ನವದೆಹಲಿ: ಪ್ರಯಾಣಿಕರಿಗಾಗಿ ಆಹಾರ (Food) ಗುಣಮಟ್ಟವನ್ನು ಸುಧಾರಿಸಲು ಭಾರತೀಯ ರೈಲ್ವೇ (Railway) ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ಸ್ಥಾಪಿಸಿದ ನಂತರ ಹೊಸ ಕ್ರಮ ಅನುಷ್ಠಾನಗೊಳಿಸಲಾಗಿದೆ.
ಇನ್ನುಮುಂದೆ ರಾಜಧಾನಿಗಳು, ಶತಾಬ್ದಿಗಳು (Shatabdis) ಹಾಗೂ ದುರಂತೋ ಪ್ರೀಮಿಯಂ ರೈಲುಗಳಲ್ಲಿ (Premium Trains) ಪ್ರಯಾಣಿಸುವ ಪ್ರಯಾಣಿಕರಿಗೆ ಉಚಿತ ಆಹಾರ ನೀಡಲು ತೀರ್ಮಾನಿಸಿದೆ.
Advertisement
Advertisement
ಉಚಿತ ಊಟದಲ್ಲಿ ವೆಜ್ ಅಥವಾ ನಾನ್‌ವೆಜ್ ಯಾವುದನ್ನೂ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಪ್ರೀಮಿಯಂ ರೈಲುಗಳು (Premium Trains) 2 ಗಂಟೆ ವಿಳಂಬವಾದರೆ ಮಾತ್ರ ಉಚಿತ ಊಟದ (Free Food) ಸೌಲಭ್ಯವಿರಲಿದೆ. ವಿಳಂಬದ ಕಾರಣವನ್ನು ಲೆಕ್ಕಿಸದೇ ಉಚಿತ ಆಹಾರ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಉಚಿತ ಊಟವನ್ನು ಹೆಚ್ಚಾಗಿ ನೀಡುವುದು ಅಸಂಬದ್ಧ ಕ್ರಮವಾಗುತ್ತದೆ. ಹಾಗಾಗಿ ಪ್ರೀಮಿಯಂ ರೈಲುಗಳ ಚಾಲನೆಗೆ ಮಾತ್ರ ಈ ಆದ್ಯತೆ ನೀಡಲಾಗುತ್ತದೆ. ಇದನ್ನೂ ಓದಿ: ರಾಜಕಾಲುವೆ ಅತಿಕ್ರಮ ತೆರವು ಕಾರ್ಯಾಚರಣೆ – ಭೇದಭಾವದ ಪ್ರಶ್ನೆಯೇ ಇಲ್ಲವೆಂದ ಸಿಎಂ
Advertisement
Advertisement
ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ಅನ್ನು 1999 ರಲ್ಲಿ ಸ್ಥಾಪಿಸಿದ ಬಳಿಕ ಆಹಾರ ತಯಾರಿಕೆಯ ಗುಣಮಟ್ಟವನ್ನು ಸುಧಾರಿಸಲು ಮುಂದಾಗಿದೆ. ಐಆರ್‌ಸಿಟಿಸಿ ಈಗ ಹೊಸ ಅಡುಗೆಮನೆಗಳು ಸ್ಥಾಪಿಸಲು ಹಾಗೂ ಈಗಾಗಲೇ ಇರುವ ಅಡುಗೆ ಮನೆಗಳನ್ನು ಇನ್ನಷ್ಟು ನವೀಕರಣಗೊಳಿಸಲು ಮುಂದಾಗಿದೆ. ಇದನ್ನೂ ಓದಿ: ರಾಣಿ ಚೆನ್ನಮ್ಮ ವಿವಿಯಿಂದ ನಟ ರಮೇಶ್ ಅರವಿಂದ್ ಸೇರಿ ಮೂವರಿಗೆ ಗೌರವ ಡಾಕ್ಟರೇಟ್
ಪ್ರಯಾಣಿಕರಿಗಾಗಿ ಊಟದ ಗುಣಮಟ್ಟ ಸುಧಾರಿಸಲು ಆನ್‌ಬೋರ್ಡ್ ಮೆನುಗಳನ್ನ ಪರಿಶೀಲಿಸಲಾಗುತ್ತಿದೆ. ಜೊತೆಗೆ ರಾಜಧಾನಿ ಹಾಗೂ ದುರಂತೋ ರೈಲುಗಳಲ್ಲಿ ಗಾಳಿಯಾಡದ ಕವರ್‌ಗಳೊಂದಿಗೆ ಪ್ಯಾಕೇಜ್ ಆಹಾರವನ್ನು ಪರಿಚಯಿಸಲಾಗಿದೆ.