ಟಿಕೆಟ್ ರಹಿತ ಪ್ರಯಾಣಕ್ಕೆ ದಂಡ: 3 ತಿಂಗಳಲ್ಲಿ ಎಷ್ಟು ಕೋಟಿ ಸಂಗ್ರಹವಾಗಿದೆ ಗೊತ್ತಾ?

Public TV
1 Min Read
indian railway fine

ನವದೆಹಲಿ: ಟಿಕೆಟ್ ಇಲ್ಲದೇ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಬಿಸಿ ಮುಟ್ಟಿಸುತ್ತಿರುವ ರೈಲ್ವೇ ಅಧಿಕಾರಿಗಳು ಮೂರು ತಿಂಗಳಿನಲ್ಲಿ ಒಟ್ಟು 1.18 ಕೋಟಿ ರೂ. ಹಣವನ್ನು ದಂಡದ ರೂಪದಲ್ಲಿ ಸಂಗ್ರಹಿಸಿದ್ದಾರೆ.

ಏಪ್ರಿಲ್ 1, 2017ರಿಂದ ಜೂನ್ 30 ರವರೆಗಿನ ಅವಧಿಯಲ್ಲಿ ಟಿಕೆಟ್ ರಹಿತ ಪ್ರಯಾಣ, ಇ ಟಿಕೆಟ್ ದುರ್ಬಳಕೆ ಇತ್ಯಾದಿ ಸೇರಿದಂತೆ ಒಟ್ಟು 1.18 ಕೋಟಿ ರೂ. ಹಣವನ್ನು ದಂಡ ರೂಪದಲ್ಲಿ ಭಾರತೀಯ ರೈಲ್ವೇ ಸಂಗ್ರಹಿಸಿದೆ ಎಂದು ಕೇಂದ್ರ ರೈಲ್ವೇ ಸಚಿವಾಲಯದ ರಾಜ್ಯ ಖಾತೆಯ ಸಚಿವ ರಾಜೆನ್ ಗೋಹೆನ್ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.

59,117 ಟಿಕೆಟ್ ರಹಿತ ಪ್ರಯಾಣಿಕರು ಮತ್ತು ಅಕ್ರಮವಾಗಿ ಟಿಕೆಟ್ ವಿತರಣೆ ಮಾಡುವ 7 ಏಜೆನ್ಸ್ ಗಳ ಮೇಲೆ ರೈಲ್ವೇ ಅಧಿಕಾರಿಗಳು ದಂಡ ವಿಧಿಸಿದ್ದಾರೆ.

ಟಿಕೆಟ್ ರಹಿತ ಪ್ರಯಾಣಕ್ಕೆ ಪ್ರಯಾಣಿಕನೊಬ್ಬನಿಗೆ ಕನಿಷ್ಠ 250 ರೂ. ದಂಡ ವಿಧಿಸಲಾಗುತ್ತದೆ. 2015ರ ಬಜೆಟ್ ನಲ್ಲಿ ಪ್ಲಾಟ್‌ಫಾರಂ  ಟಿಕೆಟ್ ಶುಲ್ಕವನ್ನು 10 ರೂ. ಏರಿಸಿದ್ದು, ಪ್ಲಾಟ್‌ಫಾರಂ ಟಿಕೆಟ್ ಪಡೆದುಕೊಳ್ಳದೇ ಇದ್ದರೆ ವ್ಯಕ್ತಿಯೊಬ್ಬನಿಗೆ 250 ರೂ. ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ: ರೈಲ್ವೇಗೆ ಇಸ್ರೋ ನೆರವು: ಮಾನವರಹಿತ ಲೆವೆಲ್ ಕ್ರಾಸಿಂಗ್‍ನಲ್ಲಿ ಅಪಘಾತ ತಪ್ಪಿಸಲು ಬಂದಿದೆ ವಿಶೇಷ ಚಿಪ್!

ಇದನ್ನೂ ಓದಿ:  ಗೋವಾದಿಂದ ಮುಂಬೈಗೆ ಮರಳಿದ ತೇಜಸ್ ರೈಲಿನ ಸ್ಥಿತಿ ನೋಡಿ ಅಧಿಕಾರಿಗಳಿಗೆ ಶಾಕ್!

 

Share This Article