ಜೈಪುರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ 40 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಪಾಕಿಸ್ತಾನ ವರ ಮತ್ತು ಭಾರತದ ವಧುವಿನ ಮದುವೆ ಕ್ಯಾನ್ಸಲ್ ಆಗಿದೆ.
ಬಾರ್ಮರ್ ಗಡಿಭಾಗದ ಖೇಜೆದ್ ಕಾ ಪಾರ್ ಗ್ರಾಮದ ವರ ಮಹೇಂದ್ರ ಸಿಂಗ್ ಮತ್ತು ಸಿಂಧ್ ಭಾಗದ ಅಮರ್ ಕೋಟ್ ಜಿಲ್ಲೆಯ ಸಿನೋಯ್ ಗ್ರಾಮದ ಚಗನ್ ಕನ್ವಾರ್ ಮದುವೆ ನಿಶ್ಚಯವಾಗಿತ್ತು.
Advertisement
ವರ ಮಹೇಂದ್ರ ಸಿಂಗ್ ಶನಿವಾರ ಥಾರ್ ಎಕ್ಸ್ ಪ್ರೆಸ್ ಟಿಕೆಟ್‍ಗಳನ್ನು ಬುಕ್ ಮಾಡಿದ್ದರು. ಆದರೆ ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಅಧಿಕಾರಿಗಳು ರೈಲ್ವೆ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಇವರಿಬ್ಬರ ವಿವಾಹ ಕ್ಯಾನ್ಸಲ್ ಆಗಿದೆ. ಪಾಕಿಸ್ತಾನದ ಲಾಹೋರ್ ನಿಂದ ಭಾರತದ ಅತ್ತರಿಗೆ ರೈಲು ಸಂಚಾರ ನಡೆಯಬೇಕಿತ್ತು. ಈ ರೈಲು ಸೋಮವಾರ ಮತ್ತು ಗುರುವಾರ ಮಾತ್ರ ಸಂಚರಿಸುತ್ತದೆ.
Advertisement
Advertisement
ನಾವು ವೀಸಾ ಪಡೆಯಲು ತುಂಬಾ ಪ್ರಯತ್ನ ಮಾಡಿದೆವು. ಆದರೆ ಅದು ಸಾಧ್ಯವಾಗಿಲ್ಲ. ನಾವು ಈಗಾಗಲೇ ನಾವು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಸಂಬಂಧಿಕರಿಗೂ ಆಮಂತ್ರಣ ಪತ್ರಿಕೆ ಹಂಚಿದ್ದೆವು. ಪಾಕಿಸ್ತಾನದ ವೀಸಾ ಪಡೆಯಲು ಸಚಿವ ಗಜೇಂದ್ರ ಸಿಂಗ್ ಅವರ ಜೊತೆ ಮಾತನಾಡಿದೆ. ಆದರೆ ಅವರು ಕೇವಲ 5 ಮಂದಿಗೆ ಮಾತ್ರ ವೀಸಾ ಸಿಗುವುದಾಗಿ ಹೇಳಿದರು. ಹೀಗಾಗಿ ಮದುವೆ ನಿಂತು ಹೋಗಿದೆ ಎಂದು ಮಹೇಂದ್ರ ಸಿಂಗ್ ಹೇಳಿದ್ದಾರೆ.
Advertisement
ಪಾಕಿಸ್ತಾನದ ಜಾಶಿ-ಎ-ಮೊಹಮ್ಮದ್ ಕ್ಯಾಂಪ್, ಪಾಕಿಸ್ತಾನದ ಜೆಟ್ ಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ ನಂತರ ಹಾಗೂ ರಜೌರಿ ಸೆಕ್ಟರ್ ನಲ್ಲಿ ಕೆಲವು ಬಾಂಬು ದಾಳಿಯ ನಂತರ ಈ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv