– ಕಬೋರ್ಡ್‌ನಲ್ಲಿ ಬಚ್ಚಿಟ್ಟುಕೊಂಡು ಪ್ರಾಣ ಉಳಿಸಿಕೊಂಡ ಮಕ್ಕಳು
ವಾಷಿಂಷ್ಟನ್: ಕೌಟುಂಬಿಕ ಕಲಹದಲ್ಲಿ 4 ಜೀವಗಳು ಬಲಿಯಾಗಿರುವ ಘಟನೆ ಅಮೆರಿಕದ (America) ಜಾರ್ಜಿಯಾ ರಾಜ್ಯದ ಲಾರೆನ್ಸ್‌ವಿಲ್ಲೆ ನಗರದಲ್ಲಿ ನಡೆದಿದೆ. ಕುಟುಂಬ ಕಲಹದಿಂದ ಸಿಟ್ಟಿಗೆದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮೂವರು ಸಂಬಂಧಿಕರನ್ನ ಗುಂಡಿಕ್ಕಿ (Indian Man Shoot) ಕೊಂದಿದ್ದಾನೆ.
ವಿಜಯ್ ಕುಮಾರ್ (51) ಗುಂಡು ಹಾರಿಸಿದ ವ್ಯಕ್ತಿ. ಪತ್ನಿ ಅಟ್ಲಾಂಟಾದ ಮೀಮು ಡೋಗ್ರಾ (43), ಸಂಬಂಧಿಕರಾದ ಲಾರೆನ್ಸ್‌ವಿಲ್ಲೆಯ ಗೌರವ್ ಕುಮಾರ್ (33), ನಿಧಿ ಚಂದರ್ (37) ಮತ್ತು ಹರೀಶ್ ಚಂದರ್ (38) ಗುಂಡಿನ ದಾಳಿಗೆ ಬಲಿಯಾದವರು ಎಂದು ಗ್ವಿನೆಟ್ ಕೌಂಟಿ ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಆರೋಪಿಯನ್ನ ಬಂಧಿಸಲಾಗಿದೆ. ಇದನ್ನೂ ಓದಿ: ಗುಡ್ ನ್ಯೂಸ್ – ಭಾರತದ ಮೇಲಿನ 25% ಹೆಚ್ಚುವರಿ ಸುಂಕ ತೆಗೆಯಲು ಟ್ರಂಪ್ ಸಿದ್ಧತೆ!
ಘಟನೆ ಸಮಯದಲ್ಲಿ ತನ್ನ ಮೂವರು ಮಕ್ಕಳು ಬಟ್ಟೆಗಳನ್ನಿಡುವ ದೊಡ್ಡ ಕಬೋರ್ಡ್‌ನಲ್ಲಿ ಬಚ್ಚಿಟ್ಟುಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನೂ ದಾಳಿಯೂ ಅತೀವ ದುಃಖ ಉಂಟು ಮಾಡಿದ್ದು, ಮೃತರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ಸಹಕಾರ ನೀಡಲಾಗುತ್ತಿದೆ ಎಂದು ಅಟ್ಲಾಂಟಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಇದನ್ನೂ ಓದಿ: ಯಾವ್ದೇ ದಾಳಿಯನ್ನ ಪೂರ್ಣ ಯುದ್ಧವಾಗಿ ಪರಿಗಣಿಸುತ್ತೇವೆ, ಕಠಿಣ ರೀತಿಯಲ್ಲೇ ಉತ್ತರ ಕೊಡ್ತೀವಿ: ಇರಾನ್ ಎಚ್ಚರಿಕೆ
ಆಮೇಲೆ ಏನಾಯ್ತು?
ಬ್ರೂಕ್ ಐವಿ ಕೋರ್ಟ್‌ನ 1000 ಬ್ಲಾಕ್‌ನಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಶುಕ್ರವಾರ ಬೆಳಗ್ಗಿನ ಜಾವ 2:30 ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಘಟನೆ ವೇಳೆ ಬಟ್ಟೆ ಇಡುವ ಕಬೋರ್ಡ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ ಕುಮಾರ್ ಮತ್ತು ಡೊಗ್ರಾ ದಂಪತಿ ಪುತ್ರ, 911 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಮಾಹಿತಿ ಪಡೆದ ಕೆಲವೇ ನಿಮಿಷಗಳಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದಾಗ ಗುಂಡೇಟಿನಿಂದ ಮೃತಪಟ್ಟಿದ್ದ ನಾಲ್ವರ ಶವಗಳು ರಕ್ತಸಿಕ್ತವಾಗಿ ಬಿದ್ದಿದ್ದವು. ಕೃತ್ಯಗೈದು ಎಸ್ಕೇಪ್ ಆಗಿದ್ದ ವ್ಯಕ್ತಿಯ ವಾಹನ ಇನ್ನೂ ಡ್ರೈವ್‌ನಲ್ಲಿತ್ತು. ಹಾಗಾಗಿ ಆರೋಪಿ ಬೆನ್ನಟ್ಟಿದ ಪೊಲೀಸರು ಸಮೀಪದಲ್ಲಿದ್ದ ಅರಣ್ಯ ಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು. ಬಳಿಕ ಮೂವರು ಮಕ್ಕಳನ್ನ ಅವರ ಕುಟುಂಬ ಸದಸ್ಯರಿಗೆ ಒಪ್ಪಿಸಲಾಗಿದೆ.
ಘಟನೆಗೆ ಕಾರಣ ಏನು?
ವಿಜಯ್ ಕುಮಾರ್ ಮತ್ತು ಡೋಗ್ರಾ ದಂಪತಿ ಅಟ್ಲಾಂಟಾದಲ್ಲಿ ನೆಲೆಸಿದ್ದಾರೆ. ತಮ್ಮ ಮನೆಯಲ್ಲಿ ದಂಪತಿ ನಡುವೆ ವಾಗ್ವಾದ ಏರ್ಪಟ್ಟಿತ್ತು. ಈ ವೇಳೆ ಸಿಟ್ಟಿಗೆದ್ದ ವಿಜಯ್ ಏಕಾಏಕಿ ಗುಂಡಿಕ್ಕಿ ಕೊಂದಿದ್ದಾನೆ. ಸದ್ಯ ವಿಜಯ್ ಕುಮಾರ್ ವಿರುದ್ಧ 4 ತೀವ್ರತರವಾದ ಹಲ್ಲೆ ಪ್ರಕರಣ, ನಾಲ್ಕು ಕೊಲೆ ಪ್ರಕರಣ, ನಾಲ್ಕು ದುರುದ್ದೇಶಪೂರಿತ ಕೊಲೆ ಪ್ರಕರಣಗಳು ದಾಖಲಾಗಿವೆ. ಜೊತೆಗೆ ಮಕ್ಕಳ ಮೇಲೆ ಕ್ರೌರ್ಯ ಆರೋಪದ ಮೇಲೆ ಫಸ್ಟ್ ಡಿಗ್ರಿಯಲ್ಲಿ 1 ಮತ್ತು ಥರ್ಡ್ ಡಿಗ್ರಿಯಲ್ಲಿ 2 ಆರೋಪಗಳನ್ನ ಹೊರಿಸಲಾಗಿದೆ. ಇದನ್ನೂ ಓದಿ: ತಾಯ್ನಾಡಿನ ರಕ್ತ ಸೋರುತ್ತಿದೆ – ಯೂನಸ್ ಸರ್ಕಾರ ಕಿತ್ತೊಗೆಯಲು ಶೇಖ್ ಹಸೀನಾ ಕರೆ



