ಬೆಂಗಳೂರು: ಎಚ್-1 ಬಿ ವೀಸಾ ನೀಡಿ ಭಾರತೀಯ ಕಂಪೆನಿಗಳು ವಿದೇಶಕ್ಕೆ ಉದ್ಯೋಗಿಗಳನ್ನು ಕಳಹಿಸುವ ಬದಲು ಅವರಿಗೆ ಸ್ವದೇಶದಲ್ಲೇ ಉದ್ಯೋಗ ನೀಡಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ನಾರಾಯಣ ಮೂರ್ತಿ ಹೇಳಿದ್ದಾರೆ.
ವಾಹಿನಿಯೊಂದರೆ ಜೊತೆ ಮಾತನಾಡಿದ ಅವರು, ಭಾರತೀಯ ಸಾಫ್ಟ್ ವೇರ್ ಕಂಪೆನಿಗಳು ಅಮೆರಿಕದಲ್ಲಿ ಅಮೆರಿಕ ಜನತೆಗೆ, ಕೆನಡಾದಲ್ಲಿ ಕೆನಡಾದ ಪ್ರಜೆಗಳಿಗೆ, ಇಂಗ್ಲೆಂಡಿನಲ್ಲಿ ಇಂಗ್ಲೆಂಡ್ ಮಂದಿಗೆ ಅವಕಾಶ ನೀಡಬೇಕು ಆಗ ಮಾತ್ರ ನಾವು ಅಂತಾರಾಷ್ಟ್ರೀಯ ಕಂಪೆನಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ರೀತಿ ಮಾಡಿದಾಗ ನಾವು ಬಹು ಸಂಸ್ಕೃತಿಯ ಕಂಪೆನಿಯಾಗುತ್ತೇವೆ ಎಂದು ಎಂದು ತಿಳಿಸಿದರು.
Advertisement
ಕಾಲೇಜಿನ ಹಂತದಲ್ಲೇ ಉದ್ಯೋಗಿಗಳನ್ನು ನೇಮಕ ಮಾಡಿ ಅವರಿಗೆ ಸೂಕ್ತ ತರಬೇತಿ ನೀಡಬೇಕು. ಈ ಮೂಲಕ ಸ್ಥಳೀಯರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡಬೇಕು ಎಂದು ನಾರಾಯಣ ಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
Advertisement
ಕನಿಷ್ಠ 1,30,000 ಡಾಲರ್(ಅಂದಾಜು 88.17 ಲಕ್ಷ ರೂ.) ಸಂಬಳ ಹೊಂದಿದ ಉದ್ಯೋಗಿಗಳಿಗೆ ಮಾತ್ರ ಎಚ್-1ಬಿ ವೀಸಾ ನೀಡಲು ಅಮೆರಿಕ ಸರ್ಕಾರ ಮುಂದಾಗಿದೆ. ಎಚ್-1ಬಿ ವೀಸಾದ ಕಾನೂನು ತಿದ್ದುಪಡಿ ಮಾಡಲು ‘ಹೈ ಸ್ಕಿಲ್ಡ್ ಇಂಟಿಗ್ರಿಟಿ ಆಂಡ್ ಫೇರ್‍ನೆಸ್ ಮಸೂದೆ 2017’ ಅಮೆರಿಕದ ಸಂಸತ್ತಿನಲ್ಲಿ ಮಂಡನೆಯಾಗಿದೆ. ಪ್ರಸ್ತಾವಿತ ಮಸೂದೆಯಲ್ಲಿ ಎಚ್-1ಬಿ ವೀಸಾ ಪಡೆಯಲು ಉದ್ಯೋಗಿಗಳಿಗೆ ಕನಿಷ್ಠ 1.30 ಲಕ್ಷ ಡಾಲರ್ ಸಂಬಳ ನೀಡಬೇಕೆಂಬ ಅಂಶವಿದೆ.
Advertisement
ಪ್ರಸ್ತುತ ಈಗ ಎಚ್-1ಬಿ ವೀಸಾ ಹೊಂದಿದವರಿಗೆ ಕನಿಷ್ಠ ಸಂಬಳದ ಮಿತಿ 60 ಸಾವಿರ ಡಾಲರ್(40.69 ಲಕ್ಷ ರೂ.) ಇದೆ. 1989ರ ಜಾರಿಗೆ ಬಂದಿದ್ದ ಈ ವೀಸಾ ನಿಯಮದಲ್ಲಿ ಇದೂವರೆಗೆ ಯಾವುದೇ ಬದಲಾವಣೆ ಆಗಿರಲಿಲ್ಲ. ಆದರೆ ಈಗ ಈ ವೀಸಾದ ಅಡಿ ಅಮೆರಿಕಕ್ಕೆ ತೆರಳುವ ಉದ್ಯೋಗಿಗಳ ಸಂಬಳದ ಮಿತಿ ಡಬಲ್ ಆಗಿದೆ. ಮಸೂದೆ ಮಂಡನೆಯಾಗುತ್ತಿದ್ದಂತೆ, ಟಿಸಿಎಸ್, ವಿಪ್ರೋ, ಎಚ್‍ಸಿಎಲ್ ಕಂಪೆನಿಗಳ ಶೇರುಗಳು ದಿಢೀರ್ ಕುಸಿದಿತ್ತು.
Advertisement