ಜೈಪುರ: ಹಾರ್ದಿಕ್ ಪಾಂಡ್ಯ (Hardik Pandya) ಆಲ್‌ರೌಂಡರ್ ಆಟ ಹಾಗೂ ರಶೀದ್ ಖಾನ್ ಸ್ಪಿನ್ ದಾಳಿ ನೆರವಿನಿಂದ ಗುಜರಾತ್ ಟೈಟಾನ್ಸ್ (Rajasthan Royals) ತಂಡವು ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಗುಜರಾತ್ ಟೈಟಾನ್ಸ್ 10 ಪಂದ್ಯಗಳಲ್ಲಿ 7ರಲ್ಲಿ ಅಮೋಘ ಜಯ ಸಾಧಿಸುವ ಮೂಲಕ ಬಹುತೇಕ ಪ್ಲೇ ಆಫ್ ಪ್ರವೇಶಿಸಿದೆ.
10 ರಲ್ಲಿ 7 ಪಂದ್ಯಗಳಲ್ಲಿ ಜಯ ಸಾಧಿಸಿರುವ ಗುಜರಾತ್ 14 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಲಾ 11 ಅಂಕಗಳೊಂದಿಗೆ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ಇದನ್ನೂ ಓದಿ: ಯುದ್ಧ ಮುಂದುವರಿಸಲಿ – ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ದಾದಾ
Advertisement
Advertisement
ಶುಕ್ರವಾರ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 17.5 ಓವರ್‌ಗಳಲ್ಲೇ 118 ರನ್‌ಗಳಿಗೆ ಸರ್ವಪತನ ಕಂಡಿತು. 119 ರನ್‌ಗಳ ಗುರಿ ಬೆನ್ನತ್ತಿದ್ದ ಪಾಂಡ್ಯ ಪಡೆ 13.5 ಓವರ್‌ಗಳಲ್ಲೇ ಒಂದೇ ವಿಕೆಟ್ ನಷ್ಟಕ್ಕೆ 119 ರನ್ ಸಿಡಿಸಿ ಗೆಲುವು ಸಾಧಿಸಿತು.
Advertisement
ಚೇಸಿಂಗ್ ಆರಂಭಿಸಿದ ಗುಜರಾತ್ ಟೈಟಾನ್ಸ್ ನಿರಾಯಾಸವಾಗಿ ಗೆದ್ದು ಬೀಗಿತು. ಆರಂಭಿಕರಾಗಿ ಕಣಕ್ಕಿಳಿದ ವೃದ್ದಿಮಾನ್ ಸಾಹಾ ಶುಭಮನ್ ಗಿಲ್ (Shubman Gill) ಉತ್ತಮ ಶುಭಾರಂಭ ನೀಡಿದರು. ಆರಂಭಿಕ ಜೋಡಿ 9.4 ಓವರ್‌ಗಳಲ್ಲಿ 71 ರನ್ ಗಳಿಸಿತ್ತು. ಶುಭಮನ್ ಗಿಲ್ ಔಟಾಗುತ್ತಿದ್ದಂತೆ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ ಭರ್ಜರಿ ಸಿಕ್ಸರ್, ಬೌಂಡರಿ ಸಿಡಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.
Advertisement
ಟೈಟಾನ್ಸ್ ಪರ ವೃದ್ಧಿಮಾನ್ ಸಾಹಾ (Wriddhiman Saha) 40 ರನ್ (34 ಎಸೆತ, 5 ಬೌಂಡರಿ), ಶುಭಮನ್ ಗಿಲ್ 36 ರನ್ (35 ಎಸೆತ, 6 ಬೌಂಡರಿ) ಗಳಿದರೆ, ಸ್ಫೋಟಕ ಬ್ಯಾಟಿಂಗ್ ಮಾಡಿದ ನಾಯಕ ಹಾರ್ದಿಕ್ ಪಾಂಡ್ಯ ಕೇವಲ 15 ಎಸೆತಗಳಲ್ಲಿ 39 ರನ್ (3 ಸಿಕ್ಸರ್, 3 ಬೌಂಡರಿ) ಸಿಡಿಸಿ ಗೆಲುವು ತಂದುಕೊಟ್ಟರು. ರಾಜಸ್ಥಾನ್ ಪರ ಯಜುವೇಂದ್ರ ಚಾಹಲ್ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡ 118 ರನ್ ಗಳಿಸಿ ಆಲ್ಔಟ್ ಆಯಿತು. ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ (Yashasvi Jaiswal) ಹಾಗೂ ಜೋಸ್ ಬಟ್ಲರ್ ಕಣಕ್ಕಿಳಿದರು. ಜೋಸ್ ಬಟ್ಲರ್ 8 ರನ್ ಗಳಿಸಿ ನಿರ್ಗಮಿಸಿದರೆ, ಯಶಸ್ವಿ ಜೈಸ್ವಾಲ್ 11 ಎಸೆತಗಳಲ್ಲಿ 14 ರನ್ ಗಳಿಸಿದ್ದಾಗ ರನ್ ಔಟ್‌ಗೆ ತುತ್ತಾದರು. ಆರಂಭದಲ್ಲೇ ಆಘಾತ ಎದುರಿಸಿದ ರಾಜಸ್ಥಾನ್ ರಾಯಲ್ಸ್ ಪರ ಉಳಿದಂತೆ ಸಂಜು ಸ್ಯಾಮ್ಸನ್ (Sanju Samson) 20 ಎಸೆತಗಳಲ್ಲಿ 30 ರನ್, ದೇವದತ್ ಪಡಿಕ್ಕಲ್ 12 ರನ್, ರವಿಚಂದ್ರನ್ ಅಶ್ವಿನ್ 2 ರನ್, ರಿಯಾನ್ ಪರಾಗ್ 4 ರನ್, ಶಿಮ್ರಾನ್ ಹೆಟ್ಮೇಯರ್ 7 ರನ್, ಧ್ರುವ್ ಜುರೆಲ್ 9 ರನ್, ಟ್ರೆಂಟ್ ಬೌಲ್ಟ್ 15 ರನ್, ಆಡಂ ಜಂಪಾ 7 ರನ್ ಹಾಗೂ ಸಂದೀಪ್ ಶರ್ಮಾ ಅಜೇಯ 2 ರನ್ ಗಳಿಸಿದರು.
ಹೀಗೆ ನಾಯಕ ಸಂಜು ಸ್ಯಾಮ್ಸನ್ ಹೊರತುಪಡಿಸಿ ರಾಜಸ್ಥಾನ್ ರಾಯಲ್ಸ್ ತಂಡದ ಯಾವೊಬ್ಬ ಆಟಗಾರನೂ ಸಹ 20 ರನ್‌ಗಳ ಗಡಿ ದಾಟದೇ ಇದ್ದು ತಂಡದ ಕಳಪೆ ಮೊತ್ತಕ್ಕೆ ಕಾರಣವಾಯಿತು. ಇದನ್ನೂ ಓದಿ: ರಿಂಕು, ರಾಣಾ ಬ್ಯಾಟಿಂಗ್, ಮ್ಯಾಜಿಕ್ ಫೀಲ್ಡಿಂಗ್ – KKRಗೆ 5 ರನ್‌ಗಳ ರೋಚಕ ಜಯ
ರಶೀದ್ ಸ್ಪಿನ್ ಜಾದು: ಗುಜರಾತ್ ಟೈಟಾನ್ಸ್ ಪರ ರಶೀದ್ ಖಾನ್ (Rashid Khan) ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ 4 ಓವರ್‌ಗಳಲ್ಲಿ ಕೇವಲ 14 ರನ್ ನೀಡಿ 3 ವಿಕೆಟ್ ಪಡೆದರೆ, ಉಳಿದಂತೆ ನೂರ್ ಅಹ್ಮದ್ 2 ವಿಕೆಟ್, ಜೋಶ್ವಾ ಲಿಟಲ್, ಮೊಹಮ್ಮದ್ ಶಮಿ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.