ಲಂಡನ್: ಭಾರತ ಮೂಲದ ವಿದ್ಯಾರ್ಥಿಯೊಬ್ಬ (Indian Student) ಬ್ರಿಟನ್‌ನಲ್ಲಿ (Britain) ಕ್ಲಬ್ ಒಂದರಲ್ಲಿ ಭೇಟಿಯಾಗಿದ್ದ ಪಾನಮತ್ತ ಯುವತಿಯನ್ನು ತನ್ನ ಫ್ಲ್ಯಾಟ್‌ಗೆ ಹೊತ್ತೊಯ್ದು ಅತ್ಯಾಚಾರ ಎಸಗಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
20 ವರ್ಷದ ಪ್ರೀತ್ ವಿಕಲ್ ಕಳೆದ ವರ್ಷ ಜೂನ್‌ನಲ್ಲಿ ಪಾನಮತ್ತಳಾಗಿ ಅರೆಪ್ರಜ್ಞಾ ಸ್ಥಿತಿಯಲ್ಲಿದ್ದ ಯುವತಿಯನ್ನು ಕಾರ್ಡಿಫ್‌ನಲ್ಲಿರುವ ತನ್ನ ಫ್ಲ್ಯಾಟ್‌ಗೆ ಹೊತ್ತೊಯ್ದು ಅತ್ಯಾಚಾರ ಎಸಗಿದ್ದ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಯುವತಿಯನ್ನು ಹೊತ್ತುಕೊಂಡು ಹೋಗುತ್ತಿರುವ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
Advertisement
Chilling CCTV captures moment Indian student, who won scholarship to study in UK, carried a drunk, semi-conscious woman back to his flat before raping her and sending ‘trophy photo’ of her sprawled on his bed to a friend.
Preet Vikal, 20, was sent to a young offenders… pic.twitter.com/QqcuwP92VY
— ???????? The Aussie Hun♀???????? (@TheAussieHun) June 16, 2023
Advertisement
ಯುವತಿ ಪ್ರಜ್ಞಾ ಸ್ಥಿತಿಗೆ ಬಂದ ಬಳಿಕ ಆಕೆಗೆ ತನ್ನ ಮೇಲೆ ಅತ್ಯಾಚಾರವಾಗಿರುವುದು ತಿಳಿದುಬಂದಿದೆ. ಆಕೆ ಬಳಿಕ ಪೊಲೀಸ್ ಠಾಣೆಗೆ ಹೋಗಿ ಈ ಬಗ್ಗೆ ದೂರು ನೀಡಿದ್ದಾಳೆ. ಅದೇ ದಿನ ಯುವಕನನ್ನೂ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆತ ಯುವತಿ ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡಿದ್ದಾಗಿ ತಿಳಿಸಿ, ಅತ್ಯಾಚಾರ ಆರೋಪವನ್ನು ತಳ್ಳಿ ಹಾಕಿದ್ದ. ಇದನ್ನೂ ಓದಿ: ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಮರಕ್ಕೆ ಕಟ್ಟಿ ಹಾಕಿ ಮುಸ್ಲಿಂ ವ್ಯಕ್ತಿಗೆ ಥಳಿತ
Advertisement
ವಿಕಲ್‌ನನ್ನು ಮೊದಲಿಗೆ ನಿರ್ದೋಷಿ ಎಂದು ಒಪ್ಪಿಕೊಳ್ಳಲಾಗಿತ್ತು. ಆದರೆ ವಿಚಾರಣೆ ವೇಳೆ ಸಂತ್ರಸ್ತೆ ಸಮ್ಮತಿಸಲು ಸಾಧ್ಯವಾಗದಷ್ಟು ಕುಡಿದಿರುವುದು ಸ್ಪಷ್ಟವಾಗಿ ತೋರಿದೆ. ಕೊನೆಗೆ ವಿಕಲ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆ ವಿಕಲ್‌ಗೆ 6 ವರ್ಷ, 9 ತಿಂಗಳು ಶಿಕ್ಷೆ ವಿಧಿಸಲಾಗಿದೆ. ಮಾತ್ರವಲ್ಲದೇ ಕಾರ್ಡಿಫ್‌ನಲ್ಲಿ ಇಂತಹ ಅಪರಾಧಗಳು ಅಸಾಮಾನ್ಯ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ವರದಿಗಳ ಪ್ರಕಾರ ವಿಕಲ್ ದೆಹಲಿಯ ಸಣ್ಣ ಹಳ್ಳಿಯವ ಹಾಗೂ ಬಡತನದ ಕುಟುಂಬದವನಾಗಿದ್ದಾನೆ. ಆತ ವಿದ್ಯಾರ್ಥಿ ವೇತನವನ್ನು ಪಡೆದು ಅಧ್ಯಯನವನ್ನು ಮುಂದುವರಿಸಲು ಬ್ರಿಟನ್‌ಗೆ ತೆರಳಿದ್ದ. ಆತ ತನ್ನ ಕುಟುಂಬದಲ್ಲಿ ಹಾಗೂ ತನ್ನ ಹಳ್ಳಿಯಲ್ಲಿಯೇ ಉನ್ನತ ವಿಶ್ವವಿದ್ಯಾಲಯ ಪ್ರವೇಶ ಮಾಡಿದವರಲ್ಲಿ ಮೊದಲಿಗನಾಗಿದ್ದ ಎನ್ನಲಾಗಿದೆ. ಇದನ್ನೂ ಓದಿ: ತುಂಗಾನದಿಯಲ್ಲಿ ಈಜಲು ಹೋಗಿ ನೀರುಪಾಲಾದ ಇಬ್ಬರು ಉಪನ್ಯಾಸಕರು