ನವದೆಹಲಿ: ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ಪ್ರಯಾಣಿಕರು ಕತಾರ್ ಮೂಲಕ ವಿಮಾನದಲ್ಲಿ ಭಾರತಕ್ಕೆ ಹಿಂದಿರುಗಬಹುದು ಎಂದು ಕೇಂದ್ರ ತಿಳಿಸಿದೆ.
ಉಕ್ರೇನ್‍ಲ್ಲಿ ವಾಯುಯಾನ ಮತ್ತೆ ಪ್ರಾರಂಭವಾದ ಬಳಿಕವಷ್ಟೇ ವಿಮಾನ ಸೇವೆಗಳು ಪುನರಾರಂಭವಾಗಲು ಸಾಧ್ಯ. ಇದೀಗ ಉಕ್ರೇನ್‍ನಲ್ಲಿ ಸಿಲುಕಿರುವ 20 ಸಾವಿರ ಭಾರತೀಯರು ಮರಳಿ ಬರಲು ಕತಾರ್ ಮಾರ್ಗ ಹಿಡಿಯುವುದು ಒಳಿತು ಎಂಬ ಸಲಹೆಯನ್ನು ವಾಯುಯಾನ ತಜ್ಞರು ನೀಡಿದ್ದಾರೆ. ಇದನ್ನೂ ಓದಿ: Russia-Ukraine War: ಯುದ್ಧ ನಿಲ್ಲಿಸಿ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿ – ಪುಟಿನ್‍ಗೆ ಮೋದಿ ಮನವಿ
Advertisement
Government of India, Ministry of Civil Aviation has allowed passengers traveling from Ukraine to travel by transit under India- Qatar bilateral air bubble arrangement.
— India in Qatar (@IndEmbDoha) February 24, 2022
Advertisement
ಉಕ್ರೇನ್ ಮೇಲೆ ರಷ್ಯಾ ದಾಳಿ ಪ್ರಾರಂಭಿಸಿದ ಬಳಿಕ ಉಕ್ರೇನ್‍ನ ವಾಯುಪ್ರದೇಶ ಮುಚ್ಚಿಹೋಗಿದೆ. ಇದೀಗ ಭಾರತೀಯರು ಕತಾರ್‍ನಿಂದ ಭಾರತಕ್ಕೆ ಮರಳಲು ಮೊದಲು ಕತಾರ್ ತಲುಪಬೇಕಾಗಿದೆ. ಆದರೆ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರು ಹೇಗೆ ಕತಾರ್ ಪ್ರವೇಶಿಸಬೇಕೆಂಬ ವಿಷಯವನ್ನು ಸ್ಪಷ್ಟಪಡಿಸಿಲ್ಲ. ಇದನ್ನೂ ಓದಿ: ಮೆಟ್ರೋ ಸುರಂಗದಲ್ಲಿ ಅವಿತಿದ್ದಾರೆ ಕನ್ನಡಿಗರು!
Advertisement
ಈ ಬಗ್ಗೆ ಕತಾರ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವಿಟ್ಟರ್‍ನಲ್ಲಿ ಭಾರತೀಯ ಸರ್ಕಾರ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯ ಉಕ್ರೇನ್‍ನಲ್ಲಿರುವ ಭಾರತದ ಪ್ರಯಾಣಿಕರಿಗೆ ಕತಾರ್‍ನಿಂದ ಭಾರತಕ್ಕೆ ಹಿಂದಿರುಗಲು ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ ಉಕ್ರೇನ್‍ನಿಂದ ಭಾರತೀಯರು ಏರ್ ಬಬಲ್ ವ್ಯವಸ್ಥೆಯ ಅಡಿಯಲ್ಲಿ ಸಾರಿಗೆ ಮುಖಾಂತರ ಕತಾರ್ ಪ್ರವೇಶಿಸಬಹುದು ಎಂದು ತಿಳಿಸಿದೆ.