ಮೊಹಾಲಿ: ಶುಭಮನ್ ಗಿಲ್ (Shubman Gill) ಭರ್ಜರಿ ಅರ್ಧ ಶತಕದ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿ ನೆರವಿನಿಂದ ಗುಜರಾತ್ ಜೈಂಟ್ಸ್ (Gujarat Titans) ತಂಡವು ಕಿಂಗ್ಸ್ ಪಂಜಾಬ್ (Punjab Kings) ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದೆ.
Advertisement
ಕೊನೆಯ 6 ಎಸೆತಗಳಲ್ಲಿ 6 ರನ್‌ಗಳ ಅಗತ್ಯವಿತ್ತು. ಈ ವೇಳೆ ಬೌಲಿಂಗ್‌ಗಿಳಿದ ಸ್ಯಾಮ್ ಕರ್ರನ್ (Sam Curran) ಮೊದಲ ಎಸೆತದಲ್ಲಿ ರನ್ ನೀಡಿದರೆ, 2ನೇ ಎಸೆತದಲ್ಲಿ ಶುಭಮನ್ ಗಿಲ್ ಅವರನ್ನ ಕ್ಲೀನ್ ಬೌಲ್ಡ್ ಮಾಡಿದರು. ನಂತರ ಕ್ರೀಸ್‌ಗೆ ಬಂದ ರಾಹುಲ್ ತೆವಾಟಿಯ 1 ರನ್ ಕದ್ದರು, ಮರು ಎಸೆತದಲ್ಲಿ ಡೇವಿಡ್ ಮಿಲ್ಲರ್ ರನೌಟ್ ಆಗುವ ಸಾಧ್ಯತೆಯಿತ್ತು. ಆದರೆ ಒಂದು ಕರ್ರನ್ ಯಾವುದೇ ಪ್ರಯತ್ನ ಮಾಡದೇ 1 ರನ್ ನೀಡಿದರು. ಕೊನೆಯ 2 ಎಸೆತಗಳಲ್ಲಿ 4ರನ್ ಬೇಕಿದ್ದಾಗ ತೆವಾಟಿಯಾ ಬೌಂಡರಿ ಬಾರಿಸಿ ತಂಡಕ್ಕೆ ರೋಚಕ ಜಯ ತಂದರು.
Advertisement
Advertisement
ಇಲ್ಲಿನ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತ್ತು. 154 ರನ್‌ಗಳ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ್ದ ಗುಜರಾತ್ ಟೈಟಾನ್ಸ್ 19.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿ ಗೆಲುವು ಸಾಧಿಸಿತು.
Advertisement
ಚೇಸಿಂಗ್ ಆರಂಭಿಸಿದ ಗುಜರಾತ್ ಟೈಟಾನ್ಸ್ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಶುಭಮನ್ ಗಿಲ್ ಹಾಗೂ ವೃದ್ಧಿಮಾನ್ ಸಾಹಾ ಜೋಡಿ ಮೊದಲ ವಿಕೆಟ್ ಪತನಕ್ಕೆ 4.4 ಓವರ್‌ಗಳಲ್ಲಿ 48 ರನ್ ಕಲೆಹಾಕಿತ್ತು. ವೃದ್ಧಿಮಾನ್ ಸಾಹಾ 19 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ ಸ್ಫೋಟಕ 30 ರನ್ ಚಚ್ಚಿದರು. ಸಾಹಾ ಔಟಾಗುತ್ತಿದ್ದಂತೆ ರನ್ ಕದಿಯುವಲ್ಲಿ ತಂಡ ಹೆಣಗಾಡಿತ್ತು.
ನಿಧಾನಗತಿಯ ಬ್ಯಾಟಿಂಗ್ ಮಾಡಿದ ಶುಭಮನ್ ಗಿಲ್ ಕೊನೆಯ ಓವರ್ ವರೆಗೂ ಹೋರಾಡಿ 49 ಎಸೆತಗಳಲ್ಲಿ 67 ರನ್ (7 ಬೌಂಡಿರಿ, 1 ಸಿಕ್ಸರ್) ಗಳಿಸಿ ಔಟಾದರು. ಈ ನಡುವೆ ಸಾಯಿ ಸುದರ್ಶನ್ 19 ರನ್, ಹಾರ್ದಿಕ್ ಪಾಂಡ್ಯ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಡೇವಿಡ್ ಮಿಲ್ಲರ್ 17 ರನ್, 5 ರನ್ ಗಳಿಸಿ ಅಜೇಯರಾಗುಳಿದರು.
ಪಂಜಾಬ್ ಕಿಂಗ್ಸ್ ಪರ ಅರ್ಷ್‌ದೀಪ್ ಸಿಂಗ್, ಕಗಿಸೋ ರಬಾಡ, ಹರ್ಪ್ರೀತ್ ಬ್ರಾರ್, ಸ್ಯಾಮ್ ಕರ್ರನ್ ತಲಾ ಒಂದೊಂದು ವಿಕೆಟ್‌ಕಿತ್ತರು.
ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ ಅಗ್ರಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳ ಕಳಪೆ ಪ್ರದರ್ಶನದಿಂದ ಬೃಹತ್ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು. ಮ್ಯಾಥಿವ್ ಶಾರ್ಟ್ 36 ರನ್, ಭಾನುಕ ರಾಜಪಕ್ಸ 20 ರನ್, ಜಿತೇಶ್ ಶರ್ಮಾ 25 ರನ್, ಸ್ಯಾಮ್ ಕರ್ರನ್ 22 ರನ್ ಹಾಗೂ ಎಂ.ಶಾರೂಖ್ ಖಾನ್ 22 ರನ್ ಗಳಿಸಿ, ತಂಡದ ಮೊತ್ತ 150ರನ್ ಗಡಿ ದಾಟಿಸಿದರು. ಆದರೆ ಯಾರೊಬ್ಬರು ಹೆಚ್ಚು ಮೊತ್ತ ಕಲೆಹಾಕದ ಕಾರಣ ತಂಡ ಸಾಧಾರಣ ಮೊತ್ತಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಗುಜರಾತ್ ಟೈಟಾನ್ಸ್ ಪರ ಮೋಹಿತ್ ಶರ್ಮಾ 2 ವಿಕೆಟ್ ಕಿತ್ತರೆ, ಮೊಹಮ್ಮದ್ ಶಮಿ, ಜೋಶ್ ಲಿಟಲ್, ಅಲ್ಝರಿ ಜೋಸೆಫ್ ಹಾಗೂ ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.