– ಮಗಳನ್ನು ಕಾಲೇಜಿಗೆ ಕರೆದೊಯ್ಯುವಾಗ ಭೀಕರ ಅಪಘಾತ
ವಾಷಿಂಗ್ಟನ್: ಭಾರತೀಯ ಮೂಲದ (Indian Origin) ಒಂದೇ ಕುಟುಂಬದ ಮೂವರು ಕಾರು ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಯುಎಸ್‌ನ (US) ಲಾಂಪಾಸ್ ಎಂಬಲ್ಲಿ ನಡೆದಿದೆ.
Advertisement
ಲಿಯಾಂಡರ್ ನಿವಾಸಿಗಳಾದ ಅರವಿಂದ್ ಮನಿ (45), ಪತ್ನಿ ಪ್ರದೀಪಾ ಅರವಿಂದ್ (40) ಹಾಗೂ ಪುತ್ರಿ ಆಂಡ್ರಿಲ್ ಅರವಿಂದ್ (17) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಮುಂಬೈ ಟೆರರ್ ಅಟ್ಯಾಕ್ – ಪಾಕ್ ಮೂಲದ ರಾಣಾ ಹಸ್ತಾಂತರಕ್ಕೆ ಯುಎಸ್ ಕೋರ್ಟ್ ಅಸ್ತು
Advertisement
ಬುಧವಾರ ಬೆಳಿಗ್ಗೆ 5:45ರ ಸುಮಾರಿಗೆ ಯುಎಸ್‌ನ ಟೆಕ್ಸಾಸ್‌ನಲ್ಲಿ ನಡೆದ ಕಾರು ಅಪಘಾತದಲ್ಲಿ ಲಿಯಾಂಡರ್ ನಿವಾಸಿಗಳಾದ ಪತಿ ಅರವಿಂದ್ ಮನಿ, ಪತ್ನಿ ಪ್ರದೀಪಾ ಅರವಿಂದ್ ಹಾಗೂ ಪುತ್ರಿ ಆಂಡ್ರಿಲ್ ಅರವಿಂದ್ ಸಾವನ್ನಪ್ಪಿದ್ದಾರೆ. ದಂಪತಿ 14 ವರ್ಷದ ಪುತ್ರನನ್ನು ಅಗಲಿದ್ದಾರೆ.
Advertisement
Advertisement
ಅರವಿಂದ್ ಪುತ್ರಿ ಈಗಷ್ಟೇ ತನ್ನ ಪ್ರೌಢ ಶಿಕ್ಷಣ ಮುಗಿಸಿದ್ದರು. ಡಲ್ಲಾಸ್ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡುವ ಯೋಜನೆ ಹಾಕಿಕೊಂಡಿದ್ದಳು. ವಾಹನದಲ್ಲಿರದ ಕಾರಣ ಅದೇ ಕುಟುಂಬದ 14 ವರ್ಷದ ಆದಿರ್ಯಾನ್ ಬದುಕುಳಿದಿದ್ದಾನೆ’ಗೋಫಂಡ್‌ಮೀ’ ಮುಖಾಂತರ 5.87 ಕೋಟಿ ರೂ. ಹಣ ಸಂಗ್ರಹಿಸಿ, ಬಾಲಕ ಆದಿರ್ಯಾನ್ ಅರವಿಂದ್ ನೆರವು ನೀಡಲಾಗಿದೆ. ಇದನ್ನೂ ಓದಿ: ಸುಡಾನ್ ಅರೆಸೇನಾ ಪಡೆಯಿಂದ ನಾಗರಿಕರ ಮೇಲೆ ದಾಳಿ – 80 ಜನರ ಬಲಿ
ಭಾರತೀಯ ಕುಟುಂಬದ ವಾಹನಕ್ಕೆ ಡಿಕ್ಕಿ ಹೊಡೆದ ವಾಹನ ಚಾಲಕ ಸೇರಿದಂತೆ ಅಪಘಾತದಲ್ಲಿ ಒಟ್ಟು ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ಕುಟುಂಬದ ವಾಹನವು ಗಂಟೆಗೆ 112 ಕಿಮೀ ವೇಗದಲ್ಲಿ ಹಾಗೂ ಡಿಕ್ಕಿ ಹೊಡೆದ ವಾಹನವು 160ಕಿಮೀ. ವೇಗದಲ್ಲಿ ಚಲಿಸುತ್ತಿದ್ದವು ಎಂದು ಪೊಲೀಸರು ಅಂದಾಜಿಸಿದ್ದಾರೆ.
26 ವರ್ಷದಲ್ಲಿ ನಾನು ನೋಡಿದ ಅಪಘಾತಗಳಲ್ಲಿ ಇದು ಭೀಕರವಾದದ್ದು. ಅಲ್ಲಿ ಬದುಕುಳಿಯುವ ಯಾವುದೇ ಅವಕಾಶಗಳೇ ಇರಲಿಲ್ಲ. ಆ ಮಟ್ಟದಲ್ಲಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.