ವಾಷಿಂಗ್ಟನ್: ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ದೊಡ್ಡ ದೊಡ್ಡ ಕೃತ್ಯ ನಡೆಯುತ್ತಿರುವುದು ಸಹಜವಾಗಿಬಿಟ್ಟಿದೆ. ವಿದೇಶಗಳೂ ಇದರಿಂದ ಹೊರತಾಗಿಲ್ಲ. ಅಮೆರಿಕದ ಡಲ್ಲಾಸ್ ನಗರದಲ್ಲಿ (Dallas City) ನಡೆದಿರುವ ಘಟನೆಯೇ ಇದಕ್ಕೆ ನಿದರ್ಶನ.
ಹೌದು. ಕೇವಲ ಕೆಟ್ಟುಹೋದ ವಾಷಿಂಗ್ ಮಿಷನ್ (Washing Machine) ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಅಮೆರಿಕದಲ್ಲಿ ಪತ್ನಿ, ಮಗನ ಮುಂದೆಯೇ ಕರ್ನಾಟಕ ಮೂಲದ ಮೋಟೆಲ್ (US Motel) ಮ್ಯಾನೇಜರ್‌ನ ಶಿರಚ್ಛೇದ ಮಾಡಲಾಗಿದೆ. ಮೋಟೆಲ್ ಎಂಬ ಪದ ಮೋಟರ್ ಲಾಡ್ಜ್ ಅನ್ನೋದನ್ನ ಸೂಚಿಸುತ್ತೆ. ಅಂದ್ರೆ ಸರಳವಾದ ಬಜೆಟ್ ಸ್ನೇಹಿ ವಾಸ್ತವ್ಯಕ್ಕೆ ಯೋಗ್ಯವಾದ ಹೋಟೆಲ್ ಮಾದರಿಯ ಸ್ಥಳ.
🚨 A man was beheaded over a washing machine in Dallas.
50-year-old Indian-American, Chandra Nagamallaiah, lost his life to cold-blooded racism.
Inhuman. Heartless. Unforgivable.
And yet, some Indians will a find a way to justify this https://t.co/gDF0USzMea
— Aagastya_Thaker (@aagastyat) September 11, 2025
ಟೆಕ್ಸಾಸ್‌ನ (Texas) ಪ್ರಮುಖ ನಗರವಾದ ಡಲ್ಲಾಸ್ ಮೋಟೆಲ್‌ನಲ್ಲಿ ಸಹೋದ್ಯೋಗಿಯೇ ಈ ಕೃತ್ಯ ಎಸಗಿರುವುದು ಕಂಡುಬಂದಿದೆ. ಘಟನೆಯ ನಂತರ ಸಹೋದ್ಯೋಗಿಯನ್ನ ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ಇದನ್ನೂ ಓದಿ: ರೋಗಿ ಜೊತೆ ಸೆಕ್ಸ್ – ಕೆನಡಾದಲ್ಲಿ ಭಾರತ ಮೂಲದ ವೈದ್ಯೆಯ ಮೆಡಿಕಲ್ ಲೈಸೆನ್ಸ್ ಅಮಾನತು
ಮೋಟೆಲ್‌ನಲ್ಲಿ ಏನಾಯ್ತು?
ಮೋಟೆಲ್ ಮ್ಯಾನೇಜರ್ ಆಗಿರುವ ಕರ್ನಾಟಕ ಮೂಲದ ಚಂದ್ರ ನಾಗಮಲ್ಲಯ್ಯ (50), 37 ವರ್ಷದ ತನ್ನ ಸಹೋದ್ಯೋಗಿ ಕೊಬೋಸ್ ಮಾರ್ಟಿನೆಜ್ ಮತ್ತು ಮತ್ತೊಬ್ಬ ಮಹಿಳಾ ಸಹೋದ್ಯೋಗಿಗೆ ಕೆಟ್ಟುಹೋಗಿರುವ ವಾಷಿಂಗ್ ಮಿಷಿನ್ ಬಳಸದಂತೆ ಹೇಳಿದ್ದಾರೆ. ಅವರು ನೇರವಾಗಿ ಹೇಳದೇ ಮತ್ತೊಬ್ಬರಿಂದ ಅನುವಾದಿಸುವಂತೆ ಸೂಚನೆ ನೀಡಿದ್ದಾರೆ. ಅಷ್ಟಕ್ಕೇ ಅಸಮಾಧಾನಗೊಂಡ ಕೊಬೋಸ್ ಮಾರ್ಟಿನೆಜ್ ಅಸಮಾಧಾನಗೊಂಡಿದ್ದಾನೆ ಎಂದು ಹೇಳಲಾಗಿದೆ. ಇದನ್ನೂ ಓದಿ: ನೇಪಾಳ ದಂಗೆ | Gen-Z ನಲ್ಲಿ ಬಿರುಕು – ಮಧ್ಯಂತರ ಪ್ರಧಾನಿ ಹುದ್ದೆಗೆ ಸುಶೀಲಾ ಕರ್ಕಿ Vs ಕುಲ್ಮನ್ ನಡ್ವೆ ಫೈಟ್
ಅಸಮಾಧಾನಗೊಂದ ಕೊಬೋಸ್ ಮಚ್ಚು ತೆಗೆದುಕೊಂಡು ನಾಗಮಲ್ಲಯ್ಯನಿಗೆ ಇರಿದಿದ್ದಾನೆ. ಆಗ ನಾಗಮಲ್ಲಯ್ಯ ಅಲ್ಲಿಂದ ತಪ್ಪಿಸಿಕೊಂಡು ಪಾರ್ಕಿಂಗ್ ಮುಂಭಾಗದಲ್ಲಿದ್ದ ಕಚೇರಿ ಕಡೆಗೆ ದೌಡುಕಿತ್ತಿದ್ದಾನೆ. ಈ ವೇಳೆ ಹೆಂಡತಿ ಮತ್ತು ಮಗ ಮಧ್ಯಪ್ರವೇಶಿಸಲು ಓಡಿಹೋಗಿದ್ದಾರೆ. ಆದ್ರೂ ಆತನ ಬೆನ್ನಟ್ಟಿದ್ದ ಕೊಬೋಸ್ ನಾಗಮಲ್ಲಯ್ಯನ ಪತ್ನಿ, ಮಗನ ಮುಂದೆಯೇ ಶಿರಚ್ಛೇದ ಮಾಡಿದ್ದಾನೆ. ಬಳಿಕ ಕತ್ತರಿಸಿದ ತಲೆಯನ್ನ ಕಸದ ತೊಟ್ಟಿಗೆ ಎಸೆದಿದ್ದಾನೆ. ಈ ವಿಡಿಯೋ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಲೆಯನ್ನು ಕಸದ ತೊಟ್ಟಿಗೆ ಎಸೆದು ರಕ್ತ ಹರಿಯುತ್ತಿದ್ದ ಮಚ್ಚು ಹಿಡಿದು ಒಯ್ಯುವಾಗ ಆತನನ್ನ ಪೊಲೀಸರು ಬಂಧಿಸಿದ್ದಾರೆ.
ನಾಗಮಲ್ಲಯ್ಯ ಅವರ ದುರಂತ ಸಾವಿಗೆ ಭಾರತೀಯ ಕಾನ್ಸುಲೇಟ್ ಸಂತಾಪ ಸೂಚಿಸಿದೆ. ನಾವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದ್ದೇವೆ. ಆರೋಪಿ ಡಲ್ಲಾಸ್ ಪೊಲೀಸರ ವಶದಲ್ಲಿದ್ದಾನೆ. ಈ ಪ್ರಕರಣದ ಮೇಲೆ ಗಂಭೀರವಾಗಿ ನಿಗಾ ಇಡುತ್ತೇವೆ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ. ಇದನ್ನೂ ಓದಿ: ʻತುಂಬಾ ಅಪಾಯಕಾರಿʼ ದೂರವಿರಿ – ರಷ್ಯಾ ಸೇನೆ ಸೇರುತ್ತಿರುವ ಭಾರತೀಯರಿಗೆ MEA ವಾರ್ನಿಂಗ್