ಶಿವಮೊಗ್ಗ: ಭಾರತೀಯ ಧರ್ಮ, ಸಂಸ್ಕೃತಿ ಹಾಗೂ ಪರಂಪರೆ ಯಾವುದೇ ಅನ್ಯ ಧರ್ಮದ ವಿರುದ್ಧ ಇಲ್ಲ. ಅದನ್ನು ಬಲಪಡಿಸುವ ವ್ಯವಸ್ಥೆ ಹಾಗೂ ಸರ್ಕಾರಗಳು ಬರಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಪಾದಿಸಿದ್ದಾರೆ.
ತೀರ್ಥಹಳ್ಳಿಯ ಯೋಗ ಸಮಿತಿ ಶ್ರೀ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಯೋಗ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ದೇಶದ ಸಾಂಸ್ಕೃತಿಕ ಚೌಕಟ್ಟನ್ನು ಬಲಪಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಹೇಳಿದ್ದೆ ವೇದ ವಾಕ್ಯನಾ? ಬೊಮ್ಮಾಯಿಗಿಂತ ಹಿರಿಯ ನಾನು: ಸಿದ್ದರಾಮಯ್ಯ
Advertisement
Advertisement
ಜಗತ್ತಿನಲ್ಲಿ ಭಾರತೀಯ ಪರಂಪರೆಗೆ ಇಂದು ದೊಡ್ಡ ಸ್ಥಾನ ಇದೆ. ಭಾರತೀಯ ಪರಂಪರೆ ಹಾಗೂ ಧರ್ಮ ಎಲ್ಲಾ ಧರ್ಮಗಳ ರಕ್ಷಕನಾಗಿ ನಿಂತಿದೆ. ವಿಶ್ವದ ಎಲ್ಲಾ ಧರ್ಮಗಳನ್ನು ಎತ್ತಿ ಹಿಡಿದಿರುವ ಹಿಂದೂ ಧರ್ಮ, ಸಂಸ್ಕೃತಿ, ಪರಂಪರೆ, ಸವಾಲಿನ ದಿನಗಳನ್ನು ಕಾಣುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ದಾವುದ್ ಅಲ್ಲ, ಅವರಪ್ಪ ಬಂದ್ರು ಕೂಡ ಏನು ಮಾಡಲು ಆಗಲ್ಲ: ಪ್ರಮೋದ್ ಮುತಾಲಿಕ್
Advertisement
Advertisement
ಕಾರ್ಯಕ್ರಮಕ್ಕೂ ಮುನ್ನ ಸಚಿವರು ಯೋಗ ಸಮಿತಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಹಾಗೂ ಪಕ್ಷದ ಗೆಲುವಿನ ಸಂಕಲ್ಪ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.