ನವದೆಹಲಿ: ಯುಎಸ್ ಫೆಡರಲ್ ಬ್ಯಾಂಕ್ (US Federal Reserve) ಹಣಕಾಸು ನೀತಿಯಿಂದಾಗಿ ಭಾರತದ ರೂಪಾಯಿ (Indian Rupee) ಮೌಲ್ಯ 2022ರ ವರ್ಷಾಂತ್ಯಕ್ಕೆ ಶೇ.11.3 ರಷ್ಟು ಕುಸಿತಕಂಡಿದೆ. ಈ ವರ್ಷಾಂತ್ಯಕ್ಕೆ ಅತೀ ಕೆಟ್ಟ ಸಾಮರ್ಥ್ಯ ತೋರಿದ್ದು, ಈ ಮೂಲಕ 2013ರ ನಂತರದಲ್ಲಿ ಅತಿಹೆಚ್ಚು ವಾರ್ಷಿಕ ಮೌಲ್ಯ ಕುಸಿತವಾಗಿರುವ ಏಷ್ಯನ್ ಕರೆನ್ಸಿ (Asian Currency) ಎಂಬ ಅಪಖ್ಯಾತಿಗೆ ಪಾತ್ರವಾಗಿದೆ.
Seems like #Rupee can never have a #HappyNewYear in #ModiRule ???? pic.twitter.com/CWZg1fMvEN
— YSR (@ysathishreddy) December 21, 2022
Advertisement
2021ರ ಅಂತ್ಯದಲ್ಲಿ 74.33 ರೂ. ಇದ್ದ ಡಾಲರ್ (USD) ಮೌಲ್ಯ 2022ರ ಅಂತ್ಯದ ವೇಳೆಗೆ 82.75 ರೂಪಾಯಿವರೆಗೆ ಏರಿಕೆ ಕಂಡಿದೆ. ಆದ್ರೆ ಡಾಲರ್ ಸೂಚ್ಯಂಕ ಮಾತ್ರ 2015ರಿಂದ ವಾರ್ಷಿಕ ಲಾಭದತ್ತ ಸಾಗುತ್ತಿದೆ. ಇದನ್ನೂ ಓದಿ: ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಗುಡ್ ಬೈ – ಸೌದಿ ಅರೇಬಿಯಾ ಪಾಲಾದ ರೊನಾಲ್ಡೊ
Advertisement
Sri Lanka Rupee – 82%
Pakistan Rupee – 27%
Bangladesh Taka – 20%
Nepali Rupee – 10.90%
Are these countries not in Asia? Are they not asian currencies?
Indian rupee is one of the best performing currency.
Indians are extremely unlucky because we have low IQ MPs like you. pic.twitter.com/6iYqbiW0Es
— Ram Feran Pandey (@RamFeranPandey) December 31, 2022
Advertisement
ಹೌದು. ರಷ್ಯಾ ಮತ್ತು ಉಕ್ರೇನ್ ಸಂಘರ್ಷದಿಂದ (Russia Ukraine War) ತೈಲ ಬೆಲೆಯಲ್ಲಿ ಏರಿಳಿತಗಳಿಂದಾಗಿ ರೂಪಾಯಿ ಮೌಲ್ಯ ಕುಸಿತವಾಯಿತು. ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಚಾಲ್ತಿ ಖಾತೆಯ ಕೊರತೆಯನ್ನು ಗರಿಷ್ಠ ಮಟ್ಟಕ್ಕೆ ತಳ್ಳಿತು. ಸದ್ಯ ಹೊಸ ವರ್ಷದ ಮೊದಲ ತ್ರೈಮಾಸಿಕದಲ್ಲಿ ರೂಪಾಯಿ ಮೌಲ್ಯವು 81.50 ರೂ. ನಿಂದ 83.50 ರೂ. ನಡುವೆ ಇರಲಿದೆ. 2023ರಲ್ಲಿ ಇದಕ್ಕೆ ಸೂಕ್ತ ಪರಿಹಾರ ಸಿಗುವ ಅಭಿಪ್ರಾಯವನ್ನು ತಜ್ಞರು ಹೊಂದಿದ್ದಾರೆ. ಇದನ್ನೂ ಓದಿ: `ಕಾಂತಾರ’ ಹೀರೋ ರಿಷಬ್ ಜೊತೆ ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸಿದ ಜಾನ್ವಿ ಕಪೂರ್
Advertisement
the Indian Rupee hasn’t performed worse, but in reality, it is the other Asian currencies that have performed better. pic.twitter.com/Nf8MkUKzZ1
— Deeksha Nitin Raut (@DeekshaNRaut) December 30, 2022
ರೂಪಾಯಿ ಮೌಲ್ಯಯುತವಾಗಿದ್ದರೂ, ಅದು ಏಷ್ಯನ್ ಸಂಪರ್ಕಿತರನ್ನ ಕಡಿಮೆ ಮಾಡುತ್ತಿದೆ. ಏಕೆಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವ್ಯವಹಾರಗಳೆಲ್ಲವೂ ಡಾಲರ್ ಮೂಲಕ ನಡೆಯುವುದರಿಂದ ರೂಪಾಯಿ ಆಯ್ಕೆಯಾಗುವುದಿಲ್ಲ. ಆದ್ರೆ ಭಾರತೀಯ ಶೇರುಗಳಲ್ಲಿ ವಹಿವಾಟನ್ನು ಮುಂದುವರಿಸಿದ್ರೆ, ರೂಪಾಯಿ ಮೌಲ್ಯ ಸ್ಥಿರವಾಗಲಿದೆ ಎಂದು ಒಸಿಬಿಸಿ ಬ್ಯಾಂಕ್‌ನ ಎಫ್‌ಎಕ್ಸ್ ತಂತ್ರಜ್ಞ ಕ್ರಿಸ್ಟೋಫರ್ ವಾಂಗ್ ಹೇಳಿದ್ದಾರೆ.