ಅಹಮದಾಬಾದ್: ಶುಭಮನ್ ಗಿಲ್ (Shubman Gill) ಭರ್ಜರಿ ಶತಕದ ಬ್ಯಾಟಿಂಗ್ ಹಾಗೂ ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ ಮಾರಕ ಬೌಲಿಂಗ್ ದಾಳಿ ನೆರವಿನಿಂದ ಗುಜರಾತ್ ಟೈಟಾನ್ಸ್ (Gujarat Titans) ತಂಡ ಹೈದರಾಬಾದ್ ವಿರುದ್ಧ 34 ರನ್‌ಗಳ ಜಯ ಸಾಧಿಸಿದೆ.
ಈ ಮೂಲಕ 2023ರ ಆವೃತ್ತಿಯಲ್ಲೂ 13ರ ಪೈಕಿ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್‌ಗೆ ಭರ್ಜರಿ ಎಂಟ್ರಿ ಕೊಟ್ಟ ಮೊದಲ ತಂಡವಾಗಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಹೈದರಾಬಾದ್ (Sunrisers Hyderabad) ತಂಡ 12 ಪಂದ್ಯಗಳಲ್ಲಿ ಕೇವಕ 4ರಲ್ಲಿ ಗೆಲುವು ಸಾಧಿಸಿ ಬಹುತೇಕ ಮನೆಗೆ ಮರಳೋದು ಖಚಿತವಾಗಿದೆ.
Advertisement
Advertisement
ಮೊದಲು ಬ್ಯಾಟಿಂಗ್ ಮಾಡಿದ ಟೈಟಾನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತ್ತು. ಗೆಲುವಿಗೆ 189 ರನ್‌ಗಳ ಬೃಹತ್ ಮೊತ್ತದ ಗುರಿ ಪಡೆದ ಹೈದರಾಬಾದ್ 20 ನಿಗದಿತ ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 154ರನ್ ಗಳಿಸಿ ಸೋಲೊಪ್ಪಿಕೊಂಡಿತು.
Advertisement
ಚೇಸಿಂಗ್ ಆರಂಭಿಸಿದ ಹೈದರಾಬಾದ್ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಪವರ್ ಪ್ಲೇ ಮುಗಿಯುವಷ್ಟರಲ್ಲೇ 45 ರನ್ ಗಳಿಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. 9ನೇ ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದುಕೊಂಡು ಗೆಲುವಿನ ಭರವಸೆಯನ್ನೇ ಕಳೆದುಕೊಂಡಿತು.
Advertisement
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಹೋರಾಟ ನಡೆಸಿದ ಹೆನ್ರಿಚ್ ಕಳಸೇನ್ ಅರ್ಧಶತಕ ಗಳಿಸಿದರು. ಕಳಸೇನ್ 44 ಎಸೆತಗಳಲ್ಲಿ 64 ರನ್ (4 ಬೌಂಡರಿ, 3 ಸಿಕ್ಸರ್) ಗಳಿಸಿದರು. ಇದರೊಂದಿಗೆ ಭುವನೇಶ್ವರ್ ಕುಮಾರ್ 27 ರನ್, ಕೊನೆಯಲ್ಲಿ ಮಯಾಂಕ್ ಮಾರ್ಕಂಡೆ 9 ಎಸೆತಗಳಲ್ಲಿ ಸ್ಫೋಟಕ 18 ರನ್ ಗಳಿಸಿದ್ದು ಬಿಟ್ಟರೆ, ಉಳಿದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳ ಕಳಪೆ ಪ್ರದರ್ಶನದಿಂದಾಗಿ ತಂಡ ಸೊಲೊಪ್ಪಿಕೊಳ್ಳಬೇಕಾಯಿತು.
ಗುಜರಾತ್ ಟೈಟಾನ್ಸ್ ಪರ ಬೆಂಕಿ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ಶಮಿ 4 ಓವರ್‌ಗಳಲ್ಲಿ 21 ರನ್ ನೀಡಿ 4 ವಿಕೆಟ್ ಕಿತ್ತರೆ, ಮೋಹಿತ್ ಶರ್ಮಾ 4 ಓವರ್‌ಗಳಲ್ಲಿ 28 ರನ್ ನೀಡಿ 4 ವಿಕೆಟ್ ಉರುಳಿಸಿದರು. ಯಶ್ ದಯಾಳ್ 1 ವಿಕೆಟ್ ಪಡೆದರು.
ಐಪಿಎಲ್‌ನಲ್ಲಿ ಗಿಲ್ ಚೊಚ್ಚಲ ಶತಕ: ಈ ವರ್ಷದ ಆರಂಭದಿಂದಲೂ ಬ್ಯಾಟಿಂಗ್ ಫಾರ್ಮ್‌ನಲ್ಲಿರುವ ಶುಭಮನ್ ಗಿಲ್ ಈ ಬಾರಿ ಐಪಿಎಲ್‌ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಸೋಮವಾರದ ಪಂದ್ಯದಲ್ಲೂ ಹೈದರಾಬಾದ್ ಬೌಲರ್‌ಗಳನ್ನ ಬೆಂಡೆತ್ತಿದ್ದ ಗಿಲ್ ಶತಕ ಸಿಡಿಸಿ ಮಿಂಚಿದರು. 58 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್‌ನೊಂದಿಗೆ 101 ರನ್ ಗಳಿಸಿದರು. ಇದು ಐಪಿಎಲ್‌ನಲ್ಲಿ ಗಿಲ್ ಸಿಡಿಸಿದ ಚೊಚ್ಚಲ ಶತಕ ಹಾಗೂ ಟಿ20 ಫಾರ್ಮ್ಯಾಟ್‌ನಲ್ಲಿ ಚಚ್ಚಿದ 2ನೇ ಶತಕವಾಯಿತು. ಇದರೊಂದಿಗೆ ಸಾಯಿ ಸುದರ್ಶನ್ 36 ಎಸೆತೆಗಳಲ್ಲಿ 47 ರನ್ (6 ಬೌಂಡರಿ, 1 ಸಿಕ್ಸರ್) ಗಳಿಸಿ ಸಾಥ್ ನೀಡಿದರು. ಇವರಿಬ್ಬರ ಜೊತೆಯಾಟದಿಂದ 2ನೇ ವಿಕೆಟ್ ಪತನಕ್ಕೆ 14.1 ಓವರ್‌ಗಳಲ್ಲಿ 147 ರನ್ ಸೇರ್ಪಡೆಯಾಯಿತು.
ಭುವಿ ಬೆಂಕಿ ಬೌಲಿಂಗ್: ಸನ್ ರೈಸರ್ಸ್ ಹೈದರಾಬಾದ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಭುವನೇಶ್ವರ್ ಕುಮಾರ್ 4 ಓವರ್‌ಗಳಲ್ಲಿ 30 ರನ್ ನೀಡಿ ಪ್ರಮುಖ 5 ವಿಕೆಟ್ ಕಿತ್ತರೇ, ಮಾರ್ಕೊ ಜಾನ್ಸೆನ್, ಫಜಲ್‌ಹಕ್ ಫಾರೂಕಿ ಹಾಗೂ ಟಿ. ನಟರಾಜನ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.