ಒಟ್ಟಾವ: ವಿದೇಶಗಳಲ್ಲಿ ಜನಾಂಗೀಯ ದ್ವೇಷ (Racial hatred) ಮರುಕಳಿಸಿದ್ದು, ಕೆನಡಾದ (Canada) ಬ್ರಿಟಿಷ್ ಕೊಲಂಬಿಯಾದಲ್ಲಿ (British Columbia) ಭಾರತದ (India) ಸಿಖ್ (Sikh) ವಿದ್ಯಾರ್ಥಿಯ ಮೇಲೆ (Student) ಅಪರಿಚಿತ ವ್ಯಕ್ತಿಗಳ ಗುಂಪು ಶುಕ್ರವಾರ ಹಲ್ಲೆ ನಡೆಸಿದೆ.
ಗಗನ್‍ದೀಪ್ ಸಿಂಗ್ (21) ಹಲ್ಲೆಗೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಾತ್ರಿ ಅಂಗಡಿಯೊಂದಕ್ಕೆ ತೆರಳಿದ್ದ ಗಗನ್‍ದೀಪ್ ಸಿಂಗ್ ರಾತ್ರಿ 10.30ರ ವೇಳೆಗೆ ಬಸ್‍ನಲ್ಲಿ ಬರುತ್ತಿದ್ದ. ಈ ಸಂದರ್ಭದಲ್ಲಿ 10 ರಿಂದ 15 ಜನರ ಗುಂಪು ಆತನ ಮೇಲೆ ಹಲ್ಲೆ ನಡೆಸಿದೆ ಎಂದು ಕೌನ್ಸಿಲರ್ ಮೋಹಿನಿ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಚಾಕಲೇಟ್ ಆಮಿಷವೊಡ್ಡಿ 4ರ ಬಾಲಕಿ ಮೇಲೆ ಅತ್ಯಾಚಾರ
Advertisement
Advertisement
ಆತನನ್ನು ಹಿಂಬಾಲಿಸಿ ಧರಿಸದ್ದ ಪೇಟವನ್ನು ಕಿತ್ತೆಸೆದಿದ್ದಾರೆ. ಆತನ ಕಾಲು, ಕೈ ಹಾಗೂ ಪಕ್ಕೆಲುಬುಗಳಿಗೆ ಒದ್ದು, ತಲೆಕೂದಲನ್ನು ಹಿಡಿದೆಳೆದು ರಸ್ತೆ ಬದಿಗೆ ತಳ್ಳಿದ್ದಾರೆ ಎಂದು ಕೌನ್ಸಿಲರ್ ತಿಳಿಸಿದ್ದಾರೆ.
Advertisement
ನಂತರ ಆತನ ಸ್ನೇಹಿತರು ಸ್ಥಳಕ್ಕೆ ಬಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಭಾರತೀಯರು ಎಂಬ ಒಂದೇ ಕಾರಣದಿಂದ ಹಲ್ಲೆ ನಡೆದಿದೆ ಎಂದು ಕೌನ್ಸಿಲರ್ (Councillor) ಆರೋಪಿಸಿದ್ದಾರೆ.
Advertisement
ಕೆಲೋವ್ನಾದ ಆರ್‌ಸಿಎಂಪಿ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಹಾಗೂ ತಮ್ಮ ವ್ಯಾಪ್ತಿಯಲ್ಲಿ ಅಪರಾಧ ನಡೆದಿದ್ದಕ್ಕೆ ವಕ್ತಾರ ಕಾನ್ಸ್‌ಟೇಬಲ್ ಮೈಕ್ ಡೆಲ್ಲಾ ಪೋಲೆರಾ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: HDK `ಪಂಚರತ್ನ’ಯಾತ್ರೆ ಪಂಚರ್ ಆಗಿದೆ, ಕಾಂಗ್ರೆಸ್ಸಿಗೆ ಹೀನಾಯ ಸ್ಥಿತಿ ಬಂದಿದೆ – ಕಟೀಲ್ ಲೇವಡಿ