ಲಂಡನ್: ಬೋರಿಸ್ ಜಾನ್ಸನ್ ಬ್ರಿಟನ್ ಪ್ರಧಾನಿ ಸ್ಥಾನದಿಂದ ಕೆಳಗಿಳಿಯಲು ಸಜ್ಜಾಗಿದ್ದಾರೆ. ಆದರೆ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಭಾರತ ಮೂಲದ ರಿಷಿ ಸುನಾಕ್ ಹೆಸರು ಕೇಳಿ ಬರುತ್ತಿದೆ. ಒಂದು ವೇಳೆ ಇದು ನಿಜವಾದರೆ, ಬ್ರಿಟನ್ ಪ್ರಧಾನಿಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ರಿಷಿ ಸುನಾಕ್ ಪಾತ್ರರಾಗುತ್ತಾರೆ.
Advertisement
ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್, ಬೋರಿಸ್ ಜಾನ್ಸನ್ ರಾಜೀನಾಮೆಗೆ ಒಪ್ಪಿಗೆ ನೀಡಿದ ಬಳಿಕ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂದು ಕೇಳಿ ಬರುತ್ತಿದೆ. ರಿಷಿ ಸುನಾಕ್‌ರೊಂದಿಗೆ ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಾಸ್, ಮಾಜಿ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಕೂಡಾ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಗಳಾಗಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಬ್ರಿಟನ್ ಪ್ರಧಾನಿ ಬೋರಿಸ್ ರಾಜೀನಾಮೆ ಘೋಷಣೆ
Advertisement
ರಿಷಿ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿಯ ಪತಿಯಾಗಿದ್ದು, ಬ್ರಿಟನ್‌ನಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿ ಎನ್ನಲಾಗುತ್ತದೆ. ಇವರನ್ನು ಬೋರಿಸ್ ಜಾನ್ಸನ್ ಆಯ್ಕೆ ಮಾಡಿ, 2020ರಲ್ಲಿ ಮೊದಲ ಪೂರ್ಣ ಕ್ಯಾಬೆನೆಟ್ ಸ್ಥಾನವನ್ನು ಪಡೆದಿದ್ದರು.
Advertisement
Advertisement
ಬ್ರಿಟನ್ ಸರ್ಕಾರದ ಹಣಕಾಸು ಖಾತೆ ಸಚಿವರಾಗಿದ್ದ ಸುನಾಕ್ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬೋರಿಸ್ ಜಾನ್ಸನ್ ವಿರುದ್ಧ ಭಿನ್ನಾಭಿಪ್ರಾಯದಿಂದ ಸಾಜಿದ್ ಜಾವೇಜ್ ರಾಜೀನಾಮೆ ನೀಡಿದ ಬೆನ್ನಲ್ಲೇ ರಿಷಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಪತ್ರವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ಉದ್ಯೋಗಿಯಿಂದ ಅವಳಿ ಮಕ್ಕಳು – 51ರ ಮಸ್ಕ್ ಈಗ 9 ಮಕ್ಕಳ ತಂದೆ