ನವದೆಹಲಿ: ಭಾರತೀಯ ರೈಲ್ವೇ(Indian Railways) 2022ರ ಏಪ್ರಿಲ್ 1 ರಿಂದ ಡಿಸೆಂಬರ್ 31 ರವರೆಗೆ ಪ್ರಯಾಣಿಕರ ವಿಭಾಗದಲ್ಲಿ(Passenger Segment) 48,913 ಕೋಟಿ ರೂ. ಆದಾಯ(Revenue) ಗಳಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
2021ಕ್ಕೆ ಹೋಲಿಸಿದರೆ ಶೇ.71 ರಷ್ಟು ಆದಾಯ ಏರಿಕೆಯಾಗಿದ್ದು, ಕಳೆದ ವರ್ಷ ಈ ಅವಧಿಯಲ್ಲಿ 28,569 ಕೋಟಿ ರೂ. ಗಳಿಸಿತ್ತು.
Advertisement
Advertisement
ಕಾಯ್ದಿರಿಸಿದ ಪ್ರಯಾಣಿಕರ(Reserved Passenger) ವಿಭಾಗದಲ್ಲಿ 2022 ರ ಏಪ್ರಿಲ್ 1 ರಿಂದ ಡಿಸೆಂಬರ್ 31 ರ ಅವಧಿಯಲ್ಲಿ 59.61 ಕೋಟಿ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.6 ರಷ್ಟು ಹೆಚ್ಚಳವಾಗಿದೆ. 2021ರಲ್ಲಿ 56.05 ಕೋಟಿ ಮಂದಿ ಟಿಕೆಟ್ ಕಾಯ್ದಿರಿಸಿದ್ದರು.
Advertisement
ಕಾಯ್ದಿರಿಸಿದ ಪ್ರಯಾಣಿಕರ ವಿಭಾಗದಿಂದ ಗಳಿಸಿದ ಆದಾಯವು 38,483 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 26,400 ಕೋಟಿ ರೂ. ಗಳಿಸಿತ್ತು. 2021ರ ಈ ಅವಧಿಗೆ ಹೋಲಿಸಿದರೆ ಶೇ.46ರಷ್ಟು ಆದಾಯ ಏರಿಕೆಯಾಗಿದೆ.ಇದನ್ನೂ ಓದಿ: ಸಿನಿಮಾಗಳಿಗೆ 3 ಸಾವಿರ ಕೋಟಿ ಹೂಡಿಕೆ: ಹೊಂಬಾಳೆ ಫಿಲ್ಮ್ಸ್ ಅಧಿಕೃತ ಘೋಷಣೆ
Advertisement
ಕಾಯ್ದಿರಿಸದ ಪ್ರಯಾಣಿಕರ(Unreserved Passenger) ವಿಭಾಗದಲ್ಲಿ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಅಂದಾಜು 40,197 ಲಕ್ಷ ಮಂದಿ ಪ್ರಯಾಣಿಸಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಅಂದಾಜು 16,968 ಲಕ್ಷ ಮಂದಿ ಪ್ರಯಾಣಿಸಿದ್ದರು. ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಪ್ರಯಾಣಿಕರ ಸಂಖ್ಯೆ ಶೇ.136ರಷ್ಟು ಹೆಚ್ಚಳವಾಗಿದೆ.
ಈ ವಿಭಾಗದಿಂದ 10,430 ಕೋಟಿ ರೂ. ಆದಾಯಗಳಿಸಿದ್ದು, ಕಳೆದ ವರ್ಷ 2,169 ಕೋಟಿ ರೂ. ಗಳಿಸಿತ್ತು. 2021ರ ಈ ಅವಧಿಗೆ ಹೋಲಿಸಿದರೆ ಶೇ.381ರಷ್ಟು ಆದಾಯ ಏರಿಕೆಯಾಗಿದೆ.