ನವದೆಹಲಿ: ಮೇಕ್ ಇಂಡಿಯಾಕ್ಕೆ ರಕ್ಷಣಾ ವಲಯದಿಂದಲೂ ಹೆಚ್ಚಿನ ಉತ್ತೇಜನ ಸಿಗುತ್ತಿದ್ದು, ಭಾರತೀಯ ನೌಕಾಪಡೆಯು ಮೊದಲ ಬಾರಿಗೆ ಎಕೆ-630 ಗನ್‍ನಲ್ಲಿ ಬಳಸಲಾಗುವ 30 ಎಂಎಂ ಮದ್ದುಗುಂಡುಗಳನ್ನು ಸಂಪೂರ್ಣವಾಗಿ ಭಾರತದಲ್ಲೇ ತಯಾರಾಗಿದೆ.
ಎಕನಾಮಿಕ್ ಎಕ್ಸ್‍ಪ್ಲೋಸಿವ್ಸ್ ಲಿಮಿಟೆಡ್‍ನ ಸಿಎಂಡಿ ಸತ್ಯನಾರಾಯಣ ನುವಾಲ್ ಅವರು ಈ ಮದ್ದುಗುಂಡುಗಳನ್ನು ನೌಕಾಪಡೆಯ ಮುಖ್ಯ ವೈಸ್ ಅಡ್ಮಿರಲ್ ಎಸ್‍ಎನ್ ಘೋರ್ಮೇಡ್ ಅವರಿಗೆ ಹಸ್ತಾಂತರಿಸಿದರು.
Advertisement
Advertisement
ಈ ಬಗ್ಗೆ ಮಾತನಾಡಿದ ಘೋರ್ಮೇಡ್ ಅವರು, ಖಾಸಗಿ ಉದ್ಯಮವು ಸಂಪೂರ್ಣ ಸ್ವದೇಶಿ ಮದ್ದುಗುಂಡುಗಳನ್ನು ಅಭಿವೃದ್ಧಿ ಪಡಿಸಿರುವುದು ದೇಶದ ಪ್ರಮುಖ ಸಾಧನೆಯಾಗಿದೆ. ಈ ಮದ್ದುಗುಂಡುಗಳನ್ನು ತಯಾರಿಸಲು 1 ವರ್ಷ ಬೇಕಾಯಿತು. ಇದರ ಘಟಕಗಳೆಲ್ಲವೂ ಸ್ಥಳೀಯವಾಗಿವೆ ಎಂದರು. ಇದನ್ನೂ ಓದಿ: ಪಕ್ಷದ ಸಂಘಟನೆ, ಮುಂಬರುವ ಚುನಾವಣೆ ಬಗ್ಗೆ ನಡ್ಡಾ ಜೊತೆ ಚರ್ಚಿಸಿದ್ದೇನೆ: ಬಿಎಸ್‌ವೈ
Advertisement
Advertisement
ಗನ್‍ನ ಮದ್ದುಗುಂಡುಗಳನ್ನು ಸಂಪೂರ್ಣವಾಗಿ ತಯಾರಿಸಲು ಮೊದಲ ಬಾರಿಗೆ ಭಾರತೀಯ ಖಾಸಗಿ ಉದ್ಯಮಕ್ಕೆ ಇದೇ ಮೊದಲ ಬಾರಿಗೆ ಅವಕಾಶ ನೀಡಲಾಗಿತ್ತು. 1 ವರ್ಷದಲ್ಲೇ ಪೂರ್ಣಗೊಳಿಸಿರುವುದು ದಾಖಲೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ರಾಷ್ಟ್ರೀಯ ಭದ್ರತಾ ಸಮೂಹಕ್ಕೆ `ಡ್ರೋನ್ ಸಮೂಹ’ ಸೇರ್ಪಡೆ – ಏನಿದರ ವಿಶೇಷತೆ?