ಲಂಡನ್: ಯುಕೆ ಸಂಸತ್ತಿನಲ್ಲಿ (UK Parliament) ಭಾರತೀಯ ಮೂಲದ ಭಾರತೀಯ ಮೂಲದ ಶಿವಾನಿ ರಾಜಾ (Shivani Raja) ಅವರು ಭಗವದ್ಗೀತೆಯನ್ನು (Bhagavad Gita) ಹಿಡಿದುಕೊಂಡು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಗುಜರಾತ್ ಮೂಲದ 29 ವರ್ಷದ ಶಿವಾನಿ ಅವರು ಉದ್ಯಮಿಯಾಗಿದ್ದು, ಲೀಸೆಸ್ಟರ್ ಪೂರ್ವ ಕ್ಷೇತ್ರದಿಂದ ಕನ್ಸರ್ವೇಟಿವ್ ಪಕ್ಷದಿಂದ ಕಣಕ್ಕೆ ಇಳಿದು ಐತಿಹಾಸಿಕ ಗೆಲುವು ಸಾಧಿಸಿದ್ದರು. 27 ವರ್ಷಗಳಿಂದ ಈ ಕ್ಷೇತ್ರ ಲೇಬರ್ ಪಕ್ಷದ ಹಿಡಿತದಲ್ಲಿತ್ತು. ಆದರೆ ಶಿವಾನಿ ಅವರು ಭಾರತೀಯ ಮೂಲದ ರಾಜೇಶ್ ಅಗರ್‌ವಾಲ್ ಅವರನ್ನು ಸೋಲಿಸಿ ಸಂಸತ್ತಿಗೆ ಆಯ್ಕೆ ಆಗಿದ್ದರು. ಇದನ್ನೂ ಓದಿ: ಮುಂದಿನ 25 ವರ್ಷದಲ್ಲಿ ಕಾವೇರಿ ಕೊಳ್ಳದಲ್ಲಿ ನೀರಿನ ತೀವ್ರ ಕೊರತೆ: ನೀತಿ ಆಯೋಗ
Advertisement
It was an honour to be sworn into Parliament today to represent Leicester East.
I was truly proud to swear my allegiance to His Majesty King Charles on the Gita.#LeicesterEast pic.twitter.com/l7hogSSE2C
— Shivani Raja MP (@ShivaniRaja_LE) July 10, 2024
Advertisement
2022ರ ಭಾರತ ಮತ್ತು ಪಾಕಿಸ್ತಾನ ಮಧ್ಯೆ ನಡೆದ ಟಿ20 ಏಷ್ಯಾ ಕಪ್ ಪಂದ್ಯದ ನಂತರ ಭಾರತೀಯ ಹಿಂದೂ ಸಮುದಾಯ ಮತ್ತು ಮುಸ್ಲಿಮರ ನಡುವೆ ಲೀಸೆಸ್ಟರ್ ಸಿಟಿಯ ದೊಡ್ಡ ಸಂಘರ್ಷವೇ ನಡೆದಿತ್ತು. ಶಿವಾನಿ ರಾಜಾ 14,526 ಮತಗಳನ್ನು ಪಡೆದರೆ ಲಂಡನ್‌ನ ಮಾಜಿ ಉಪಮೇಯರ್ ಅಗರವಾಲ್ ಅವರನ್ನು 10,100 ಮತಗಳನ್ನು ಪಡೆದರು.
Advertisement
ಯುನೈಟೆಡ್ ಕಿಂಗ್‌ಡಂನಲ್ಲಿ ಜುಲೈ 4 ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶಿವಾನಿ ಅವರನ್ನು ಹೊರತುಪಡಿಸಿ 27 ಭಾರತೀಯ ಮೂಲದ ಸದಸ್ಯರು ಹೌಸ್ ಆಫ್ ಕಾಮನ್ಸ್‌ಗೆ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಉದ್ದೇಶಪೂರ್ವಕಾಗಿ ಪತ್ನಿಯ ಆಸ್ತಿ ವಿವರ ಮರೆ ಮಾಚಿದ್ದಾರೆ: ಸಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
Advertisement