ವಾಷಿಂಗ್ಟನ್: ಉಬರ್‌ನ (Uber) ರೈಡ್-ಹೈಲಿಂಗ್ (Raid-Hailing) ಎಂಬ ಅಪ್ಲಿಕೇಶನ್ ಬಳಿಸಿಕೊಂಡು ಸುಮಾರು 800ಕ್ಕೂ ಹೆಚ್ಚು ಭಾರತೀಯರನ್ನು (Indians) ಅಮೆರಿಕಾಗೆ (America) ಕಳ್ಳಸಾಗಣೆ (Smuggling) ಮಾಡಿದ ಭಾರತೀಯ ಮೂಲದ ವ್ಯಕ್ತಿಗೆ ನ್ಯಾಯಾಲಯ 3 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿದೆ.
ರಾಜಿಂದರ್ ಪಾಲ್ ಸಿಂಗ್ (49), ಅಕಾ ಜಸ್ಪಾಲ್ ಗಿಲ್, ಫೆಬ್ರವರಿಯಲ್ಲಿ ತಪ್ಪೊಪ್ಪಿಕೊಂಡಿದ್ದು, ಕೆನಡಾದಿಂದ ಗಡಿಯುದ್ದಕ್ಕೂ ನೂರಾರು ಭಾರತೀಯ ಪ್ರಜೆಗಳನ್ನು ಕರೆತರುವ ಸಲುವಾಗಿ 500,000 ಅಮೆರಿಕನ್ ಡಾಲರ್ (ಅಂದಾಜು 4.10 ಕೋಟಿ ರೂ.) ಹಣವನ್ನು ಪಡೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಮೋದಿ ಪ್ರಶ್ನಿಸಿದ್ದ ಅಮೆರಿಕ ಪತ್ರಕರ್ತೆಗೆ ಕಿರುಕುಳ – ವೈಟ್‍ಹೌಸ್ ಪ್ರತಿಕ್ರಿಯೆ
Advertisement
Advertisement
ರಾಜಿಂದರ್ ಪಾಲ್ ಸಿಂಗ್ ಕ್ಯಾಲಿಫೋರ್ನಿಯಾ ನಿವಾಸಿಯಾಗಿದ್ದು, 4 ವರ್ಷಗಳ ಅವಧಿಯಲ್ಲಿ 800ಕ್ಕೂ ಹೆಚ್ಚು ಜನರನ್ನು ಉತ್ತರದ ಗಡಿಯ ಮೂಲಕ ವಾಷಿಂಗ್ಟನ್ (Washington) ರಾಜ್ಯಕ್ಕೆ ಕಳ್ಳಸಾಗಣಿಕೆ ಮಾಡಲು ವ್ಯವಸ್ಥೆ ಮಾಡಿದ್ದ ಎಂದು ಯುಎಸ್ (US) ಅಟಾರ್ನಿ ಟೆಸ್ಸಾ ಎಂ ಗೊರ್ಮನ್ ತಿಳಿಸಿದ್ದಾರೆ. ಇದನ್ನೂ ಓದಿ: ಒಂದೂವರೆ ವರ್ಷದ ಮಗಳನ್ನು ಬಿಟ್ಟು 10 ದಿನ ಟ್ರಿಪ್ ಹೋದ ತಾಯಿ- ಮಗು ಸಾವು
Advertisement
ಜುಲೈ 2018ರಿಂದ ರಾಜಿಂದರ್ ಪಾಲ್ ಸಿಂಗ್ ಮತ್ತು ಅವರ ಸಹಚರರು ಕೆನಡಾದಿಂದ ಸಿಯಾಟಲ್ ಪ್ರದೇಶಕ್ಕೆ ಅಕ್ರಮವಾಗಿ ಗಡಿ ದಾಟಿದ ಜನರನ್ನು ಸಾಗಿಸಲು ಉಬರ್ ಅನ್ನು ಬಳಸಿದ್ದಾರೆ ಎಂದು ಪ್ರಕರಣದಲ್ಲಿ ದಾಖಲಿಸಲಾದ ದಾಖಲೆಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. 2018ರಿಂದ 2022ರ ಮಧ್ಯದಲ್ಲಿ ಭಾರತೀಯರನ್ನು ಯುಎಸ್‌ಗೆ ಸಾಗಿಸುವ ಸಲುವಾಗಿ ರಾಜಿಂದರ್ ಸುಮಾರು 600ಕ್ಕೂ ಹೆಚ್ಚು ಪ್ರವಾಸ ಬೆಳೆಸಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಗಗನಯಾತ್ರಿಗಳ ಮೂತ್ರ, ಬೆವರಿನಿಂದಲೇ ಕುಡಿಯುವ ನೀರಿನ ಉತ್ಪಾದನೆ – ಬಾಹ್ಯಾಕಾಶದಲ್ಲಿ ಮಹತ್ವದ ಸಂಶೋಧನೆ
Advertisement
ಪ್ರಕರಣದ ತನಿಖೆಯ ಪ್ರಕಾರ, 2018ರಿಂದ 2022ರ ಒಳಗಾಗಿ ಸುಮಾರು 80,000 ಅಮೆರಿಕನ್ ಡಾಲರ್ ಹಣಕ್ಕೆ 17 ಉಬರ್ ಖಾತೆಗಳು ಇದರೊಂದಿಗೆ ಕೈಜೋಡಿಸಿದ್ದವು. ಜನರನ್ನು ಸಾಗಿಸುವ ಸಲುವಾಗಿ ರಾಜಿಂದರ್ ಸಹಚರರು ಬಾಡಿಗೆಯ ಏಕಮುಖ ವಾಹನವನ್ನು ಬಳಸುತ್ತಿದ್ದರು. ಬಳಿಕ ಅವರನ್ನು ವಾಷಿಂಗ್ಟನ್‌ನ ಹೊರಪ್ರದೇಶಕ್ಕೆ ಸಾಗಿಸುತ್ತಿದ್ದರು. ಕ್ಯಾಲಿಫೋರ್ನಿಯಾದ ರಾಜಿಂದರ್ ಮನೆಯಿಂದ ತನಿಖಾಧಿಕಾರಿಗಳು ಸುಮಾರು 45,000 ಡಾಲರ್ ಹಣವನ್ನು ಮತ್ತು ನಕಲಿ ಗುರುತಿನ ದಾಖಲೆಯನ್ನು ಪತ್ತೆಹಚ್ಚಿದ್ದಾರೆ. ಕಾನೂನುಬದ್ದವಾಗಿ ಹಾಜರಾಗದ ರಾಜಿಂದರ್‌ನನ್ನು ಜೈಲುಶಿಕ್ಷೆಯ ಬಳಿಕ ಗಡಿಪಾರು ಮಾಡುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಸಿಖ್ ವ್ಯಾಪಾರಿಗೆ ಗುಂಡಿಕ್ಕಿ ಹತ್ಯೆ
Web Stories