ಮನೆಯಲ್ಲಿ ಬೆಂಕಿ ಅವಘಡ – ಕೆನಡಾದಲ್ಲಿ ಭಾರತೀಯ ಮೂಲದ ಒಂದೇ ಕುಟುಂಬದ ಮೂವರು ಸಾವು

Public TV
1 Min Read
indian origin couple canada

ಒಟ್ಟಾವೊ: ಕೆನಡಾದ (Canada) ಒಂಟಾರಿಯೊ ಪ್ರಾಂತ್ಯದ ಮನೆಯೊಂದರಲ್ಲಿ ಬೆಂಕಿ ಅವಘಡದಿಂದ ಭಾರತೀಯ ಮೂಲದ ದಂಪತಿ ಮತ್ತು ಅವರ ಹದಿಹರೆಯದ ಮಗಳು ಸಾವನ್ನಪ್ಪಿದ್ದಾರೆ.

ಘಟನೆಯು ಮಾರ್ಚ್ 7 ರಂದು ನಡೆದಿದೆ. ಮೂವರು ಒಂದೇ ಕುಟುಂಬದವರು ಎಂದು ಅವಶೇಷಗಳಿಂದ ತಿಳಿದುಬಂದ ನಂತರ ಸುದ್ದಿ ವರದಿಯಾಗಿದೆ. ಕುಟುಂಬವು ಬ್ರಾಂಪ್ಟನ್‌ನ ಬಿಗ್ ಸ್ಕೈ ವೇ ಮತ್ತು ವ್ಯಾನ್ ಕಿರ್ಕ್ ಡ್ರೈವ್ ಪ್ರದೇಶದಲ್ಲಿ ವಾಸಿಸುತ್ತಿತ್ತು. ಇದನ್ನೂ ಓದಿ: ಮದುವೆಗೆ ನಿರಾಕರಿಸಿದ ಪ್ರಿಯಕರ – ಮನನೊಂದ ಯುವತಿ ಕೆರೆಗೆ ಹಾರಿ ಆತ್ಮಹತ್ಯೆ

ಮೃತರ ನೆರೆಹೊರೆಯ ಜನರು ತಿಳಿಸಿದಾಗ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕದಳ ಬೆಂಕಿಯನ್ನು ನಂದಿಸಿದಾಗ ಮೃತರ ಅವಶೇಷಗಳು ಪತ್ತೆಯಾಗಿವೆ.

ರಾಜೀವ್ ವಾರಿಕೂ (51), ಅವರ ಪತ್ನಿ ಶಿಲ್ಪಾ ಕೋಥಾ (47) ಮತ್ತು ಅವರ ಮಗಳು ಮಾಹೆಕ್ ವಾರಿಕೂ (16) ಮೃತರು ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಉಪವಾಸ ಅಂತ್ಯಗೊಳಿಸಿ ಪಾನಿಪುರಿ ತಿಂದ 19 ಮಕ್ಕಳು ಅಸ್ವಸ್ಥ – ನಾಲ್ವರ ಸ್ಥಿತಿ ಚಿಂತಾಜನಕ

ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಲು ಕಾರಣವೇನು ಎಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share This Article