ಲಂಡನ್: ಭಾರತೀಯ ಮೂಲದ ವ್ಯಕ್ತಿಯೊಬ್ಬ ವಿಮಾನದಲ್ಲಿ ಪ್ರಯಾಣ ಮಾಡುವಾಗ ಯುವತಿಯೊಬ್ಬಳ ಒಳಉಡುಪಿಗೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಒಂದು ವರ್ಷದ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.
ಅಪರಾಧಿಯನ್ನು ಹರ್ದೀಪ್ ಸಿಂಗ್ (36) ಎಂದು ಗುರುತಿಸಲಾಗಿದ್ದು, ಈತ ತನ್ನ ಒಂದು ವರ್ಷದ ಶಿಕ್ಷೆ ಪೂರ್ಣಗೊಂಡ ನಂತರ ಭಾರತಕ್ಕೆ ಮರಳಲಿದ್ದಾನೆ.
Advertisement
ಹರ್ದೀಪ್ ಸಿಂಗ್ ಇಂಗ್ಲೆಂಡಿಗೆ ಪ್ರವಾಸಿ ವೀಸಾದಲ್ಲಿ ಪ್ರಯಾಣ ಮಾಡುತ್ತಿದ್ದನು. ವಿಮಾನ ಹಾರಾಟದ ಸಂದರ್ಭದಲ್ಲಿ ತನ್ನ ಪಕ್ಕದಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದ ಯುವತಿಗೆ ಸುರ್ದೀಘವಾಗಿ ಲೈಂಗಿಕ ಕಿರುಕುಳ ನೀಡಿದ ಆರೋಪ ಈತನ ಮೇಲಿತ್ತು. ಮ್ಯಾಂಚೆಸ್ಟರ್ ನ ಮಿನ್ಷಲ್ ಸ್ಟ್ರೀಟ್ ಕ್ರೌನ್ ಕೋರ್ಟ್ ನಲ್ಲಿ ಈ ಪ್ರಕರಣದ ವಿಚಾರಣೆ ನಡೆದು ನ್ಯಾಯಾಧೀಶರು ಶಿಕ್ಷೆ ವಿಧಿಸಿದ್ದಾರೆ.
Advertisement
Advertisement
ವಿಮಾನ ಹಾರಾಟದ ಆರಂಭದಿಂದಲೂ ಸಿಂಗ್ ಅಸಭ್ಯವಾಗಿ ವರ್ತಿಸುತ್ತಿದ್ದನು. ಸಿಂಗ್ ಯುವತಿಯ ಖಾಸಗಿ ಅಂಗಗಳನ್ನು ಮುಟ್ಟಿ ಕಿರುಕುಳ ನೀಡಲು ಪ್ರಯತ್ನಿಸುತ್ತಿದ್ದನು. ಆದರೆ ಯುವತಿ ಈತನ ಜೊತೆ ಮಾತನಾಡದೇ ವಿರೋಧಿಸಿದ್ದಳು. ಇದರಿಂದ ಸಿಂಗ್ ಎಲ್ಲರೂ ಮಲಗುವರೆಗೂ ಕಾದು ಈ ರೀತಿಯ ಕೃತ್ಯವೆಸಗಿದ್ದಾನೆ ಎಂದು ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸ್ ವಿಮಾನ ನಿಲ್ದಾಣದ ಡಿಟೆಕ್ಟಿವ್ ಕಾನ್ಸ್ಟೇಬಲ್ ಕ್ಯಾಥರೀನ್ ಇವಾನ್ಸ್ ತಿಳಿಸಿದ್ದಾರೆ.
Advertisement
ಏನಿದು ಪ್ರಕರಣ?
ಈ ಘಟನೆ ಫೆಬ್ರವರಿ 23 ರಂದು ನಡೆದಿದ್ದು, ಮುಂಬೈನಿಂದ ಮ್ಯಾಂಚೆಸ್ಟರ್ ಗೆ ಹೊರಟಿದ್ದ ವಿಮಾನದಲ್ಲಿ 20 ವರ್ಷದ ಯುವತಿ ಪ್ರಯಾಣಿಸುತ್ತಿದ್ದಳು. ಆಕೆಯ ಪಕ್ಕದ ಸೀಟಿನಲ್ಲಿ ಸಿಂಗ್ ಕುಳಿತಿದ್ದನು. ಮೊದಲಿಗೆ ಸಿಂಗ್ ಯುವತಿಯೊಂದಿಗೆ ಮಾತನಾಡಲು ಇಷ್ಟಪಟ್ಟಿದ್ದನು. ಆದರೆ ಯುವತಿ ಸಿಂಗ್ ಜೊತೆ ಮಾತನಾಡದೇ ಸುಮ್ಮನೆ ಕುಳಿತಿದ್ದಳು. ನಂತರ ಇಬ್ಬರು ಮಾತನಾಡಿದ್ದಾರೆ. ಆದರೆ ಅಪರಾಧಿ ಸಿಂಗ್‍ಗೆ ಸರಿಯಾಗಿ ಇಂಗ್ಲಿಷ್ ಬಾರದ ಕಾರಣ ಯುವತಿಗೆ ಆತನ ಮಾತು ಅರ್ಥವಾಗುತ್ತಿರಲಿಲ್ಲ.
ಸ್ವಲ್ಪ ಸಮಯದ ನಂತರ ಸಿಂಗ್ ನಮ್ಮ ಪಕ್ಕದಲ್ಲಿ ಕುಳಿತಿದ್ದ ಮಹಿಳೆಯನ್ನು ತೋರಿಸಿ ‘ನಿಮ್ಮ ತಾಯಿಯೇ’ ಎಂದು ಕೇಳಿದ್ದಾನೆ. ಆದರೆ ಈ ವೇಳೆ ನಾನು ಕಿವಿಗೆ ಹೆಡ್‍ಫೋನ್ ಹಾಕಿಕೊಂಡು ಸಿನಿಮಾ ನೋಡುತ್ತಿದ್ದೆ. ಹೀಗಾಗಿ ನಾನು ಆತನಿಗೆ ಉತ್ತರಿಸಲಿಲ್ಲ. ಆದರೂ ಆತ ನನ್ನ ಕಿವಿಗೆ ಹಾಕಿದ್ದ ಹೆಡ್‍ಫೋನ್ ತೆಗೆದು ಹಾಕಿ ಮಾತನಾಡಲು ಪ್ರಯತ್ನಿಸಿದ್ದನು” ಎಂದು ಯುವತಿ ವಿಚಾರಣೆ ವೇಳೆ ನಡೆದ ಘಟನೆಯನ್ನು ಜಡ್ಜ್ ಮುಂದೆ ವಿವರಿಸಿದ್ದಾಳೆ.
ಲೈಂಗಿಕ ಕಿರುಕುಳ:
ಯುವತಿ ಪ್ರಯಾಣದ ಸಂದರ್ಭದಲ್ಲಿ ವಿಮಾನದಲ್ಲಿದ್ದ ಸೌಲಭ್ಯಗಳನ್ನು ಬಳಸಲು ಮುಂದಾಗಿದ್ದಾಳೆ. ಆದರೆ ಸಿಂಗ್ ಯುವತಿಯನ್ನು ಹೋಗಲು ಬಿಡದೇ ಪಕ್ಕದಲ್ಲಿಯೇ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದಾನೆ. ವಿಮಾನದೊಳಗಿನ ದೀಪಗಳನ್ನು ಆರಿಸಿದ ಬಳಿಕ ಎಲ್ಲ ಪ್ರಯಾಣಿಕರಂತೆ ಯುವತಿ ಕೂಡ ಹೊದಿಕೆ ಹೊದ್ದುಕೊಂಡು ಮಲಗಿದ್ದಾಳೆ.
ನಾನು ಮಲಗುತಿದ್ದಂತೆ ಸಿಂಗ್ ಲೈಂಗಿಕ ಕಿರುಕುಳ ನೀಡಲು ಶುರುಮಾಡಿದ್ದ. ಇದರಿಂದ ತಕ್ಷಣ ಎಚ್ಚರಗೊಂಡ ನಾನು ಆತನನ್ನು ದೂರ ತಳ್ಳಲು ಪ್ರಯತ್ನಿಸಿದೆ. ಆದರೆ ಆತ ನನ್ನ ಬಟ್ಟೆ ಮತ್ತು ಒಳಉಡುಪಿಗೆ ಕೈಹಾಕಿ ಬಲವಂತವಾಗಿ ಕಿಸ್ ಮಾಡಲು ಮುಂದಾಗಿದ್ದ. ಈ ವೇಳೆ ವಿಮಾನದಲ್ಲಿ ಎಲ್ಲರು ಮಲಗಿದ್ದರು. ಆಗ ನಾನು ಆತನಿಗೆ ತನ್ನ ಕೈಗಳನ್ನು ಹಿಂದೆ ತೆಗೆದುಕೊಳ್ಳುವಂತೆ ಪದೇ ಪದೇ ಮನವಿ ಮಾಡಿಕೊಂಡೆ. ನನ್ನ ಮನವಿಯನ್ನು ಕ್ಯಾರೇ ಮಾಡದ ಆತ ಕಿರುಕುಳ ನೀಡುವುದನ್ನು ಮುಂದುವರಿಸಿದ್ದ ಎಂದು ಯುವತಿ ತಿಳಿಸಿದ್ದಾಳೆ.
ಕೊನೆಗೆ ಯುವತಿ ಆತನಿಂದ ದೂರ ಹೋಗಲು ಪ್ರಯತ್ನಿಸಿದ್ದಾಳೆ. ಆದರೆ ಸಿಂಗ್ ತನ್ನ ಕಾಲನ್ನು ಅಡ್ಡ ಇಟ್ಟು ಹೋಗದಂತೆ ತಡೆದಿದ್ದಾನೆ. ಇದರಿಂದ ಯುವತಿ ಆತನಿಂದ ದೂರ ಹೋಗಲು ಸಾಧ್ಯವಾಗದೇ ಅಲ್ಲೆ ಕುಳಿತಿದ್ದಳು. ಇತ್ತ ಸಹ ಪ್ರಯಾಣಿಕರು ನಿದ್ದೆ ಮಾಡುತ್ತಿದ್ದ ಕಾರಣ ಆಕೆಯ ಸಹಾಯಕ್ಕೆ ಯಾರು ಬಂದಿರಲಿಲ್ಲ. ಈ ವೇಳೆ ಯಾವ ಕ್ಯಾಬಿನ್ ಸಿಬ್ಬಂದಿಯೂ ಯುವತಿಗೆ ಕಾಣಲಿಲ್ಲ. ಕೊನೆಗೆ ಸುಮಾರು 15 ನಿಮಿಷದವರೆಗೂ ಆತನ ಕಿರುಕುಳ ನೀಡಿದ್ದಾನೆ. ನಂತರ ಯುವತಿ ಧೈರ್ಯ ಮಾಡಿ ಆತನಿಂದ ಬಿಡಿಸಿಕೊಂಡು ಓಡಿಬಂದು ವಿಮಾನ ಸಿಬ್ಬಂದಿಗೆ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಕ್ಷಣ ಸಿಂಬ್ಬಂದಿ ಮ್ಯಾಂಚೆಸ್ಟರ್ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ವಿಮಾನ ಲ್ಯಾಂಡಿಂಗ್ ಮೊದಲೇ ಬಂದು ಆತನಿಗಾಗಿ ಕಾಯುತ್ತಿದ್ದರು. ನಂತರ ವಿಮಾನದಿಂದ ಇಳಿಯುತ್ತಿದ್ದಂತೆ ಪೊಲೀಸರು ಆತನನ್ನು ವಶ ಪಡಿಸಿಕೊಂಡಿದ್ದರು. ಮೊದಲು ಸಿಂಗ್ ತನ್ನ ಮೇಲೆ ಮಾಡಿದ ಆರೋಪವನ್ನು ನಿರಾಕರಿಸಿದ್ದ. ಆದರೆ ಕೋರ್ಟ್ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದು, ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.