ನವದೆಹಲಿ: ವಿಶ್ವದರ್ಜೆಯ ಎಂಜಿನ್ ರಹಿತ “ಟ್ರೇನ್ 18” ಹೆಸರಿನ ರೈಲನ್ನು ಇದೇ ಜೂನ್ ನಲ್ಲಿ ಹಳಿಗಿಳಿಸಲು ಭಾರತೀಯ ರೈಲ್ವೇ ಮುಂದಾಗಿದೆ.
ಎಂಜಿನ್ ರಹಿತ ರೈಲುಗಳು ಸದ್ಯ ಮೆಟ್ರೋ ನಗರಗಳಲ್ಲಿ ಮಾತ್ರ ಸಂಚರಿಸುತ್ತಿದೆ. ಆದರೆ ಈ ವರ್ಷದ ಜೂನ್ ನಲ್ಲಿ ಟ್ರೇನ್ 18 ಮತ್ತು 2020ರ ವೇಳೆಗೆ ಟ್ರೇನ್ 20 ಹೆಸರಿನ ರೈಲನ್ನು ಓಡಿಸಲು ರೈಲ್ವೇ ಇಲಾಖೆ ಸಿದ್ಧತೆ ನಡೆಸಿದೆ.
Advertisement
ಈ ಎರಡು ವಿಶ್ವ ದರ್ಜೆ ರೈಲುಗಳಿಂದ ಪ್ರಯಾಣದ ಅವಧಿಯು 20% ಕಡಿಮೆಯಾಗಲಿದೆ. ಈಗ ಸೇವೆಯಲ್ಲಿರುವ ಶತಾಬ್ದಿ ಮತ್ತು ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳ ಸ್ಥಾನವನ್ನು ಹೊಸ ಸೆಮಿ- ಹೈಸ್ಪೀಡ್ ರೈಲುಗಳು ತುಂಬಲಿದೆ. ಈ ಮೂಲಕ ಹಂತಹಂತವಾಗಿ ರಾಜಧಾನಿ, ಶತಾಬ್ದಿ ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ನಿಲ್ಲಿಸಲು ಸಚಿವಾಲಯ ಮುಂದಾಗಿದೆ.
Advertisement
Advertisement
Advertisement
ಈ ಎರಡು ರೈಲುಗಳನ್ನು ಚೆನ್ನೈನಲ್ಲಿರುವ ರೈಲ್ವೆಯ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ವರ್ಷ ಜೂನ್ ಒಳಗಾಗಿ 16 ಕೋಚ್‍ಗಳ ಮೊದಲ ರೈಲನ್ನು ಹೊರ ತರುವ ನಿರೀಕ್ಷೆಯಿದೆ. ಇದೇ ರೈಲುಗಳನ್ನು ಆಮದು ಮಾಡಿಕೊಂಡಿದ್ದಲ್ಲಿ ನಿರ್ಮಾಣಕ್ಕೆ ತಗಲಿದ್ದ ಎರಡರಷ್ಟು ವೆಚ್ಚವಾಗುತಿತ್ತು ಎಂದು ಐಸಿಎಫ್ ಸ್ಪಷ್ಟಪಡಿಸಿದೆ.
ಟ್ರೇನ್ 8 ಉಕ್ಕಿನಿಂದ ನಿರ್ಮಾಣವಾಗುತ್ತಿದ್ದು ಟ್ರೇನ್ 20 ಅಲ್ಯೂಮಿನಿಯಂ ನದ್ದಾಗಿರುತ್ತದೆ. ಈ ರೈಲುಗಳು ಘಂಟೆಗೆ 160 ಕಿ.ಮೀ. ವೇಗದಲ್ಲಿ ಓಡುವ ಸಾಮಥ್ರ್ಯವನ್ನು ಹೊಂದಿದೆ. ಶತಾಬ್ದಿ ಮತ್ತು ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳ ಘಂಟೆಗೆ 90 ಕಿ.ಮೀ. ವೇಗದಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿವೆ.
ಹೊಸ ರೈಲುಗಳಲ್ಲಿ ಎಂಜಿನ್ ಹಿಂದೆ ಮುಂದೆ ಮಾಡುವ ಅವಶ್ಯಕತೆ ಇರುವುದಿಲ್ಲ. ರೈಲುಗಳು ಬೇಗನೆ ವೇಗವನ್ನು ಪಡೆದುಕೊಳ್ಳಲಿದೆ ಹಾಗೆ ಕಡಿಮೆ ಹೊಂದಲಿದೆ. ಹಾಗಾಗಿ ಪ್ರಯಾಣದ ಸಮಯವನ್ನು ತಗ್ಗಿಸಲಿದೆ.
ಕಾರುಗಳಲ್ಲಿರುವಂತೆ ಬೋಗಿಗಳ ಒಳಗಿನ ಆವರಣವನ್ನು ವಿನ್ಯಾಸ ಮಾಡಲಾಗಿದ್ದು, ಗರಿಷ್ಟ 56 ಎಕ್ಸಿಕ್ಯೂಟಿವ್ ಮತ್ತು 78 ನಾನ್ ಎಕ್ಸಿಕ್ಯೂಟಿವ್ ಆಸನಗಳು ಇರಲಿದೆ. ರೈಲಿನ ಎರಡೂ ಬದಿಯಲ್ಲೂ ಅಂತರ ಇಲ್ಲದ ಒಂದೇ ನೇರ ಗ್ಲಾಸ್ ಕಿಟಕಿ ಇರುತ್ತದೆ.
ಸಂಪೂರ್ಣ ಹವಾನಿಯಂತ್ರಣ ವ್ಯವಸ್ಥೆಯನ್ನು ಳಗೊಂಡಿದ್ದು ವೈಫೈ ಸೌಲಭ್ಯ ಇರಲಿದೆ. ಜಿಪಿಎಸ್ ಆಧಾರಿತ ಗ್ರಾಹಕರ ಮಾಹಿತಿ ವ್ಯವಸ್ಥೆ, ಇನ್ಫೋಟೈನ್ ಮೆಂಟ್ ಸಿಸ್ಟಂ ಸಹ ಇರಲಿದೆ. ಸ್ವಯಂ ಚಾಲಿತ ರೈಲಿನ ಬಾಗಿಲು ಇರಲಿದ್ದು, ರೈಲ್ವೆ ನಿಲ್ದಾಣ ಬಂದಾಗ ತನಗೆ ತಾನೆ ತೆರೆದುಕೊಳ್ಳಲಿವೆ. ರಬ್ಬರ್ ಪ್ಲೋರಿಂಗ್ ಮತ್ತು ಎಲ್‍ಇಡಿ ದೀಪದ ವ್ಯವಸ್ಥೆ ಇರಲಿದೆ.
ಬಯೋ-ವಾಕ್ಯೂಮ್ ಶೌಚಾಲಯಗಳ ಜೊತೆ ಸುಂದರವಾದ ಸ್ನಾನದ ಮನೆ ಇರಲಿದೆ. ಸಾಮಾನುಗಳ ಶೆಲ್ಫ್ ವಿಶಾಲವಾಗಿದ್ದು ಹೆಚ್ಚಿನ ಸಾಮಾನುಗಳನ್ನು ಇಡಬಹುದಾಗಿದೆ. ಅಂಗವಿಕಲರಿಗೆ ಸಹಾಯವಾಗಲೆಂದು ವೀಲ್ ಚೇರ್ ಗಳಿಗೆ ಜಾಗ ಕಲ್ಪಿಸಲಾಗಿದೆ. ಎರಡು ಬೋಗಿಗಳ ಮಧ್ಯೆ ಗಾಜಿನ ಬಾಗಿಲುಗಳು ಇರಲಿದೆ.