ನ್ಯೂಯಾರ್ಕ್: 9 ವರ್ಷದ ಮಗಳನ್ನು ಕೊಂದ ಭಾರತದ ಪಂಜಾಬ್ ಮೂಲದ ಮಲತಾಯಿಗೆ ಅಮೇರಿಕದ ಕ್ವೀನ್ಸ್ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ನ್ಯೂಯಾರ್ಕ್‍ನ ಕ್ವೀನ್ಸ್ ನಲ್ಲಿ ನೆಲೆಸಿದ್ದ ಶಾಂದೈ ಅರ್ಜುನ್ (55 ) ತನ್ನ 9 ವರ್ಷದ ಅಶ್‍ದೀಪ್ ಕೌರ್‍ನನ್ನು ಬಾತ್‍ರೂಮಿನಲ್ಲಿ ಹೊಡೆದು ಕೊಲೆ ಮಾಡಿದ್ದಳು.
Advertisement
ಭಾರತದಿಂದ ತಂದೆಯನ್ನು ನೋಡಲು ಬಂದಿದ್ದ ಬಾಲಕಿಯನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಮೇರಿಕ ನ್ಯಾಯಾಲಯದ ನ್ಯಾಯಮೂರ್ತಿ ಕೆನ್ನೆತ್ ಹೋಲ್ಡರ್ ಅವರು ಶಾಂದೈ ಅರ್ಜುನ್‍ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
Advertisement
Advertisement
ಈ ಪ್ರಕರಣ ತುಂಬಾ ಭಯಾನಕವಾಗಿದೆ. ತನ್ನ ಮಗಳನ್ನು ರಕ್ಷಿಸಬೇಕಾದ ಮಲತಾಯಿಯೇ ಆಕೆಯನ್ನು ಘೋರವಾಗಿ ಕೊಲೆ ಮಾಡಿರುವುದು ತುಂಬಾ ದೊಡ್ಡ ಅಪರಾಧ. ಈ ಮಹಿಳೆಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯಾಗಬೇಕು ಎಂದು ಕ್ವೀನ್ಸ್ ಜಿಲ್ಲೆಯಾ ವಕೀಲರಾದ ಜಾನ್ ರಾಯಾನ್ ಅವರು ಹೇಳಿದ್ದಾರೆ.
Advertisement
ಏನಿದು ಪ್ರಕರಣ?
2016ರಲ್ಲಿ ಭಾರತದಿಂದ ತನ್ನ ತಂದೆಯನ್ನು ನೋಡಲು ಅಮೇರಿಕಕ್ಕೆ ಬಂದಿದ್ದ ಅಶ್‍ದೀಪ್ ಕೌರ್ ಎಂಬ 9 ವರ್ಷದ ಬಾಲಕಿಯನ್ನು ಬಾತ್‍ರೂಮಿನಲ್ಲಿ ಕೊಲೆ ಮಾಡಲಾಗಿತ್ತು. ಅಮೇರಿಕದ ಕ್ವೀನ್ಸ್ ನಲ್ಲಿ ಅಪಾಟ್ರ್ಮೆಂಟ್‍ವೊಂದಲ್ಲಿ ವಾಸವಿದ್ದ ಶಾಂದೈ ಅರ್ಜುನ್ ಅವರು ತಮ್ಮ ಮನೆಯ ಬಾತ್‍ರೂಮಿನಲ್ಲಿ ಮಲಮಗಳನ್ನು ಹತ್ಯೆ ಮಾಡಿದ್ದಳು. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಮಾಡಲಾಗಿದೆ ಎನ್ನುವ ಫಲಿತಾಂಶ ಪ್ರಕಟವಾಗಿತ್ತು. ಶಾಂದೈ ಅರ್ಜುನ್ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಳು.