ವಾರಣಾಸಿ: ಭಾರತೀಯ ರೈಲ್ವೆಯ ಉತ್ಪಾದಕ ಘಟಕವಾದ ವಾರಣಾಸಿಯ ದಿ ಡೀಸೆಲ್ ಲೋಕೋಮೋಟೀವ್ ವಕ್ರ್ಸ್(ಡಿಎಲ್‍ಡಬ್ಲ್ಯೂ) ಡೀಸೆಲ್ ಎಂಜಿನನ್ನು ಎಲೆಕ್ಟ್ರಿಕ್ ಎಂಜಿನ್ ಆಗಿ ಪರಿವರ್ತಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಮೇಕ್ ಇನ್ ಇಂಡಿಯಾ ಅಡಿ ಸ್ಥಳೀಯ ತಂತ್ರಜ್ಞಾನವನ್ನ ಬಳಸಿಕೊಂಡು ಡೀಸೆಲ್ ಎಂಜಿನನ್ನು ವಿದ್ಯುತ್ ಎಂಜಿನ್ ಆಗಿ ಪರಿವರ್ತಿಸಲಾಗಿದೆ. ಈ ರೀತಿ ಎಂಜಿನನ್ನು ಡೀಸೆಲ್ ನಿಂದ ಎಲೆಕ್ಟ್ರಿಕ್ ಟ್ರ್ಯಾಕ್ಷನ್ ಆಗಿ ಪರಿವರ್ತಿಸಿರುವುದು ವಿಶ್ವದಲ್ಲೇ ಇದೇ ಮೊದಲು ಎಂದು ಡಿಎಲ್‍ಡಬ್ಲ್ಯೂ ಅಧಿಕಾರಿಗಳು ಹೇಳಿದ್ದಾರೆ.
Advertisement
Advertisement
ಕಡಿಮೆ ಅವಧಿಯಲ್ಲಿ ಇಂಥಹ ಸವಾಲಿನ ಸಾಧನೆಯನ್ನ ಮಾಡಲಾಗಿದೆ. 2017ರ ಡಿಸೆಂಬರ್ 22ರಂದು ಇದರ ಕೆಲಸ ಶುರು ಮಾಡಲಾಗಿತ್ತು. 2018ರ ಫೆಬ್ರವರಿ 28ರಂದು ಎಂಜಿನ್ ಯಶಸ್ವಿಯಾಗಿ ಹೊರಬಂದಿದೆ ಎಂದು ಡಿಎಲ್‍ಡಬ್ಲ್ಯೂ ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ನಿತಿನ್ ಮೆಹ್ರೋತ್ರಾ ಹೇಳಿದ್ದಾರೆ. ಎಂಜಿನ್ ನ ಸುರಕ್ಷತೆಯ ಪರೀಕ್ಷೆ ಹಾಗೂ ಮತ್ತಷ್ಟು ಸುಧಾರಣೆಗಾಗಿ ಕಲಸ ಇನ್ನೂ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.
Advertisement
ರಿಸರ್ಚ್ ಡಿಸೈನ್ಸ್ ಅಂಡ್ ಸ್ಟಾಂಡಡ್ರ್ಸ್ ಆರ್ಗನೈಸೇಷನ್(ಆರ್‍ಡಿಎಸ್‍ಓ), ಚಿತ್ತರಂಜನ್ ಲೋಕೋಮೋಟೀವ್ ವಕ್ರ್ಸ್, ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್(ಬಿಹೆಚ್‍ಇಎಲ್) ಹಾಗೂ ಡಿಎಲ್‍ಡಬ್ಲ್ಯೂ ನ ಎಂಜಿನಿಯರ್‍ಗಳ ತಂಡ ಡಿಎಲ್‍ಡಬ್ಲ್ಯೂ ನ ಮ್ಯಾನೇಜರ್ ರಶ್ಮಿ ಗೋಯಲ್ ಅವರ ನಾಯಕತ್ವ ಮತ್ತು ರೈಲ್ವೆ ಬೋರ್ಡ್ ಸದಸ್ಯ ಘನಶ್ಯಾಮ್ ಸಿಂಗ್ ಅವರ ಮಾರ್ಗದರ್ಶನದಡಿ ಕೆಲಸ ಮಾಡಿದ್ದಾರೆ.
Advertisement
ಇಂತಹ ಮಹತ್ವದ ಕಾರ್ಯಕ್ಕಾಗಿ ಎಂಜಿನಿಯರ್‍ಗಳ ತಂಡ ಅತ್ಯಂತ ಕಠಿಣವಾದ ಟಾರ್ಗೆಟ್ ಹಾಕಿಕೊಂಡಿತ್ತು. ಅರ್ಧ ಆಯಸ್ಸು ಮುಗಿದಿರುವ ಎಂಜಿನ್‍ಗಳನ್ನೇ ಪರಿವರ್ತನೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಎಂಜಿನ್ ಚಾಸಿಸ್, ಬೋಗಿಗಳು ಮತ್ತು ಟ್ರ್ಯಾಕ್ಷನ್ ಮೋಟಾರ್‍ಗಳನ್ನ ಹಾಗೇ ಉಳಿಸಿಕೊಂಡು ಎಂಜಿನ್‍ಗೆ ಒಂದು ಹೊಸ ಹೃದಯ ನೀಡುವ ಕಾರ್ಯ ಇದಾಗಿತ್ತು. ಸ್ಥಗಿತಗೊಳಿಸಲಾಗಿದ್ದ ಡಬ್ಲ್ಯೂಎಎಮ್4 ಕ್ಲಾಸ್ ಎಲೆಕ್ಟ್ರಿಕ್ ಎಂಜಿನ್ ನ ಸೈಡ್‍ವಾಲ್‍ಗಳು ಹಾಗೂ ಛಾವಣಿಯನ್ನ ಬಳಸಲು ತಂಡ ಪ್ರಯತ್ನಿಸಿತು. ಈ ಕೆಲಸಕ್ಕಾಗಿ ಜಗತ್ತಿನಲ್ಲೆಲ್ಲೂ ಪೂರ್ವನಿದರ್ಶನ ಹಾಗು ಅನುಭವ ಇಲ್ಲದ ಕಾರಣ ವಿಸ್ತøತವಾದ ಸಿಸ್ಟಮ್ ಎಂಜಿನಿಯರಿಂಗ್‍ನ ಅಗತ್ಯವಿತ್ತು. ಆರ್‍ಡಿಎಸ್‍ಓ ಉಪಕರಣಗಳ ವಿನ್ಯಾಸ ಮಾಡಿತು ಹಾಗೇ ಡಬ್ಲ್ಯೂಡಿಜಿ3ಎ ಚಾಸ್ಸಿಸ್‍ನ ಮಾರ್ಪಾಡಿಗಾಗಿ ಡಿಎಲ್‍ಡಬ್ಲ್ಯೂ ಚಿತ್ರಗಳನ್ನ ತಯಾರಿಸಿತು ಎಂದು ನಿತಿನ್ ಮೆಹ್ರೋತ್ರಾ ತಿಳಿಸಿದ್ದಾರೆ.
Diesel loco WDG3 successfully converted to electric loco of 5000 HorsePower in record time of 68 days with pioneering effort by DLW With assistance of CLW,RDSO and guidance and motivation of Member Traction Shri G Singh pic.twitter.com/LTuFtYXhCQ
— Ministry of Railways (@RailMinIndia) March 3, 2018