ಮುಂಬೈ: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಕೊನೆಗೂ ಐಪಿಎಲ್‌ಗೆ (IPL 2023) ಎಂಟ್ರಿ ಕೊಟ್ಟಿದ್ದಾರೆ.
ಕಳೆದ 2 ವರ್ಷಗಳಿಂದಲೂ ಮುಂಬೈ ಬೆಂಚ್‌ಗಾಗಿ ಕಾದಿದ್ದ ಅರ್ಜುನ್ ತೆಂಡೂಲ್ಕರ್ ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕೆಕೆಆರ್ (KKR) ವಿರುದ್ಧದ ಪಂದ್ಯ ಆಡುವ ಮೂಲಕ ತಮ್ಮ ಕನಸು ನನಸಾಗಿಸಿಕೊಂಡಿದ್ದಾರೆ. ಅಪ್ಪ ಸಚಿನ್ ತೆಂಡೂಲ್ಕರ್ ಆಡಿದ್ದ ಅದೇ ತಂಡದ ಮೂಲಕ ಮಗ ಐಪಿಎಲ್‌ಗೆ ಎಂಟ್ರಿ ಕೊಟ್ಟಿರುವುದು ವಿಶೇಷವಾಗಿದೆ.
Advertisement
Advertisement
ಮುಂಬೈ ಇಂಡಿಯನ್ಸ್ (Mumbai Indians) ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಭಾನುವಾರ ಪಂದ್ಯಕ್ಕೆ ಕ್ಯಾಪ್ ನೀಡಿ ಅರ್ಜುನ್ ಅವರನ್ನ ಸ್ವಾಗತಿಸಿದ್ದಾರೆ. ಇದನ್ನೂ ಓದಿ: IPL 2023: ಇಶಾನ್ ಕಿಶನ್ ಶೈನ್, ಅಯ್ಯರ್ ಶತಕದಾಟ ವ್ಯರ್ಥ – ಮುಂಬೈಗೆ 5 ವಿಕೆಟ್‌ಗಳ ಜಯ
Advertisement
2022ರ ಐಪಿಎಲ್ ಹರಾಜಿನಲ್ಲಿ ಅರ್ಜುನ್ ಮುಂಬೈ ಇಂಡಿಯನ್ಸ್‌ಗೆ 30 ಲಕ್ಷಕ್ಕೆ ಬಿಕರಿಯಾಗಿದ್ದರು. ಅದಕ್ಕೂ ಮುನ್ನ 2021ರಲ್ಲಿ 20 ಲಕ್ಷಕ್ಕೆ ಹರಾಜಾಗಿದ್ದರು. ಆದರೆ ಐಪಿಎಲ್‌ಗೂ ಮುನ್ನವೇ ಗಾಯಗೊಂಡಿದ್ದರಿಂದ ಟೂರ್ನಿಯಿಂದಲೇ ಹೊರಬಿದ್ದರು. 2021ರ ಆವೃತ್ತಿಯಲ್ಲಿ ಒಂದು ಪಂದ್ಯವನ್ನೂ ಆಡುವ ಅವಕಾಶ ಸಿಗಲಿಲ್ಲ. 2022ರಲ್ಲೂ ಮುಂಬೈ ಇಂಡಿಯನ್ಸ್ ತಂಡಕ್ಕೆ ಹರಾಜಾದರೂ ಮೈದಾನದಲ್ಲಿ ಆಟುವ ಅವಕಾಶ ಸಿಗಲಿಲ್ಲ. ಆದ್ರೆ 16ನೇ ಆವೃತ್ತಿಯಲ್ಲಿ ಅದೃಷ್ಟ ಕೈಹಿಡಿದಿದ್ದು, ಕೊನೆಗೂ ಮೈದಾನಕ್ಕೆ ಕಾಲಿಟ್ಟಿದ್ದಾರೆ.
Advertisement
ಈ ಬಾರಿಯ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಲ್ಕನೇ ಪಂದ್ಯದಲ್ಲಿ ಅರ್ಜುನ್ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬ್ಯಾಟಿಂಗ್ ಮಾಡುವ ಅವಕಾಶ ಕೈತಪ್ಪಿದರೂ ಬೌಲಿಂಗ್‌ನಲ್ಲಿ ಕಮಾಲ್ ಮಾಡಿದ್ದಾರೆ. 2 ಓವರ್‌ಗಳಲ್ಲಿ ಕಂಟ್ರೋಲ್ ಮಾಡಿ 17 ರನ್ ನೀಡಿದ್ದಾರೆ. ಇದನ್ನೂ ಓದಿ: ಎಸ್‌ಡಿಪಿಐ ಜೊತೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್‌ಗೆ ಹೋಗಲು ನಾಚಿಕೆ ಆಗಲ್ವಾ? – ಶೆಟ್ಟರ್, ಸವದಿ ವಿರುದ್ಧ ಯತ್ನಾಳ್ ಕಿಡಿ
ಭಾನುವಾರ ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ (KKR) 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ಸಂಘಟಿತ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ 17.4 ಓವರ್‌ಗಳಲ್ಲೇ 186 ರನ್ ಗಳಿಸಿ ಗೆದ್ದು ಬೀಗಿತು.