ಲಂಡನ್: ಡ್ರಗ್ಸ್ ಸೇವಿಸಿ ವಾಹನ ಚಲಾಯಿಸಿದ್ದಕ್ಕೆ ಕಾರು ನಿಯಂತ್ರಣ ತಪ್ಪಿ ಗರ್ಭಿಣಿ ಹಾಗೂ ಆಕೆ ತಂದೆಯ ಸಾವಿಗೆ ಕಾರಣನಾದ ಭಾರತೀಯ ಮೂಲದ (Indian Origin) ಚಾಲಕನಿಗೆ 16 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಆಗ್ನೇಯ ಇಂಗ್ಲೆಂಡ್‌ನ (England) ಕಡಲತೀರದ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಪೊಲೀಸರ ಪ್ರಕಾರ, ಚಾಲಕ ನಿತೇಶ್ ಬಿಸೆಂಡರಿ ವಾಹನ ಕೆಂಟ್‌ನ ರಾಮ್ಸ್‌ಗೇಟ್‌ನಲ್ಲಿ ನಿಯಂತ್ರಣ ತಪ್ಪಿದೆ. ಈ ವೇಳೆ ಸಂಭವಿಸಿದ ಅಪಘಾತದಲ್ಲಿ ಗರ್ಭಿಣಿ ಹಾಗೂ ಆಕೆಯ ತಂದೆ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ಸೇರಿ ಮೂವರು ಗಾಯಗೊಂಡಿದ್ದಾರೆ. ಇದನ್ನೂ ಓದಿ: 18-25 ವರ್ಷದ ಒಳಗಿನ ಫ್ರಾನ್ಸ್ ಯುವಜನತೆಗೆ ಉಚಿತ ಕಾಂಡೋಮ್
Advertisement
Advertisement
ನೊಗಾ ಸೆಲ್ಲಾ (37) ಗರ್ಭಿಣಿ ಹಾಗೂ ಆಕೆಯ ತಂದೆ ಯೋರಾಮ್ ಹಿರ್ಶ್‌ಫೆಲ್ಡ್ (81) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸೆಲ್ಲಾಳ ಪತಿ ಓಮರ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ವಿಚಾರಣೆಯ ನಂತರ ಅಪರಾಧಿಗೆ 16 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ಕಸ್ಟಡಿ ಶಿಕ್ಷೆಯ ನಂತರ 10 ವರ್ಷಗಳ ಕಾಲ ವಾಹನ ಚಲಾಯಿಸಲು ಅನರ್ಹಗೊಳಿಸಿ ಕ್ಯಾಂಟರ್ಬರಿ ಕ್ರೌನ್ ಕೋರ್ಟ್ ಆದೇಶ ಹೊರಡಿಸಿದೆ. ಇದನ್ನೂ ಓದಿ: ಗಾಯವನ್ನೂ ಲೆಕ್ಕಿಸದೇ ಆಡಿದ ಹಿಟ್‌ಮ್ಯಾನ್ ಹೋರಾಟ ವ್ಯರ್ಥ – ಬಾಂಗ್ಲಾದೇಶಕ್ಕೆ ಏಕದಿನ ಸರಣಿ
Advertisement
ಅಪಘಾತದ ಜವಾಬ್ದಾರಿಯನ್ನು ಹೊರಲು ಚಾಲಕ ನಿರಾಕಿಸಿದ್ದ. ಅಷ್ಟೇ ಅಲ್ಲದೇ ಅಪಘಾತದ ನಂತರ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.