ವಾಷಿಂಗ್ಟನ್: ಅಪಾರ್ಟ್‌ಮೆಂಟ್‌ವೊಂದರಲ್ಲಿ ದರೋಡೆ ಮಾಡುವಾಗ ಅಲ್ಲಿದ್ದ ವಿದ್ಯಾರ್ಥಿನಿಯನ್ನು ಭಾರತೀಯ ಮೂಲದ (Indian Origin Man) ವ್ಯಕ್ತಿ ಗುಂಡಿಕ್ಕಿ ಕೊಂದಿರುವ ಘಟನೆ ಅಮೆರಿಕದಲ್ಲಿ (America) ನಡೆದಿದೆ.
ನೇಪಾಳ (Nepal Student) ಮೂಲದ 21 ವರ್ಷದ ವಿದ್ಯಾರ್ಥಿನಿ ಹತ್ಯೆಯಾಗಿದ್ದಾಳೆ. 52 ವರ್ಷದ ಬಾಬಿ ಸಿನ್ಹ್ ಶಾ ಗುಂಡಿಟ್ಟು ಕೊಂದ ವ್ಯಕ್ತಿ ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ 5:30 ರ ಸುಮಾರಿಗೆ ಸಮುದಾಯ ಕಾಲೇಜು ವಿದ್ಯಾರ್ಥಿನಿ ಮುನಾ ಪಾಂಡೆ ತನ್ನ ಹೂಸ್ಟನ್ ಅಪಾರ್ಟ್‌ಮೆಂಟ್‌ನಲ್ಲಿ ಗುಂಡೇಟಿಗೆ ಬಲಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಏರ್‌ಲಿಫ್ಟ್ ವೇಳೆ ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನ
Advertisement
Advertisement
ಅಪಾರ್ಟ್‌ಮೆಂಟ್‌ನೊಳಗಿನ ಶವದ ಬಗ್ಗೆ ಅನಾಮಧೇಯ ಕರೆ ಬಂದಿತ್ತು. ಆಕೆಯ ಅಪಾರ್ಟ್‌ಮೆಂಟ್ ಸಂಕೀರ್ಣದ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿದಾಗ ಆಕೆ ಮೃತಪಟ್ಟಿರುವುದು ತಿಳಿದುಬಂದಿದೆ. ಕೊಲೆ ಬಳಿಕ ಪರಾರಿಯಾಗಿದ್ದ ಬಾಬಿ ಶಾ ನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಕೊಲೆಯಾದ ಪಾಂಡೆ 2021 ರಲ್ಲಿ ನೇಪಾಳದಿಂದ ಹೂಸ್ಟನ್ ಸಮುದಾಯ ಕಾಲೇಜಿನಲ್ಲಿ ಅಧ್ಯಯನ ಮಾಡಲು ಬಂದಿದ್ದರು. ಆಕೆಯ ತಾಯಿ ಅವಳೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ಇರಲು ಬಯಸಿದ್ದರು. ಅಷ್ಟರಲ್ಲಾಗಲೇ ದುರ್ಘಟನೆ ನಡೆದಿದೆ ಎಂದು ಹೂಸ್ಟನ್‌ನ ನೇಪಾಳಿ ಅಸೋಸಿಯೇಷನ್ ಸದಸ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಗೂಗಲ್, ಆಪಲ್‌ಗೆ ಜಿಯೋ ಠಕ್ಕರ್ – ಕ್ಲೌಡ್ ಸ್ಟೋರೇಜ್‌ನಲ್ಲೂ ದರ ಸಮರ ಆರಂಭ?
Advertisement
ಮುನಾ ಪಾಂಡೆ ತಾಯಿ ಅನಿತಾರನ್ನು ಅಮೆರಿಕಾಗೆ ಕಳುಹಿಸಲು ಸಮುದಾಯದವರು ಹಣದ ಸಹಾಯ ಮಾಡಿದ್ದರು. ಆದರೆ, ಈಗ ಆ ಹಣವನ್ನು ಮಗಳ ಅಂತ್ಯಕ್ರಿಯೆಗೆ ಬಳಸಲು ನಿರ್ಧರಿಸಲಾಗಿದೆ.