ಕೇವಲ ವೋಟಿಗಾಗಿ ನನ್ನನ್ನು ಭಾರತಕ್ಕೆ ಕರೆತರಲು ಪ್ರಯತ್ನಿಸಲಾಗ್ತಿದೆ: ಕೇಂದ್ರದ ವಿರುದ್ಧ ಮಲ್ಯ ಕಿಡಿ

Public TV
1 Min Read
VIJAY MALYA

ಲಂಡನ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಗಳಿಸಲು ನನ್ನನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಮದ್ಯ ದೊರೆ ವಿಜಯ್ ಮಲ್ಯ ಹೇಳಿದ್ದಾರೆ.

ಬ್ರಿಟನ್ ನಲ್ಲಿರುವ ವಿಜಯ್ ಮಲ್ಯ ಅವರ ಆಸ್ತಿಯನ್ನು ವಶಪಡಿಸಿಕೊಳ್ಳುವುದಕ್ಕೆ ಬ್ರಿಟನ್ ಕೋರ್ಟ್ ಜಾರಿ ಆದೇಶ ಹೊರಡಿಸಿದೆ. ನ್ಯಾಯಾಲಯದ ತೀರ್ಪಿಗೆ ತಲೆಬಾಗಿದ್ದು, ಅಧಿಕಾರಿಗಳಿಗೆ ಸಹಕರಿಸುವುದಾಗಿ ವಿಜಯ್ ಮಲ್ಯ ತಿಳಿಸಿದ್ದಾರೆ.

ಬ್ರಿಟಿಷ್ ಫಾರ್ಮುಲಾ ಒನ್ ರೇಸ್ ವೇಳೆ ಪಾಲ್ಗೊಂಡಿದ್ದ ಮಲ್ಯ ಅವರನ್ನು ಮಾಧ್ಯಮವೊಂದು ಮಾತನಾಡಿಸಿದ್ದು ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

jm1404jy542

ಭಾರತದ 13 ಬ್ಯಾಂಕ್ ಗಳ ಸಾಲ ಮರುಪಾವತಿಗಾಗಿ ಇಂಗ್ಲೆಂಡಿನಿಂದ ಗಡಿಪಾರು ಮಾಡುವಂತೆ ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರವು ರಾಜಕೀಯ ಉದ್ದೇಶದಿಂದ ನನ್ನನ್ನು ಇಂಗ್ಲೆಂಡ್ ನಿಂದ ಭಾರತಕ್ಕೆ ಕರೆತರಲು ಯತ್ನಿಸುತ್ತಿದೆ. ಈ ವರ್ಷ ಚುನಾವಣಾ ವರ್ಷವಾಗಿರುವುದರಿಂದ ಈ ರೀತಿ ಮಾಡಿದರೆ ಮತಗಳು ಹೆಚ್ಚಿಗೆ ಸಿಗುತ್ತವೆ ಎಂದು ಕೇಂದ್ರ ಸರ್ಕಾರ ಭಾವಿಸಿದೆ ಎಂದು ಆರೋಪಿಸಿದರು.

ಇಂಗ್ಲೆಂಡಿನಲ್ಲಿರುವ ನನ್ನ ಆಸ್ತಿಯ ವಿವರಗಳ ಬಗ್ಗೆ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದೇನೆ. ನನ್ನಲ್ಲಿ ಕೆಲವೊಂದು ಕಾರುಗಳು, ಚಿನ್ನಾಭರಣಗಳು ಇವೆ. ಅದನ್ನು ವಶಕ್ಕೆ ಪಡೆಯಲು ನೀವು ನನ್ನ ಮನೆಗೆ ಬರಬೇಕಿಲ್ಲ. ದಿನಾಂಕ, ಸಮಯ ಹಾಗೂ ಸ್ಥಳವನ್ನು ತಿಳಿಸಿದರೆ ನಾನೇ ಅವುಗಳನ್ನು ತಮ್ಮ ವಶಕ್ಕೆ ನೀಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಎಸ್‍ಬಿಐನಿಂದ 963 ಕೋಟಿ ರೂ. ಮೌಲ್ಯದ ವಿಜಯ್‍ಮಲ್ಯ ಆಸ್ತಿ ವಶ!

ನನ್ನ ಹೆಸರಿನಲ್ಲಿರುವ ಆಸ್ತಿಗಳನ್ನು ಮಾತ್ರ ಬ್ಯಾಂಕ್‍ಗಳು ವಶಕ್ಕೆ ಪಡೆಯಬಹುದೇ ಹೊರತು ಇತರೆ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸಾಧ್ಯವಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ವಿಜಯ ಮಲ್ಯ ಇಂಗ್ಲೆಂಡಿನಲ್ಲಿರುವ ಬೆಲೆ ಬಾಳುವ ಆಸ್ತಿಗಳನ್ನು ತಮ್ಮ ಹೆಸರಿನಲ್ಲಿರಿಸಿಕೊಳ್ಳದೇ ಕುಟುಂಬ ಸದಸ್ಯರ ಹೆಸರಿನಲ್ಲಿರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *