ವಾಷಿಂಗ್ಟನ್: ಕಳೆದ ವಾರಾಂತ್ಯದಲ್ಲಷ್ಟೇ ಎಲೋನ್ ಮಸ್ಕ್ (Elon Musk) ಟ್ವಿಟ್ಟರ್ (Twitter) ಅನ್ನು ಸ್ವಾಧೀನಪಡಿಸಿಕೊಂಡಿದ್ದು, ಇದರ ಸಿಇಒ (CEO) ಹುದ್ದೆ ಮುಂದೆ ಯಾರಿಗೆ ದಕ್ಕಲಿದೆ ಎಂಬ ಪ್ರಶ್ನೆ ಭಾರೀ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಹಿಂದೆ ಭಾರತ ಮೂಲದ ಪರಾಗ್ ಅಗರ್ವಾಲ್ (Parag Agrawal) ಸಿಇಒ ಹುದ್ದೆಯಲ್ಲಿದ್ದು, ಆ ಸ್ಥಾನವನ್ನು ಮತ್ತೊಮ್ಮೆ ಭಾರತ ಮೂಲದ ವ್ಯಕ್ತಿಯೇ ತುಂಬುವ ನಿರೀಕ್ಷೆ ಇದೀಗ ಹುಟ್ಟಿಕೊಂಡಿದೆ.
ಇತ್ತೀಚೆಗೆ ಎಲೋನ್ ಮಸ್ಕ್ ಟ್ವಿಟ್ಟರ್‌ನ ಉನ್ನತ ಹುದ್ದೆಯನ್ನು ಭರಿಸುವ ವಿಚಾರವಾಗಿ ಕೆಲ ಆತ್ಮೀಯರೊಂದಿಗೆ ಈ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ಆತ್ಮೀಯರ ಬಳಗದಲ್ಲಿ ಸಿಲಿಕಾನ್ ವ್ಯಾಲಿ ಹೂಡಿಕೆ ಸಂಸ್ಥೆ ಆಂಡ್ರೀಸೆನ್ ಹೊರೊವಿಟ್ಜ್‌ನಲ್ಲಿ ಪಾಲುದಾರರಾಗಿರುವ ಭಾರತ ಮೂಲದ ಶ್ರೀರಾಮ್ ಕೃಷ್ಣನ್ (Sriram Krishnan) ಕೂಡಾ ಒಬ್ಬರು. ಇದೀಗ ಶ್ರೀರಾಮ್ ಕೃಷ್ಣನ್ ಟ್ವಿಟ್ಟರ್‌ನ ಮುಂದಿನ ಸಿಇಒ ಆಗಿ ಕಾರ್ಯ ನಿರ್ವಹಿಸುವ ನಿರೀಕ್ಷೆ ಭಾರೀ ಮಟ್ಟದಲ್ಲಿ ವ್ಯಕ್ತವಾಗಿದೆ.
Advertisement
Advertisement
ಶ್ರೀರಾಮ್ ಕೃಷ್ಣನ್ ಯಾರು?
ಚೆನ್ನೈ ಮೂಲದ ಶ್ರೀರಾಮ್ ಕೃಷ್ಣನ್ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರಾಗಿದ್ದಾರೆ. 2003ರಲ್ಲಿ ಸಾಫ್ಟ್‌ವೇರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದ ಇವರು ಪ್ರಸ್ತುತ ತಮ್ಮ ಪತ್ನಿಯೊಂದಿಗೆ ಸ್ಯಾನ್ ಫ್ರಾನ್ಸಿಸ್ಕೋವಿನ ನೋಯ್ ವ್ಯಾಲಿಯಲ್ಲಿ ವಾಸವಿದ್ದಾರೆ.
Advertisement
ಕೃಷ್ಣನ್ ಅವರು ಈ ಹಿಂದೆ ಟ್ವಿಟ್ಟರ್ ಮಾತ್ರವಲ್ಲದೇ ಯಾಹೂ!, ಫೇಸ್‌ಬುಕ್ ಹಾಗೂ ಸ್ನ್ಯಾಪ್ ಕಂಪನಿಯಲ್ಲಿ ವ್ಯವಸ್ಥಾಪಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕ್ಲಬ್‌ಹೌಸ್‌ನ ಪ್ರಮುಖ ಹೂಡಿಕೆದಾರನಾಗಿರುವ ಆಂಡ್ರೀಸೆನ್ ಹೋರೊವಿಟ್ಜ್‌ಗೆ ಕೃಷ್ಣನ್ ಅವರು 2021ರಲ್ಲಿ ಸೇರ್ಪಡೆಗೊಂಡಿದ್ದರು. ಅವರ ಪತ್ನಿ ರಾಮಮೂರ್ತಿ ಕೂಡಾ ನೆಟ್‌ಫ್ಲಿಕ್ಸ್ ಹಾಗೂ ಫೇಸ್‌ಬುಕ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಟ್ವಿಟ್ಟರ್‌ನಲ್ಲಿ ಬ್ಲೂ ಟಿಕ್ ಬೇಕೆಂದ್ರೆ ತಿಂಗಳಿಗೆ ದುಡ್ಡು ಕೊಡಬೇಕು
Advertisement
ವರದಿಗಳ ಪ್ರಕಾರ ಕೃಷ್ಣನ್ ಹಾಗೂ ಎಲೋನ್ ಮಸ್ಕ್ ಮೊದಲ ಬಾರಿಗೆ ಕ್ಯಾಲಿಫೋರ್ನಿಯಾದ ಹಾಥೋರ್ನ್ನಲ್ಲಿರುವ ಸ್ಪೇಸ್‌ಎಕ್ಸ್ ಪ್ರಧಾನ ಕಛೇರಿಯಲ್ಲಿ ಭೇಟಿಯಾದರು. 2021ರ ಫೆಬ್ರವರಿಯಲ್ಲಿ ಕೃಷ್ಣನ್ ಹಾಗೂ ಅವರ ಪತ್ನಿ ರಾಮಮೂರ್ತಿ ನಡೆಸಿದ ‘ದಿ ಗುಡ್ ಟೈಮ್ಸ್ ಶೋ’ ಕಾರ್ಯಕ್ರಮದಲ್ಲಿ ಮಸ್ಕ್ ಕಾಣಿಸಿಕೊಂಡಿದ್ದರು.
ಶ್ರೀರಾಮ್ ಕೃಷ್ಣನ್ ಅವರು ಇತ್ತೀಚಿಗೆ ಒಂದು ಟ್ವೀಟ್ ಮಾಡಿದ್ದು, ನಾನು ಎಲೋನ್ ಮಸ್ಕ್ ಹಾಗೂ ಇತರ ಕೆಲ ಉನ್ನತ ವ್ಯಕ್ತಿಗಳೊಂದಿಗೆ ಟ್ವಿಟ್ಟರ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಟ್ವಿಟ್ಟರ್ ಅತ್ಯಂತ ಪ್ರಮುಖವಾದ ಕಂಪನಿಯಾಗಿದ್ದು, ಇದು ಪ್ರಪಂಚದ ಮೇಲೆ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆಯಿದೆ. ಈ ಕೆಲಸವನ್ನು ಎಲೋನ್ ಮಸ್ಕ್ ಮಾಡಿ ತೋರಿಸುತ್ತಾರೆ ಎಂಬುದನ್ನು ನಾನು ನಂಬುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಅದ್ಧೂರಿ ದಸರಾಗೆ ಖರ್ಚಾಗಿದ್ದು ಬರೋಬ್ಬರಿ 28 ಕೋಟಿ