ಸ್ವಾತಂತ್ರೋತ್ಸವದ ದಿನವೇ ಪಾಕಿಸ್ತಾನದ ಸರ್ಕಾರಿ ವೆಬ್‍ಸೈಟ್‍ಗಳನ್ನ ಹ್ಯಾಕ್ ಮಾಡಿದ ಭಾರತೀಯ ಹ್ಯಾಕರ್ಸ್

Public TV
1 Min Read
pak hack

 

ನವದೆಹಲಿ: ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯಾದ ಆಗಸ್ಟ್ 14ರಂದು ಅಂದ್ರೆ ನಿನ್ನೆ ಭಾರತೀಯ ಹ್ಯಾಕರ್‍ಗಳು ಪಾಕಿಸ್ತಾನದ ವೆಬ್‍ಸೈಟ್‍ಗಳನ್ನ ಹ್ಯಾಕ್ ಮಾಡಿದ್ದಾರೆ. ಪ್ರಮುಖ ಸರ್ಕಾರಿ ತಾಣಗಳನ್ನೂ ಸೇರಿದಂತೆ ಸುಮಾರು 500 ವೆಬ್‍ಸೈಟ್‍ಗಳನ್ನ ಹ್ಯಾಕ್ ಮಾಡಲಾಗಿದ್ದು, ಭಾರತದ ಪರವಾದ ಸಾಲುಗಳನ್ನ ಹಾಕಿದ್ದಾರೆ.

ಪಾಕಿಸ್ತಾನದ ಕೆಲವು ಪ್ರಮುಖ ಸಚಿವಾಲಯದ ವೆಬ್‍ಸೈಟ್‍ಗಳನ್ನ ಹ್ಯಾಕ್ ಮಾಡಲಾಗಿದೆ. ರಕ್ಷಣಾ ಸಚಿವಾಲಯ, ಹವಾಮಾನ ಬದಲಾವಣೆ ಸಚಿವಾಲಯ, ಜಲ ಮತ್ತು ವಿದ್ಯುತ್ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಸಚಿವಾಲಯ ಸರಿದಂತೆ ಇತರೆ ಸಚಿವಾಲಯಗಳ ವೆಬ್‍ಸೈಟ್‍ಗಳು ಹ್ಯಾಕ್ ಆಗಿವೆ.

ಇನ್ನೂ ಕಾರ್ಯನಿರತವಾಗದ ಕೆಲವು ವೆಬ್‍ಸೈಟ್‍ಗಳಲ್ಲಿ “ವೆಬ್‍ಸೈಟ್ ಅಂಡರ್ ಮೇಂಟೆನೆನ್ಸ್” ಎಂಬ ಸಂದೇಶವಿದೆ. ಲುಲು ಸೆಕ್ ಇಂಡಿಯಾ ಎಂಬ ಗುಂಪು ಈ ಹ್ಯಾಕಿಂಗ್ ಮಾಡಿರುವುದಾಗಿ ಇಲ್ಲಿನ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಾಕಿಸ್ತಾನದ ಸರ್ಕಾರಿ ವೆಬ್‍ಸೈಟ್‍ಗಳ ಮೇಲೆ ಭಾರತೀಯ ಹ್ಯಾಕರ್‍ಗಳು ಸೈಬರ್ ದಾಳಿ ಮಾಡಿರುವುದು ಇದೇ ಮೊದಲೇನಲ್ಲ. 2016ರ ಅಕ್ಟೋಬರ್‍ನಲ್ಲಿ ಪ್ರಮುಖ ಸರ್ಕಾರಿ ನೆಟ್‍ವರ್ಕ್‍ಗಳ ಮೇಲೆ ಭಾರತೀಯ ಹ್ಯಾಕರ್‍ಗಳು ದಾಳಿ ಮಾಡಿ ಅವರ ಕಂಪ್ಯೂಟರ್ ಮತ್ತು ಮಾಹಿತಿಗಳನ್ನ ಲಾಕ್ ಮಾಡಿದ್ದರು. ಪಾಕಿಸ್ತಾನಿ ಹ್ಯಾಕರ್‍ಗಳೂ ಕೂಡ ಭಾರತೀಯ ಶೈಕ್ಷಣಿಕ ಸಂಸ್ಥೆಗಳ ಹಲವಾರು ವೆಬ್‍ಸೈಟ್‍ಗಳನ್ನ ಇದೇ ವರ್ಷ ಹ್ಯಾಕ್ ಮಾಡಿದ್ದರು.

https://twitter.com/dhunnaaditya/status/897106349602910208

Share This Article
Leave a Comment

Leave a Reply

Your email address will not be published. Required fields are marked *