ಮುಳುಗಿದ ಚೀನಾ ಹಡಗು – ಸಹಾಯಕ್ಕೆ ನಿಂತ ಭಾರತೀಯ ನೌಕಾಪಡೆ

Public TV
1 Min Read
Chinese Ship

ನವದೆಹಲಿ: ಹಿಂದೂ ಮಹಾಸಾಗರದ (Indian Ocean) ಮಧ್ಯ ಪ್ರದೇಶದಲ್ಲಿ ಮುಳುಗಿದ ಚೀನಾದ (China) ಮೀನುಗಾರಿಕಾ ಹಡಗಿನ ಶೋಧ ಕಾರ್ಯಕ್ಕೆ ಭಾರತೀಯ ನೌಕಾಪಡೆ (Indian Navy) ನೆರವು ನೀಡಿದೆ.

ಹಡಗಿನಲ್ಲಿ 17 ಚೀನೀ ಸಿಬ್ಬಂದಿ, 17 ಇಂಡೋನೇಷಿಯನ್ನರು ಮತ್ತು ಐದು ಫಿಲಿಪೈನ್ಸ್ ನಾಗರಿಕರು ಸೇರಿದಂತೆ 39 ಜನರು ಇದ್ದರು ಎಂದು ವರದಿಯಾಗಿದೆ. ಮಂಗಳವಾರದಿಂದ ಹಡಗಿನ ರಕ್ಷಣಾ ಕಾರ್ಯಾಚರಣೆಗಾಗಿ ಚೀನಾ-ಭಾರತ ಸೇರಿದಂತೆ ಹಲವಾರು ದೇಶಗಳ ಸಹಾಯವನ್ನು ಕೋರಿತ್ತು. ಚೀನಾದ ನೌಕಾಪಡೆಯ ಮನವಿಗೆ ಭಾರತೀಯ ನೌಕಾಪಡೆ ಸ್ಪಂದಿಸಿದ್ದು, ಬುಧವಾರದಿಂದ ಶೋಧ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದನ್ನೂ ಓದಿ: ಕೇರಳ ಸ್ಟೋರಿ ನಿಷೇಧ – ಮಮತಾ ಸರ್ಕಾರದ ಆದೇಶಕ್ಕೆ ಸುಪ್ರೀಂ ತಡೆ

ಸೇನೆಯ ವಿಮಾನವು ಪ್ರತಿಕೂಲ ಹವಾಮಾನದ ಹೊರತಾಗಿಯೂ ವ್ಯಾಪಕ ಹುಡುಕಾಟದಲ್ಲಿ ತೊಡಗಿದೆ. ಮುಳುಗಿದ ಹಡಗಿಗೆ ಸೇರಿದ ಬಹು ವಸ್ತುಗಳನ್ನು ಪತ್ತೆ ಮಾಡಿದೆ. ಅಲ್ಲದೆ ಹಡಗಿನಲ್ಲಿ ಎರಡು ಶವಗಳು ಪತ್ತೆಯಾಗಿವೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. ಆದರೆ ಅವರು ಯಾವ ದೇಶದ ಪ್ರಜೆಗಳು ಎಂದು ತಿಳಿಸಲಾಗಿಲ್ಲ. ಇನ್ನುಳಿದವರ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಲ್ಲಿಕಟ್ಟುಗೆ ಸುಪ್ರೀಂ ಅನುಮತಿ – ಕಂಬಳಕ್ಕೂ ಗ್ರೀನ್ ಸಿಗ್ನಲ್

Share This Article