ಹೈದರಾಬಾದ್: ರಿಂಕು ಸಿಂಗ್ (Rinku Singh), ನಾಯಕ ನಿತೀಶ್ ರಾಣಾ (Nitish Rana) ಸಂಘಟಿತ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿ ನೆರವಿನಿಂದ ಕೋಲ್ಕತ್ತಾ ನೈಟ್‌ರೈಡರ್ಸ್ (Kolkata Knight Riders) ತಂಡವು ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿತು.
ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು. ಗೆಲುವಿಗೆ 172 ರನ್ ಗುರಿ ಪಡೆದ ಸನ್ ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ ಸೋಲೊಪ್ಪಿಕೊಂಡಿತು.
Advertisement
Advertisement
ಚೇಸಿಂಗ್ ಆರಂಭಿಸಿದ ಹೈದರಾಬಾದ್ ತಂದ ಮೊದಲ 10 ಓವರ್‌ಗಳಲ್ಲಿ 75 ರನ್ ಗಳಿಸಿತ್ತು. ಇನ್ನೂ 60 ಎಸೆತಗಳಲ್ಲಿ 97 ರನ್‌ಗಳ ಅಗತ್ಯವಿತ್ತು. ರನ್ ಗಳಿಕೆಯಲ್ಲಿ ಉತ್ತಮ ಸ್ಥಿತಿಯಲ್ಲಿದ್ದರೂ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಯಕ ಏಡನ್ ಮಾರ್ಕ್ರಮ್ ಹಾಗೂ ಹೆನ್ರಿಕ್ ಕ್ಲಾಸೆನ್ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ತಂಡಕ್ಕೆ ಮತ್ತಷ್ಟು ರನ್ ಸೇರ್ಪಡೆಯಾಯಿತು. ತಂಡದಲ್ಲಿ ಗೆಲುವಿನ ಆಸೆಯೂ ಚಿಗುರಿತ್ತು.
Advertisement
Advertisement
11 ರಿಂದ 19ನೇ ಓವರ್‌ವರೆಗೆ ಕ್ರಮವಾಗಿ 15, 12, 12, 10, 10, 4, 8, 5, 12 ರನ್ ಸೇರ್ಪಡೆಯಾಯಿತು. ಕೊನೆಯ ಓವರ್‌ನಲ್ಲಿ 9 ರನ್ ಬೇಕಿದ್ದಾಗ ವರುಣ್ ಚಕ್ರವರ್ತಿ ಬೌಲಿಂಗ್‌ನಲ್ಲಿದ್ದರು. ಮೊದಲ ಎರಡು ಎಸೆತಗಳಲ್ಲಿ ತಲಾ ಒಂದೊಂದು ರನ್ ಸೇರ್ಪಡೆಯಾಯಿತು. ಆದ್ರೆ ಕ್ರೀಸ್‌ನಲ್ಲಿದ್ದ ಅಬ್ದುಲ್ ಸಮದ್ 3ನೇ ಎಸೆತವನ್ನು ಸಿಕ್ಸ್ ಸಿಡಿಸಲು ಯತ್ನಿಸಿ ಬೌಂಡರಿ ಲೈನ್ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. ಬಳಿಕ 3 ಎಸೆತದಲ್ಲಿ ಒಂದೊಂದು ರನ್ ಗಳಷ್ಟೇ ಗಳಿಸಲಾಗಿ ತಂಡ ಸೊಲೊಪ್ಪಿಕೊಂಡಿತು.
ಹೈದರಾಬಾದ್ ಪರ ಮಯಾಂಕ್ ಅಗರ್ವಾಲ್ 18 ರನ್, ರಾಹುಲ್ ತ್ರಿಪಾಠಿ 20 ರನ್, ಏಡನ್ ಮಾರ್ಕ್ರಮ್ 41 ರನ್, ಹೆನ್ರಿಕ್ ಕ್ಲಾಸೆನ್ 36 ರನ್ ಹಾಗೂ ಅಬ್ದುಲ್ ಸಮದ್ 21 ರನ್ ಗಳಿಸಿದರು.
ಕೆಕೆಆರ್ ಪರ ವೈಭವ್ ಅರೋರ, ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಪಡೆದರೆ, ಹರ್ಶಿತ್ ರಾಣಾ, ರಸ್ಸೆಲ್, ಅನುಕುಲ್ ರಾಯ್ ಹಾಗೂ ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಕಿತ್ತರು.
ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ರನ್ ಕಲೆಹಾಕುತ್ತಾ ಸಾಗಿತು. ಮಧ್ಯಮ ಕ್ರಮಾಂಕದಲ್ಲಿ ನಾಯಕ ನಿತೀಶ್ ರಾಣಾ, ರಿಂಕು ಸಿಂಗ್ ಹಾಗೂ ಆ್ಯಂಡ್ರೆ ರಸ್ಸೆಲ್ ಬ್ಯಾಟಿಂಗ್ ನೆರವಿನಿಂದ 170 ರನ್‌ಗಳ ಗಡಿದಾಟುವಲ್ಲಿ ಯಶಸ್ವಿಯಾಯಿತು.
ಕೆಕೆಆರ್ ಪರ ನಾಯಕ ರಿಂಕು ಸಿಂಗ್ 46 ರನ್ (35 ಎಸೆತ, 4 ಬೌಂಡರಿ, 1 ಸಿಕ್ಸರ್), ನಿತೀಶ್ ರಾಣಾ 42 ರನ್ (31 ಎಸೆತ, 3 ಬೌಂಡರಿ, 3 ಸಿಕ್ಸರ್), ರಸ್ಸೆಲ್ 24 ರನ್ ಹಾಗೂ ಜೇಸನ್ ರಾಯ್ 20 ರನ್ ಗಳಿಸಿ ತಂಡಕ್ಕೆ ನೆರವಾದರು.
ಹೈದರಾಬಾದ್ ಪರ ಮಾರ್ಕೊ ಜಾನ್ಸೆನ್, ಟಿ. ನಟರಾಜನ್ ತಲಾ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್, ಕಾರ್ತಿಕ್ ತ್ಯಾಗಿ, ಏಡನ್ ಮಾರ್ಕ್ರಮ್, ಮಯಾಂಕ್ ಮಾರ್ಕಂಡೆ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.