ಕೊಲೊಂಬೊ: ಲಂಕಾ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದಾಳಿ ನಡೆದಿದ್ದು, ಈ ಸಂದರ್ಭದಲ್ಲಿ ಶ್ರೀಲಂಕಾಕ್ಕೆ ನಿಯೋಜನೆಗೊಂಡಿರುವ ಭಾರತೀಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಗಂಭೀರ ಗಾಯವಾದ ಘಟನೆ ನಡೆದಿದೆ.
ಭಾರತೀಯ ವೀಸಾ ಕೇಂದ್ರದ ನಿರ್ದೇಶಕ ವಿವೇಕ್ ವರ್ಮಾ ಗಾಯಗೊಂಡವರು. ಈ ಬಗ್ಗೆ ಕೊಲೊಂಬೊದಲ್ಲಿರುವ ಭಾರತೀಯ ಹೈಕಮಿಷನ್ ಮಾಹಿತಿ ನೀಡಿದೆ. ಘಟನೆ ಸಂಬಂಧಿಸಿ ಹೈಕಮಿಷನ್‍ನ ಹಿರಿಯ ಅಧಿಕಾರಿಗಳು ಭಾರತೀಯ ಪ್ರಜೆ ಮತ್ತು ಭಾರತೀಯ ವೀಸಾ ಕೇಂದ್ರದ ನಿರ್ದೇಶಕ ವಿವೇಕ್ ವರ್ಮಾ ಅವರನ್ನು ಭೇಟಿಯಾದರು. ಅವರು ಕೊಲಂಬೊ ಬಳಿ ನಡೆದ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
Advertisement
Officials of @IndiainSL met in the morning Mr. Vivek Varma, an Indian national and Director of Indian Visa Center, who sustained grievous injuries in an unprovoked assault last night near #Colombo. Matter brought to attention of authorities in #SriLanka. (1/ pic.twitter.com/tUc0SOq0Gd
— India in Sri Lanka (@IndiainSL) July 19, 2022
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅಶಾಂತಿ ಮೂಡಿದೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿರುವ ಭಾರತೀಯ ಪ್ರಜೆಗಳು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಜಾಗೃತರಾಗಿರಬೇಕು. ಅದಕ್ಕೆ ಅನುಗುಣವಾಗಿ ತಮ್ಮ ಚಲನವಲನ ಮತ್ತು ಚಟುವಟಿಕೆಗಳನ್ನು ಯೋಜಿಸಲು ವಿನಂತಿಸಲಾಗಿದೆ. ಅಗತ್ಯವಿದ್ದಾಗ ನೀವು ನಮ್ಮನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಗೊಟಬಯ ರಾಜಪಕ್ಸೆಗೆ ಶಾಕ್ ಕೊಟ್ಟ ಸಿಂಗಾಪುರ – ದೇಶ ಬಿಟ್ಟು ಹೊರಡಿ ಎಂದು ಖಡಕ್ ಸೂಚನೆ
Advertisement
Advertisement
ಇಂದು ನಡೆಯಲಿರುವ ಪ್ರಮುಖ ಚುನಾವಣೆಗೆ ಮುನ್ನ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ತುರ್ತು ಪರಿಸ್ಥಿತಿ ಹೇರಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ಭಾರತ ಮತ್ತು ಶ್ರೀಲಂಕಾದ ಜನರ ನಡುವಿನ ಸಂಬಂಧವು ಯಾವಾಗಲೂ ಸೌಹಾರ್ದಯುತ ಮತ್ತು ಸ್ನೇಹಪರವಾಗಿದೆ ಎಂದು ಭಾರತೀಯ ಹೈಕಮಿಷನ್ ಟ್ವೀಟ್‍ನಲ್ಲಿ ತಿಳಿಸಿದೆ. ಇದನ್ನೂ ಓದಿ: ಮೊದಲು ಎಲೆಕ್ಷನ್ ಆಗಲಿ, ಆ ಮೇಲೆ ಪೈಪೋಟಿ ಮಾಡಲಿ: ಲಕ್ಷ್ಮಿ ಹೆಬ್ಬಾಳ್ಕರ್