– ದೇಶದ 37 ರೈಲುಗಳಿಗೆ ಹೆಚ್ಚುವರಿ116 ಕೋಚ್
ನವದೆಹಲಿ/ಬೆಂಗಳೂರು: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದ (Indigo) ವಿಮಾನ ಕಾರ್ಯಾಚರಣೆಯಲ್ಲಿ ಅಡಚಣೆಯಿಂದ ತೊಂದರೆಯಾಗಿರುವ ಪ್ರಯಾಣಿಕರಿಗೆ ಪರ್ಯಾಯ ಪ್ರಯಾಣ ಆಯ್ಕೆಯನ್ನು ನೀಡಲು ಭಾರತೀಯ ರೈಲ್ವೆ (Indian Railways) ಹಲವಾರು ಪ್ರೀಮಿಯಂ ರೈಲುಗಳಿಗೆ ಹೆಚ್ಚುವರಿ ಕೋಚ್‌ಗಳನ್ನು ಸೇರಿಸಿದೆ.
ಹೆಚ್ಚಿನ ಒತ್ತಡ ಎದುರಿಸುತ್ತಿರುವ ಮಹಾನಗರಗಳಿಂದ ದೇಶಾದ್ಯಂತ ಚಲಿಸುವ 37 ರೈಲುಗಳಿಗೆ ಹೆಚ್ಚುವರಿ ತಾತ್ಕಾಲಿಕ ಕೋಚ್‌ಗಳು ಮತ್ತು ಟ್ರಿಪ್‌ಗಳನ್ನು ಸೇರಿಸಲಾಗಿದೆ ಎಂದು ಭಾರತೀಯ ರೈಲ್ವೇ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ – 5ನೇ ದಿನವೂ ಪ್ರಯಾಣಿಕರ ಪರದಾಟ
ಸ್ಲೀಪರ್, ಚೇರ್-ಕಾರ್, ಸೆಕೆಂಡ್-ಎಸಿ ಮತ್ತು ಥರ್ಡ್-ಎಸಿ ವಿಭಾಗಗಳಲ್ಲಿ ಕಾಯ್ದಿರಿಸಿದ ಪ್ರಯಾಣಕ್ಕಾಗಿ ಎಲ್ಲಾ 116 ಹೆಚ್ಚುವರಿ ಕೋಚ್‌ಗಳನ್ನು ಲಭ್ಯವಾಗುವಂತೆ ಮಾಡಲಾಗಿದ್ದು, ಸಂಭಾವ್ಯ ಪ್ರಯಾಣಿಕರಿಗೆ ಕಾಯ್ದಿರಿಸಿದ ಪ್ರಯಾಣ ಆಯ್ಕೆಗಳನ್ನು ನೀಡುತ್ತದೆ.
ಬೆಂಗಳೂರಿನಿಂದ ತ್ರಿಪುರಾದ ಅಗರ್ತಲಾ ಹೋಗುವ ಹಮ್ಸಫರ್ ಎಕ್ಸ್‌ಪ್ರೆಸ್, ತಿರುವಂತನಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್, ಎಂಜಿಆರ್ ಚೆನ್ನೈ ಎಕ್ಸ್‌ಪ್ರೆಸ್, ಮಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಮುಂಬೈ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ಚೆನ್ನೈ ಬೀಚ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿ ಕೋಚ್‌ಗಳನ್ನು ಅಳವಡಿಸಲಾಗಿದೆ. ಇದನ್ನೂ ಓದಿ: ಇಂಡಿಗೋ ಸಮಸ್ಯೆ – ಪೈಲಟ್ ರಜೆ ನಿಯಮಗಳನ್ನು ಸಡಿಲಿಸಿದ DGCA

