ಲಂಡನ್: ಕಾರೊಂದು (Car) ಬಸ್ ನಿಲ್ದಾಣಕ್ಕೆ (Bus Stand) ಡಿಕ್ಕಿ ಹೊಡೆದ ಪರಿಣಾಮ ಅಲ್ಲಿದ್ದ ಭಾರತೀಯ (Indian) ಮೂಲದ 28 ವರ್ಷದ ವಿದ್ಯಾರ್ಥಿನಿಯೊಬ್ಬಳು (Student) ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಇಂಗ್ಲೆಂಡ್‌ನಲ್ಲಿ (England) ನಡೆದಿದೆ.
ಅತಿರಾ ಅನಿಲ್ ಕುಮಾರ್ ಲಾಲಿ ಕುಮಾರಿ ಮೃತಪಟ್ಟ ವಿದ್ಯಾರ್ಥಿನಿ. ಅತಿರಾ ಕೇರಳದ (Kerala) ತಿರುವನಂತಪುರದವರಾಗಿದ್ದು, ಕಳೆದ ತಿಂಗಳು ಲೀಡ್ಸ್ ಬೆಕೆಟ್ ವಿಶ್ವವಿದ್ಯಾಲಯದಲ್ಲಿ ತಮ್ಮ ಅಧ್ಯಯನವನ್ನು ಪ್ರಾರಂಭಿಸಿದ್ದರು ಎಂದು ತಿಳಿದು ಬಂದಿದೆ.
Advertisement
ಕಪ್ಪು ಬಣ್ಣದ ವೋಕ್ಸ್‌ವ್ಯಾಗನ್ ಗಾಲ್ಫ್ ಕಾರು ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದು ಹಾನಿಯುಂಟುಮಾಡಿತ್ತು. ಈ ಘಟನೆಯಿಂದ ಗಂಭೀರ ಗಾಯಗೊಂಡ ಇಬ್ಬರು ಪಾದಾಚಾರಿಗಳಲ್ಲಿ ಅತಿರಾ ಕೂಡ ಒಬ್ಬರು ಎಂದು ಪಶ್ಚಿಮ ಯಾರ್ಕ್‌ಷೈರ್‌ನ ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪಾನ್‌ಕಾರ್ಡ್ ಅಪ್ಡೇಟ್ ಮಾಡ್ಬೇಕು ಅಂತಾ ಕರೆ – ಲಿಂಕ್ ಒತ್ತಿದ ಪೊಲೀಸಪ್ಪನ 73 ಸಾವಿರ ಗುಳುಂ!
Advertisement
Advertisement
ಈ ಅಪಘಾತದಲ್ಲಿ ಗಾಯಗೊಂಡ 40ರ ಹರೆಯದ ಇನ್ನೊಬ್ಬ ಪಾದಾಚಾರಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ವೋಕ್ಸ್‌ವ್ಯಾಗನ್ ಗಾಲ್ಫ್ ಕಾರನ್ನು ಚಲಾಯಿಸುತ್ತಿದ್ದ ಮಹಿಳೆಯನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
Advertisement
ಸಂತ್ರಸ್ತೆ ಕುಟುಂಬಕ್ಕೆ ನೆರವನ್ನು ನೀಡುವ ಸಲುವಾಗಿ ಈ ಪ್ರಕರಣವನ್ನು ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹೆಚ್ಚುತ್ತಿರುವ ತಾಪಮಾನ, ಮಾರ್ಚ್‌ನಿಂದ ಮೇವರೆಗೂ ಹೈ ಅಲರ್ಟ್