InternationalLatestLeading NewsMain Post

ಎಲಿಜಬೆತ್-II ಅಂತ್ಯಕ್ರಿಯೆ ಹಿನ್ನೆಲೆ ಬ್ರಿಟನ್‍ಗೆ ತೆರಳಿದ ದ್ರೌಪದಿ ಮುರ್ಮು

ಲಂಡನ್: ಸೆಪ್ಟೆಂಬರ್ 19 ರಂದು ನಡೆಯಲಿರುವ ಬ್ರಿಟನ್ ರಾಣಿ ಎಲಿಜಬೆತ್-II (Elizabeth II) ಅಂತ್ಯಕ್ರಿಯೆಯಲ್ಲಿ (Funeral) ಭಾಗವಹಿಸಲು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (Indian President Draupadi Murmu) ಇಂಗ್ಲೆಂಡ್‍ಗೆ ತೆರಳಿದ್ದಾರೆ.

ಖಾಸಗಿ ವಿಮಾನದಲ್ಲಿ ಇಂಗ್ಲೆಂಡ್‍ಗೆ ತೆರಳಿದ್ದ ದ್ರೌಪದಿ ಮುರ್ಮು ಇಂದು ಮುಂಜಾನೆ ಲಂಡನ್‍ಗೆ ಬಂದಿಳಿದಿದ್ದು, ಭಾರತದ ಪರವಾಗಿ ರಾಜಮನೆತನಕ್ಕೆ ಸಂತಾಪ ಸೂಚಿಸಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ದ್ರೌಪದಿ ಮುರ್ಮು ಲಂಡನ್‍ನಲ್ಲಿ ರಾಣಿ ಎಲಿಜಬೆತ್-II ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದೇನೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಬಳಿಕ ದ್ರೌಪದಿ ಮುರ್ಮು ಕೈಗೊಳ್ಳುತ್ತಿರುವ ಮೊದಲ ವಿದೇಶಿ ಪ್ರವಾಸ ಇದಾಗಿದೆ. ಇದನ್ನೂ ಓದಿ: ಎಲಿಜಬೆತ್ ಅಂತಿಮ ದರ್ಶನಕ್ಕೆ ಚೀನಾ ನಿಯೋಗಕ್ಕಿಲ್ಲ ಅನುಮತಿ

ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬರುವ ಎಲ್ಲ ದೇಶಗಳ ಗಣ್ಯರು ಸರ್ಕಾರಿ ವಿಮಾನದ ಬದಲಾಗಿ ಖಾಸಗಿ ವಿಮಾನದಲ್ಲಿ ಬರಲು ಬ್ರಿಟನ್ ಅರಮನೆ ಮನವಿ ಮಾಡಿಕೊಂಡಿತ್ತು. ಹೀಗಾಗಿ ದ್ರೌಪದಿ ಮುರ್ಮು ಅವರು ಖಾಸಗಿ ವಿಮಾನದಲ್ಲಿ ಇಂಗ್ಲೆಂಡ್‍ಗೆ ತೆರಳಿದ್ದರು. ಇದನ್ನೂ ಓದಿ: ವಿಮ್ಸ್ ದುರಂತ: ಇಂದು ಸಚಿವ ಸುಧಾಕರ್ ಭೇಟಿ – ಕರೆಂಟ್ ಸಮಸ್ಯೆಯಿಂದ ಸಾವಾಗಿಲ್ಲ ಎಂದ ಶ್ರೀರಾಮುಲು

ಸೆಪ್ಟೆಂಬರ್ 8 ರಂದು ಎಲಿಜಬೆತ್-II ವಯೋಸಹಜ ಕಾಯಿಲೆಯಿಂದಾಗಿ ಸ್ಕಾಟ್ಲೆಂಡ್ ಅರಮನೆಯಲ್ಲಿ ಕೊನೆಯುಸಿರೆಳೆದಿದ್ದರು. 96 ವರ್ಷದ ರಾಣಿ ಕಳೆದ ವರ್ಷ ಅಕ್ಟೋಬರ್‌ನಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. 1923ರಿಂದ ಬ್ರಿಟನ್ ರಾಣಿಯಾಗಿದ್ದರು. ರಾಣಿ ನಿಧನದ ಬಳಿಕ ಗಣ್ಯರು ಸಂತಾಪ ಸೂಚಿಸಿದ್ದರು. ರಾಣಿಯ ಗೌರವಾರ್ಥವಾಗಿ ಭಾರತವು ಸೆಪ್ಟೆಂಬರ್ 11 ರಂದು ರಾಷ್ಟ್ರೀಯ ಶೋಕಾಚರಣೆಯ ದಿನವನ್ನಾಗಿ ಘೋಷಿಸಿತ್ತು.

Live Tv

Leave a Reply

Your email address will not be published. Required fields are marked *

Back to top button