ನವದೆಹಲಿ: ಗ್ಯಾಸ್ ವಿತರಣೆಯ ಹೊಸ ಯೋಜನೆಗಾಗಿ 7,000 ಕೋಟಿ ರೂ. ಹೂಡಿಕೆ ಮಾಡುವುದಾಗಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ತಿಳಿಸಿದೆ. ಮನೆ, ವಾಹನ ಹಾಗೂ ಸಣ್ಣ ಕೈಗಾರಿಕೆಗಳಿಗೆ ಗ್ಯಾಸ್ ಮಾರಾಟ ಮಾಡಲು 9 ಪರವಾನಗಿಗಳನ್ನು ಪಡೆದುಕೊಂಡಿದೆ ಎಂದು ತಿಳಿಸಿದೆ.
ಚಿಲ್ಲರೆ ವ್ಯಾಪಾರ, ಹೊಸ ಪ್ರದೇಶಗಳಿಗೆ ಪೈಪ್ ಲೈನ್ ಸೇರಿದಂತೆ ಹಲವು ಗ್ಯಾಸ್ ಮಾರಾಟ ಜಾಲಕ್ಕೆ ಮೂಲಸೌಕರ್ಯವನ್ನು ನಿರ್ಮಿಸಲು 7 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಗುರಿ ಹೊಂದಿದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಯೋಗಿ ಸರ್ಕಾರದಿಂದ 16.5 ಲಕ್ಷ ಯುವಕರು ಉದ್ಯೋಗದಿಂದ ವಂಚಿತ: ಪ್ರಿಯಾಂಕಾ ಗಾಂಧಿ
Advertisement
Advertisement
ವಿವಿಧ ರಾಜ್ಯಗಳ 61 ಪ್ರದೇಶಗಳಲ್ಲಿನ ಸಣ್ಣ ಕೈಗಾರಿಕೆಗಳು, ಮನೆ, ವಾಹನಗಳಿಗೆ ಅನಿಲ ಮಾರಾಟ ಮಾಡಲು 9 ಪರವಾನಗಿಗಳನ್ನು ಪಡೆದುಕೊಂಡಿದೆ ಎಂದು ಇಂಡಿಯನ್ ಆಯಿಲ್ ಕಂಪನಿ ತಿಳಿಸಿದೆ. ಇದನ್ನೂ ಓದಿ: ಗೂಗಲ್ ಮೀಟ್ನಲ್ಲಿ ಮದುವೆ – ಝೊಮ್ಯಾಟೊ ಊಟ
Advertisement
ಇಂಡಿಯನ್ ಆಯಿಲ್ ಕಂಪನಿಗೆ ನೀಡಲಾದ ಪರವಾನಗಿಗಳು ಕೆಲವು ರಾಜ್ಯಗಳ ಪ್ರಮುಖ ಜಿಲ್ಲೆಗಳಿಗೆ ಮಾತ್ರವೇ ಸಂಬಂಧ ಪಡುತ್ತದೆ. ಈಗಾಗಲೇ ಕಂಪನಿ 20 ಸಾವಿರ ಕೋಟಿ ರೂ. ಅನಿಲ ಮಾರಾಟದ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದಿದೆ.