ಹೆಂಡ್ತಿಯನ್ನ 40 ಬಾರಿ ಇರಿದು ಕೊಂದಿದ್ದ ಭಾರತೀಯ ಮೂಲದ ವ್ಯಕ್ತಿಗೆ 20 ವರ್ಷ ಜೈಲು

Public TV
1 Min Read
nitin singh

ವಾಷಿಂಗ್ಟನ್: ತನಗೆ ಅಕ್ರಮ ಸಂಬಂಧವಿದೆ ಎಂದು ಹೇಳಿಕೊಂಡ ಹೆಂಡತಿಯನ್ನ 40 ಬಾರಿ ಇರಿದು ಕೊಂದಿದ್ದ ಭಾರತೀಯ ಮೂಲದ ವ್ಯಕ್ತಿಗೆ ಅಮರಿಕದಲ್ಲಿ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

48 ವರ್ಷದ ನಿತಿನ್ ಪಿ ಸಿಂಗ್ ಜೈಲು ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ. ನ್ಯೂ ಜೆರ್ಸಿಯ ಸಲೇಮ್‍ನಲ್ಲಿ ನ್ಯಾಯಾಧೀಶರಾದ ಲಿಂಡಾ ಲಾವ್ಹನ್ ನಿತಿನ್‍ಗೆ ಜೈಲು ಶಿಕ್ಷೆ ವಿಧಿಸಿ ಶುಕ್ರವಾರದಂದು ತೀರ್ಪು ಪ್ರಕಟಿಸಿದ್ದಾರೆ.

2016ರ ಜುಲೈನಲ್ಲಿ 42 ವರ್ಷದ ಸೀಮಾ ಸಿಂಗ್ ಅವರನ್ನ ನಿತಿನ್ ಕೊಲೆಗೈದಿದ್ದ. ಕಾಲೀಂಗ್ಸ್‍ವುಡ್‍ನ ದಂಪತಿಯ ಅಪಾರ್ಟ್‍ಮೆಂಟ್‍ನಲ್ಲಿ ಮೂವರು ಮಕ್ಕಳು ಮಲಗಿದ್ದ ವೇಳೆ ಸೀಮಾ ಅವರ ಕೊಲೆಯಾಗಿತ್ತು. ಮಕ್ಕಳಿಗೆ ಯಾವುದೇ ಗಾಯವಾಗಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೆಂಡತಿ ತನ್ನ ಎಲ್ಲಾ ಹಣವನ್ನು ತೆಗೆದುಕೊಂಡು ಮೂವರು ಮಕ್ಕಳ ಜೊತೆ ತನ್ನನ್ನು ಬಿಟ್ಟು ಹೋಗುವುದಾಗಿ ಹೇಳಿದ್ದಕ್ಕೆ ದಾಳಿ ಮಾಡಿದ್ದಾಗಿ ನಿತಿನ್ ಕೋರ್ಟ್‍ನಲ್ಲಿ ಹೇಳಿದ್ದಾನೆ.

ಕೋಪದಲ್ಲಿದ್ದ ನಿತಿನ್, ತನಗೆ ಮೊದಲು ಕಾಣಿಸಿದ ಚಾಕುವನ್ನ ಕೈಗೆತ್ತಿಕೊಂಡು ಹೆಂಡತಿಗೆ ಇರಿಯಲು ಆರಂಭಿಸಿದ. ನಂತರ 911ಗೆ ಕರೆ ಮಾಡಿ ತನ್ನ ಹೆಂಡತಿ ಉಸಿರಾಡುತ್ತಿಲ್ಲ ಎಂದು ಹೇಳೀದ್ದ. ಬಳಿಕ ಆತನ ಮೇಲೆ ಕೊಲೆ ಪ್ರಕರಣ ದಾಖಲಾಗಿತ್ತು ಎಂದು ವರದಿಯಾಗಿದೆ.

Share This Article