ಒಟ್ಟಾವಾ: ಕೆನಡಾದಲ್ಲಿ (Canada) ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದ ಭಾರತ ಮೂಲದ ವಿದ್ಯಾರ್ಥಿಯೊಬ್ಬ (Indian student) ಪಿಕಪ್ ಟ್ರಕ್‌ಗೆ (Pickup Truck) ಡಿಕ್ಕಿ ಹೊಡೆದು, ಎಳೆಯಲ್ಪಟ್ಟು ಭೀಕರವಾಗಿ ಸಾವನ್ನಪಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವರದಿಗಳ ಪ್ರಕಾರ, ಭೀಕರ ಅಪಘಾತ ಬುಧವಾರ ಸಂಭವಿಸಿದೆ. ಬಲಿಯಾದ ವಿದ್ಯಾರ್ಥಿಯ ಸೋದರಸಂಬಂಧಿ ಆತನ ಮೃತದೇಹವನ್ನು ಕಾರ್ತಿಕ್ ಎಂದು ಗುರುತಿಸಿದ್ದಾರೆ. ಕಾರ್ತಿಕ್ 2021ರಲ್ಲಿ ವಿದ್ಯಾಭ್ಯಾಸಕ್ಕಾಗಿ ಭಾರತದಿಂದ ಕೆನಡಾಗೆ ತೆರಳಿದ್ದ ಎನ್ನಲಾಗಿದೆ. ಇದನ್ನೂ ಓದಿ: ಹಳ್ಳಕ್ಕೆ ಉರುಳಿದ KSRTC ಬಸ್ – 12 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ
ಕಾರ್ತಿಕ್ ಶೆರಿಡನ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಆತನ ಸಾವಿಗೆ ಕಾಲೇಜು ಸಂತಾಪ ವ್ಯಕ್ತಪಡಿಸಿದೆ. ಆತನ ಕುಟುಂಬ, ಸ್ನೇಹಿತರು, ಗೆಳೆಯರು ಮತ್ತು ಪ್ರಾಧ್ಯಾಪಕರು ಕಂಬನಿ ಮಿಡಿದಿದ್ದಾರೆ. ಕಾರ್ತಿಕ್‌ನ ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಡೌನ್ ವಿತ್ ಕ್ಸಿ ಜಿನ್‌ಪಿಂಗ್.. ಲಾಕ್‌ಡೌನ್ ತೆಗೆಯಿರಿ – ಚೀನಾದಲ್ಲಿ ಭುಗಿಲೆದ್ದ ಜನಾಕ್ರೋಶ