ನವದೆಹಲಿ: ತನ್ನ ಗ್ರಾಹಕರಿಗೆ ಸಕಾಲಿಕ, ಸುರಕ್ಷಿತ ಹಾಗೂ ಸುಗಮವಾದ ಸರಕು ಸಾಗಣೆಯ ಸೇವೆಯನ್ನು ನೀಡಲು ಭಾರತೀಯ ರೈಲ್ವೆಯು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.
ಭಾರತೀಯ ರೈಲ್ವೆಯ ಪ್ರಗತಿಪರ ವಿಶೇಷ ಸರಕು ರೈಲು ಕಾರ್ಯಾಚರಣೆಯ ಯೋಜನೆಯಡಿ (ಲಿಬರಲಿಸ್ಡ್ ಸ್ಪೆಷಲ್ ಫ್ರೈಟ್ ಟ್ರೈನ್ ಆಪರೇಟರ್ ಸ್ಕೀಮ್) ಎಚ್ಆರ್/ಸಿಆರ್ (ಹಾಟ್ ರೊಲ್ದ್/ಕೋಲ್ಡ್ ರೊಲ್ಡ್) ಸ್ಟೀಲ್ ಕಾಯಿಲ್ ಗಳನ್ನು ಲೋಡ್ ಮಾಡಲು ತನ್ನ ವಿಭಿನ್ನ ಸರ್ಕ್ಯೂಟ್ ಗಳಲ್ಲಿ ಬಿಎಫ್ಎನ್‌ವಿ (ಬ್ರಾಡ್ ಗೇಜ್ ವರ್ಸಟೈಲ್ ಕಾಯಿಲ್ ವ್ಯಾಗನ್) ರೇಕ್‌ಗಳನ್ನು ಪರಿಚಯಿಸಲು ಇಂದು ಜೆಎಸ್‌ಡಬ್ಲ್ಯೂಸ್ಟೀಲ್ ಲಿಮಿಟೆಡ್ ವಿಜಯನಗರ ಜೊತೆ ನೈಋತ್ಯ ರೈಲ್ವೆಯು ಒಪ್ಪಂದವನ್ನು ಮಾಡಿಕೊಂಡಿತು.
Advertisement
Advertisement
ಈ ಒಪ್ಪಂದದ ಅಡಿಯಲ್ಲಿ ಲೋಡ್ ಮಾಡಲಾದ ಪ್ರತಿಯೊಂದು ಬಿಎಫ್ಎನ್‌ವಿ ರೇಕುಗಳ ಸಾಗಣಾ ದರದಲ್ಲಿ ಶೇ.12 ರ ರಿಯಾಯಿತಿಯನ್ನು 20 ವರ್ಷಗಳ ಅವಧಿಗೆ ನೀಡಲಾಗುವುದು. ಈ ಬಿಎಫ್‌ಎನ್‌ವಿ ವ್ಯಾಗನ್ನುಗಳು ವಿಶೇಷವಾಗಿ ಭಾರತೀಯ ರೈಲ್ವೆಯ ರಿಸರ್ಚ್ ಡಿಸೈನ್ ಆಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ ಹಾಗೂ ಜಿಂದಾಲ್ ರೈಲ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆಗಳಿಂದ ಜಂಟಿಯಾಗಿ ವಿನ್ಯಾಸಗೊಳಿಸಲ್ಪಟ್ಟಿವೆ. ಪ್ರತಿಯೊಂದು ರೇಕು 3973 ಟನ್ನುಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
Advertisement
ಈ ವ್ಯಾಗನ್‌ಗಳನ್ನು ಹೆಚ್ಚಿನ ವೇಗ ಹಾಗೂ ಸಾಮರ್ಥ್ಯದೊಂದಿಗೆ ಸಾಗಣೆಯ ಸಮಯದಲ್ಲಿ ಸ್ಟೀಲ್ ಕಾಯಿಲ್ ಗಳಿಗೆ ಹಾನಿಯಾಗದಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ರೈಲ್ವೆ ಸಚಿವಾಲಯವು 16 ಬಿಎಫ್ಎನ್‌ವಿ ರೇಕ್‌ಗಳನ್ನು ಖರೀದಿಸಲು ಒಪ್ಪಿಗೆ ನೀಡಿದೆ.
Advertisement
ಹೆಚ್ಚಿನ ಸಾಮರ್ಥ್ಯ ಹಾಗೂ ವಿಶೇಷ ಉದ್ದೇಶಿತ ವ್ಯಾಗನ್ನುಗಳಲ್ಲಿ ಸಾಂಪ್ರದಾಯಿಕವಲ್ಲದ ಸರಕು ಸಂಚಾರದ ಸಾಗಣೆಯಲ್ಲಿ ರೈಲ್ವೆಯ ಪಾಲನ್ನು ಹೆಚ್ಚಿಸುವುದರ ಮೂಲಕ ರೈಲು ಸಂಚಾರದ ಸರಕು ಮೂಲವನ್ನು ವರ್ಧಿಸುವುದು ಎಲ್ಎಸ್ಎಫ್‌ಟಿಒ(ಲಿಬರಲೈಸ್ಡ್ ಸ್ಪೆಷಲ್ ಫ್ರೈಟ್ ಟ್ರೈನ್ ಆಪರೇಟರ್) ಕಾರ್ಯನೀತಿಯ ಮುಖ್ಯ ಉದ್ದೇಶವಾಗಿದೆ. ಇದರ ಜೊತೆಗೆ ಉತ್ತಮ ವಿನ್ಯಾಸದ ವ್ಯಾಗನ್ನುಗಳನ್ನು ಪರಿಚಯಿಸುವುದರೊಂದಿಗೆ ಪ್ರತೀ ರೈಲಿನಲ್ಲಿ ಸಾಗಿಸಬಹುದಾದ ಒಟ್ಟು ಸರಕಿನ ಪ್ರಮಾಣವು ಹೆಚ್ಚಲು ಅನುಕೂಲವಾಗುತ್ತದೆ. ಇದನ್ನೂ ಓದಿ: ಮುಖವೇ ಇಲ್ಲದೆ ಹುಟ್ಟಿದ ಕುರಿಮರಿ!
ಈ ಕಾರ್ಯನೀತಿಯು ಸರಕು ಸಾಗಣೆ ಸೇವೆಯನ್ನು ಒದಗಿಸುವವರಿಗೆ ಹಾಗೂ ಸೌಕರ್ಯಗಳ ತಯಾರಕರಿಗೆ ವ್ಯಾಗನ್ನುಗಳಲ್ಲಿ ತಮ್ಮ ಹಣ ಹೂಡಿಕೆ ಮಾಡಲು ಹಾಗೂ ಆಯ್ದ ಸರಕುಗಳ ಸಾಗಣೆಗಾಗಿ ರೈಲು ಸಾರಿಗೆಯ ಬಳಸಿಕೊಳ್ಳಲು ಸಹಾಯವಾಗಲಿದೆ.