ನವದೆಹಲಿ: ಹಳಿಗಳ ಮೇಲೆ ವಸ್ತುಗಳು ಇರಿಸಿ ದುಷ್ಕೃತ್ಯ ಎಸಗುವ ಪ್ರಕರಣಗಳ ಹೆಚ್ಚಾಗುತ್ತಿದ್ದಂತೆ ಇವುಗಳಿಗೆ ಕಡಿವಾಣ ಹಾಕಲು ರೈಲ್ವೇ ಸಚಿವಾಲಯ (Railway Ministry) ಈಗ 75 ಲಕ್ಷ ಎಐ ಕ್ಯಾಮೆರಾ (Artificial Intelligence Camera) ಖರೀದಿಸಲು ಮುಂದಾಗಿದೆ.
ರೈಲುಗಳನ್ನು ಹಳಿತಪ್ಪಿಸುವ ಪ್ರಯತ್ನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಲಾ ರೈಲುಗಳಲ್ಲಿ ಬಹು ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಘೋಷಿಸಿದ್ದಾರೆ. ಇದನ್ನೂ ಓದಿ: ಭಾರತದ ರೈಲು, ಪೆಟ್ರೋಲ್ ಪೈಪ್‌ಲೈನ್‌ಗಳ ಮೇಲೆ ದಾಳಿ ಮಾಡಿ -ರಾಮೇಶ್ವರಂ ಕೆಫೆ ಸ್ಫೋಟ ಸಂಚುಕೋರನಿಂದ ಕರೆ
ಇಂಜಿನ್ ಮತ್ತು ಗಾರ್ಡ್ ಕೋಚ್‌ನ ಮುಂಭಾಗ, ಹಿಂಭಾಗ, ಎರಡು ಬದಿಗಳಲ್ಲಿ, ಕೋಚ್‌ಗಳಲ್ಲಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಈ ಸಾಧನಗಳಿಂದ ತುಣುಕನ್ನು ಸಂಗ್ರಹಿಸಲು ಮತ್ತು ಪರಿಶೀಲಿಸಲು ಕೇಂದ್ರೀಯ ಡೇಟಾ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ.
ಒಟ್ಟು 75 ಲಕ್ಷ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಇಲಾಖೆ ಮುಂದಾಗಿದೆ. ಕ್ಯಾಮೆರಾ ಅಳವಡಿಕೆಯೆ ಟೆಂಡರ್ ಪ್ರಕ್ರಿಯೆ ಮುಂದಿನ ಮೂರು ತಿಂಗಳೊಳಗೆ ಮುಕ್ತಾಯವಾಗಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತೀಯ ರೈಲ್ವೆ ಮೇಲೆ ಆಗಂತುಕರ ಕಣ್ಣು – ಆಗಸ್ಟ್ ತಿಂಗಳಲ್ಲೇ 18 ಬಾರಿ ರೈಲು ಹಳಿ ತಪ್ಪಿಸಲು ಯತ್ನ
40,000 ಕೋಚ್‌ಗಳು, 14,000 ಲೊಕೊಮೊಟಿವ್‌ಗಳು ಮತ್ತು 6,000 ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್‌ಗಳಲ್ಲಿ ಕ್ಯಾಮೆರಾ ಅಳವಡಿಸಲಾಗುತ್ತದೆ.