ 11 ರಂದು ಕಿಕಿಹಾರ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಇಂಟರ್ನ್‌ಶಿಪ್‌ಗಾಗಿ ಚೀನಾಗೆ ಮತ್ತೆ ತೆರಳಬೇಕಾಯಿತು. ಇದನ್ನೂ ಓದಿ: ಭೂತ ಬಿಡಿಸುವ ನೆಪದಲ್ಲಿ 14ರ ಬಾಲಕಿಯ ಮೇಲೆ ಅತ್ಯಾಚಾರ
Advertisement
Advertisement
ಚೀನಾಗೆ ತೆರಳಿದ ಬಳಿಕ ಅವರು 8 ದಿನಗಳ ಕ್ವಾರಂಟೈನ್ ಅನ್ನು ಪೂರ್ಣಗೊಳಿಸಿದರು. ಬಳಿಕ ಅವರು ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆಯುತ್ತಿದ್ದ ಸಂದರ್ಭ ಅನಾರೋಗ್ಯಕ್ಕೀಡಾದರು. ಬಳಿಕ ಅವರನ್ನು ತೀವ್ರ ನಿಗಾ ಘಟಕಕ್ಕೆ ಸೇರಿಸಲಾಯಿತು. ಆದರೆ ಅವರು ಅಲ್ಲಿ ಸಾವನ್ನಪ್ಪಿದ್ದಾರೆ.
Advertisement
ಇದೀಗ ಯುವಕನ ಮೃತದೇಹವನ್ನು ಭಾರತಕ್ಕೆ ಮರಳಿ ತರಿಸಿಕೊಳ್ಳಲು ಆತಕ ಕುಟುಂಬಸ್ಥರು ಪರದಾಡುತ್ತಿದ್ದಾರೆ. ಮೃತದೇಹವನ್ನು ಸ್ವದೇಶಕ್ಕೆ ತರಲು ಸಹಾಯ ಮಾಡುವಂತೆ ಅಬ್ದುಲ್ ಶೇಖ್ ಅವರ ಸಂಬಂಧಿಕರು ವಿದೇಶಾಂಗ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹಳಿ ತಪ್ಪಿದ ಸೂರ್ಯನಗರಿ ಎಕ್ಸ್‌ಪ್ರೆಸ್ ರೈಲಿನ 8 ಬೋಗಿಗಳು!